ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ಲಿ. ಗೆ 2022-23 ನೇ ಸಾಲಿನ “ಸಾಧನಾ ಪ್ರಶಸ್ತಿ”

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ಲಿ, ಉಡುಪಿ. 2022-23 ನೇ ಸಾಲಿನಲ್ಲಿ ಸಂಘವು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇವರಿಂದ ಗುರುತಿಸಲ್ಪಟ್ಟು ದಿನಾಂಕ 19-08-2023 ರಂದು ನಡೆದ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ಉಡುಪಿ ಜಿಲ್ಲಾ ಯೂನಿಯನ್ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರ ಗಣ್ಯ ಉಪಸ್ಥಿತಿಯಲ್ಲಿ ಅಧ್ಯಕ್ಷರಾದ ಶ್ರೀ ಅಲೋಶಿಯಸ್ ಡಿ’ಅಲ್ಮೇಡಾ, ಉಪಾಧ್ಯಕ್ಷರಾದ ಶ್ರೀ ಲೂವಿಸ್ ಲೋಬೋ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಸಂದೀಪ್ ಎ. ಫೆರ್ನಾಂಡೀಸ್ ರವರು ಜಂಟಿಯಾಗಿ “ಸಾಧನಾ ಪ್ರಶಸ್ತಿ” ಯನ್ನು ಸ್ವೀಕರಿಸಿದರು. 1997ನೇ ಇಸವಿಯಲ್ಲಿ ಆರಂಭಗೊಂಡ ಸಂಘವು ಕಳೆದ ಡಿಸೆಂಬರ್ ನಲ್ಲಿ ತನ್ನ ರಜತ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಿ ಕೊಂಡು, ಕಳೆದ 25 ವರ್ಷಗಳಿಂದ ಸತತವಾಗಿ ಲಾಭಗಳಿಸುತ್ತಾ ಬಂದಿದ್ದು, ಈದೀಗ ತನ್ನ ಚೊಚ್ಚಲ ಸಾಧನಾ ಪ್ರಶಸ್ತಿಯನ್ನು ಪಡೆದುಕೊಂಡಿದೆ. 2022-2023ನೇ ಸಾಲಿನ ಅಂತ್ಯಕ್ಕೆ 6,091 ಸದಸ್ಯರು, ರೂ. 1.13 ಕೋಟಿ ಪಾಲು ಬಂಡವಾಳ, ರೂ. 30.19 ಕೋಟಿ ಠೇವಣಿಗಳು, ರೂ. 1.66 ಕೋಟಿ ನಿಧಿಗಳು, ರೂ. 9.10 ಕೋಟಿ ಹೂಡಿಕೆ, ರೂ. 22.23 ಕೋಟಿ ಹೊರಬಾಕಿ ಸಾಲ, ರೂ. 33.00 ಕೋಟಿಯಷ್ಟು ದುಡಿಯುವ ಬಂಡವಾಳವನ್ನು ಹೊಂದಿದ್ದು, ಲೆಕ್ಕ ಪರಿಶೋಧನೆಯಲ್ಲಿ “ಎ” ಶ್ರೇಣಿಯನ್ನು ಪಡೆದುಕೊಂಡು, ಸಾಲ ವಸೂಲಾತಿ ಪ್ರಮಾಣ ಶೇಕಡಾ 96% ಆಗಿರುತ್ತದೆ. 2021-22 ನೇ ಸಾಲಿನ ಅಂತ್ಯಕ್ಕೆ ರೂ. 44.10 ಲಕ್ಷ ಲಾಭಾಂಶವನ್ನು ಗಳಿಸಿ ಶೇಕಡಾ 17% ಡಿವಿಡೆಂಟನ್ನು ನೀಡಿದ್ದ ಸಂಸ್ಥೆ, 2022-23 ನೇ ಸಾಲಿನ ಅಂತ್ಯಕ್ಕೆ ಲಾಭಾಂಶವನ್ನು ದ್ವಿ-ಗುಣ ಅಂದರೆ ರೂ. 83.81 ಲಕ್ಷ ಗಳಿಸಿಕೊಂಡಿದೆ. ಸದಸ್ಯರಿಗೆ ಶೇಕಡಾ 20% ರಷ್ಟು ಡಿವಿಡೆಂಡನ್ನು ವಿತರಿಸಲು ಆಡಳಿತ ಮಂಡಳಿಯು ನಿರ್ಧರಿಸಿದೆ. ಈ ಸಾಧನೆಯನ್ನು ಮಾಡುವಲ್ಲಿ ಸಹಕರಿಸಿದ ನಮ್ಮೆಲ್ಲಾ ನೆಚ್ಚಿನ ಗ್ರಾಹಕರಿಗೂ, ಸಿಬ್ಬಂದಿ ವರ್ಗದವರಿಗೂ ಆಡಳಿತ ಮಂಡಳಿಯೂ ಧನ್ಯವಾದವನ್ನು ತಿಳಿಸಿದೆ.