ಕೋಲಾರ – ನಗರದ ದೇವರಾಜ ಅರಸು ಶುಶ್ರೂಷಾ ವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ

ಕೋಲಾರ:- ನಗರದ ದೇವರಾಜ ಅರಸು ಶುಶ್ರೂಷ ವಿದ್ಯಾಲಯದ ವಾರ್ಷಿಕಕ್ರೀಡಾ ಕೂಟವನ್ನು ಶನಿವಾರ ಶ್ರೀ ದೇವರಾಜು ಅರಸು ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.
ದೇವರಾಜಅರಸು ವಿಶ್ವವಿದ್ಯಾಲಯ ಸಲಹೆಗಾರರಾದ ಹನುಮಂತರಾವ್ ಕ್ರೀಡಾಕೂಟವನ್ನು ಉದ್ಘಾಟಿಸಿ, ಪ್ರತಿಯೊಬ್ಬರೂ ಕ್ರೀಡಾ ಸ್ಪೂರ್ತಿಯಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು, ಸೋಲು ಗೆಲುವನ್ನು ಸಮಚಿತ್ತದಿಂದ ಸ್ಪೀಕರಿಸಿ,ದೈಹಿಕವಾಗಿ ಆರೋಗ್ಯವಾಗಿ ಸದೃಢರಾಗಬೇಕೆಂದು ಸಲಹೆ ನೀಡಿದರು.
ಅರಸು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭಾಕರ್ ಮಾತನಾಡಿ, ಕ್ರೀಡೆಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯವಾಗಿದ್ದು ಅದು ನಮ್ಮನ್ನು ಮಾನಸಿಕವಾಗಿ ಮತ್ತುದೈಹಿಕವಾಗಿಸದೃಡವಾಗಿರಿಸುತ್ತದೆ.ಕ್ರೀಡೆಯು ಅಕ ರಕ್ತದೊತ್ತಡ ಮತ್ತು ಮಧÀುಮೇಹದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ತಪ್ಪಿಸುತ್ತದೆ ಹಾಗು ನಮ್ಮ ವೃತ್ತಿಪರಜೀವನ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ನಮಗೆ ಸಹಾಯ ಮಾಡುತ್ತದೆ.
ಹಾಗೆಯೇವಿಧ್ಯಾರ್ಥಿಗಳು ಸೋಲು ಗೆಲುವುಗಳನ್ನು ಒಂದೇಎಂದು ಜೀವನದಲ್ಲಿ ಪರಿಗಣಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಈ ಕಾರ್ಯಕ್ರಮದಲ್ಲಿಕಾಲೇಜಿನ ಎಲ್ಲಾ ಭೋಧಕ, ಬೋದಕೇತರಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯಅಡ್‍ವೈಸರಾದ ಹನುಮಂತರಾವ್ ಬಹುಮಾನಗಳನ್ನು ವಿತರಿಸಿದರು.