ಯಲ್ದೂರಿನ ನ್ಯಾಷನಲ್ ಹೈಸ್ಕೂಲ್ ಪ್ರತಿಭಾ ಪುರಸ್ಕಾರ – ಸನ್ಮಾನ- ಗತವೈಭವವ ಮರಳಿ ಪಡೆಯಲು ಪ್ರಯತ್ನ

ಶ್ರೀನಿವಾಸಪುರ : ತಾಲೂಕಿನ ಯಲ್ದೂರು ಹೋಬಳಿ ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅರ್ಧ ಶತಮಾನಕ್ಕಿಂತ ಹೆಚ್ಚು ವರ್ಷಗಳಿಂದ ಉತ್ತಮ ಗುಣಮಟ್ಟದ ಪ್ರೌಢ ಶಿಕ್ಷಣವನ್ನು ಒದಗಿಸುತ್ತಿರುವ ಯಲ್ದೂರಿನ ನ್ಯಾಷನಲ್ ಹೈಸ್ಕೂಲ್ ತನ್ನ ಗತವೈಭವವನ್ನು ಪಡೆಯಲು ಶಾಲೆಯ ಹಳೆಯ ವಿದ್ಯಾರ್ಥಿಗಳ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ದಿನಾಂಕ /27/08/2023 ಭಾನುವಾರ ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಹಾಗೂ ನೂತನ ಆಡಳಿತ ಮಂಡಳಿಯ ಸನ್ಮಾನ ಸಮಾರಂಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಶಾಲಾ ನಿರ್ವಹಣಾ ಸಮಿತಿಯ ಅಧ್ಯಕ್ಷರು ಹಾಗೂ ವಿಟಿಯು ವಿಶ್ರಾಂತ ಕುಲಪತಿ ಮತ್ತು ಪ್ರಾಧ್ಯಾಪಕರು ಆದ ಡಾ. ಹೆಚ. ಎನ್. ಜಗನ್ನಾಥರೆಡ್ಡಿ ತಿಳಿಸಿದರು. 

 ಅವರು ಪ್ರತಿಭಾ ಪುರಸ್ಕಾರದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ,  ಅಂದಿನ ಕಾರ್ಯಕ್ರಮದಲ್ಲಿ ದಿ. ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ನೂತನ ಅಧ್ಯಕರಾದ ಡಾ. ಹೆಚ್. ಎನ್. ಸುಬ್ರಹ್ಮಣ್ಯಂ, ಗೌರವ ಕಾರ್ಯದರ್ಶಿಗಳಾದ ವಿ. ವೆಂಕಟಶಿವಾರೆಡ್ಢಿ, ಬಿ. ಎಸ್. ಅರುಣ್ ಕುಮಾರ್, ಮುಖ್ಯ  ಅತಿಥಿಗಳಾಗಿ ಶಾಸಕರಾದ ಜಿ. ಕೆ. ವೆಂಕಟಶಿವಾರೆಡ್ಡಿಯವರು ಭಾಗವಹಿಸುತ್ತಿದ್ದು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೋರಿದರು.

 ಈ ಸಂದರ್ಭದಲ್ಲಿ ಶಾಲಾ ಸಮಿತಿಯ ಸದಸ್ಯರಾದ ಕೆ. ಟಿ. ಜಯಣ್ಣ, ರಮೇಶ್ ಬಾಬು, ಎನ್. ಹರಿಕುಮಾರ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಜಿ. ಎನ್. ಕೋದಂಡರಾಮಯ್ಯ, ಸದಸ್ಯ ಕೆ. ಎಲ್. ರಾಜೇಂದ್ರ, ಮಾಜಿ ಸದಸ್ಯ ಯಲ್ದೂರು ಮಣಿ, ಶಾಲಾ ಮುಖ್ಯ ಶಿಕ್ಷಕ ಹೆಚ್.ಸಿ. ಗುರುಲಿಂಗಾರಾಧ್ಯ ನಿವೃತ್ತ ಮುಖ್ಯ ಶಿಕ್ಷಕರಾದ ಕೆ. ಪ್ರಕಾಶಯ್ಯ, ಕೆ. ಪಿ. ಕೃಷ್ಣಪ್ಪ ಇನ್ನೂ ಮುಂತಾದವರು ಹಾಜರಿದ್ದರು.