ಕುಂದಾಪುರ ಚರ್ಚ್ ಮೈದಾನದಲ್ಲಿ  77ನೇ ಸ್ವಾತಂತ್ರ್ಯ ದಿನಾಚರಣೆ-ಪ್ರತಿಭಾವಂತರಿಗೆ ಪುರಸ್ಕಾರ

ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ,  77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯ ಕೇಡೆಟಗಳಿಂದ ಗೌರವ ಸ್ವೀಕರಿಸಿ ಧ್ವಜಾ ರೋಹಣಗೈದು “ನಮ್ಮ ಹಿರಿಯರು ಮಾಡಿದ ತ್ಯಾಗ ಸಾಹಸಗಳ ಬಲಿದಾನದಿಂದ ಇವತ್ತು ನಾವು ಸ್ವಾತಂತ್ರ್ಯದ ಫಲವನ್ನು ಅನುಭವಿಸುತ್ತಿದ್ದೇವೆ. ಅವರ ತ್ಯಾಗ ಬಲಿದಾನಕ್ಕೆ ನಾವು ಗೌರವ ನೀಡಬೇಕು’ ಎಂದು ಅವರು ಶುಭ ಕೋರಿದರು. ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಈ ಸಂದರ್ಭದಲ್ಲಿ ಸಾರೆ ದೇಶಸೆ ಅಚ್ಚಾ ಹಮಾರ ದೇಶ್ ಹೇ ಎಂದು ಯಾವತ್ತೂ ನಾವು ನಮ್ಮ ದೇಶವನ್ನು ಪ್ರೀತಿಸಬೇಕು’ ಎಂದು ಕರೆ ಕೊಟ್ಟರು. ಶುಭ ಕೋರಿದರು. ಈ ಮೊದಲು ಇಂದು ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬವಾದುದರಿಂದ ಕ್ರೈಸ್ತರಿಗೆ ಪವಿತ್ರ ದಿನವಾದರಿಂದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಬಲಿದಾನ ಅರ್ಪಿಸಿ ನಾ ’ನಮಗೆ ಇಂದು ದ್ವೀ ಸಂಭ್ರಮ ಒಂದು ನಮ್ಮ ದೇಶದ ಮಹಾಹಬ್ಬ ಸ್ವಾತಂತ್ರ್ಯ ದಿನ, ದೇಶಕ್ಕೆ ನಾವು ಗೌರವ ಕೊಡುವುದು ನಮ್ಮ ಮಹಾ ಕರ್ತವ್ಯವಾಗಿದೆ. ನಮ್ಮ ದೇಶ ನನಗೆ ಎನು ಮಾಡಿದೆ ಎಂದು ಕೇಳುವ ಬದಲು ನಾವು ದೇಶಕ್ಕಾಗಿ ಎನು ಮಾಡಿದ್ದೆವೆಂದು ಮನಗಂಡು ದೇಶಕ್ಕೆ ಒಳ್ಳೆದು ಮಾಡೋಣ ಅನ್ನುತ್ತಾ ಇದೇ  ಪುಣ್ಯ ದಿನದಂದು ನಮ್ಮ ಮಾಹಾತಾಯಿ ಮೇರಿ ಮಾತೆಗೆ ಜೀವಂತವಾಗಿ ದೇವರು ಸ್ವರ್ಗಕ್ಕೆ ಕರೆಸಿಕೊಂಡ ಹಬ್ಬ, ಮೇರಿ ಮಾತೆ ಯೇಸು ಕ್ರಿಸ್ತರ ಆಪೊಸ್ತಲರ ಮಧ್ಯೆ ಅವಳೂ ಒಬ್ಬಳು, ಯೇಸು ಕ್ರಿಸ್ತರ ಎಲ್ಲಾ ಯೋಜನೆಯಲ್ಲಿ ಅವರು ಪಾತ್ರ ವಹಿಸಿದ್ದಳು” ಎಂದು ತಿಳಿಸಿದರು.

    ಸ್ವಾತಂತ್ರ್ಯ ಆಚರಣೆಯ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಕಥೊಲಿಕ್ ಸಭಾ ಎರ್ಪಡಿಸಿದ ಭಾಷಣ ಸ್ಪರ್ಧೆಯ ವಿಜೇತರನ್ನು ಪುರಸ್ಕರಿಸಲಾಯಿತು.

    ಈ ಸಂದರ್ಭದಲ್ಲಿ ಕಥೊಲಿಕ್ ಸಭಾ  ಕುಂದಾಪುರ ವಲಯದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಘಟಕದ ನಿಕಟಪೂರ್ವ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಕಥೊಲಿಕ್ ಸಭಾದ ಪದಾಧಿಕಾರಿಗಳಾದ ಜೂಲಿಯೆಟ್ ಪಾಯ್ಸ್, ವಿನೋದ್ ಕ್ರಾಸ್ಟೊ,  ಪಾಲನ ಮಂಡಳಿ ಉಪಧ್ಯಾಕ್ಷ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಜೋನ್ ಮಾಸ್ಟರ್, ಇನ್ನಿತರರು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು,  ಕಾರ್ಯದರ್ಶಿ ವಾಲ್ಟರ್ ಡಿಸೋಜಾ ವಂದಿಸಿದರು,  ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ನಿರೂಪಿಸಿದರು.