ಉಪ್ಪುಂದದಲ್ಲಿ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಬ್ರಾಹ್ಮೀ ಸೌಹಾರ್ದ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಕುಂದಾಪುರ ಉಪ್ಪುಂದ ಶಾಖೆ, ರೋಟರಿ ಕುಂದಾಪುರ ದಕ್ಷಿಣ ಸಹಯೋಗದಲ್ಲಿ, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯದ ಸಹಕಾರದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಶಂಕರ ಕಲಾ ಮಂದಿರ ಉಪ್ಪುಂದದಲ್ಲಿ ಜುಲೈ 29ರಂದು ನಡೆಯಿತು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಉದ್ಘಾಟಿಸಿದರು. ಶ್ರೀ ಬ್ರಾಹ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಬ್ರಾಯ ಅಡಿಗರು ಸ್ವಾಗತಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಪ್ರೊ. ಆಡಿ. ನಾಗರಾಜ್ ಎಸ್. ರವರು ಪ್ರಾಸ್ತಾವಿಕ ಭಾಷಣದಲ್ಲಿ ಆಯುರ್ವೇದ ವೈದ್ಯಕೀಯ ಪದ್ಧತಿಯ ಮಹತ್ವ ವಿವರಿಸಿದರು.
ವೇದಿಕೆಯಲ್ಲಿ ಕುಂದಾಪುರ ತಾಲೂಕು ಗ್ರಾಮೀಣ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯದ ಅಧ್ಯಕ್ಷರಾದ ಅರುಣ್ ಶಾನುಭೋಗ್, ಬ್ರಾಹ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ನಾಗೇಶ ಹೆಬ್ಬಾರ್, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ, ಶ್ರೀ ಬ್ರಾಹ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷರಾದ ವಿವೇಕ್ ಯು, ನಿರ್ದೇಶಕರಾದ ರೊ. ಸುಪ್ರೀತ್ ಚಾತ್ರ, ಬ್ರಾಹ್ಮಿ sಸೌಹಾರ್ದ ಕೋ ಆಪರೇಟಿವ್ ಬ್ಯಾಂಕಿನ ಉಪ್ಪುಂದ ಶಾಖೆಯ ವ್ಯವಸ್ಥಾಪಕ ಶ್ರೀಕರ ಪುರಾಣಿಕ ಉಪಸ್ಥಿತರಿದ್ದರು. ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸುರೇಶ್ ಮಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಚಿನ್ ನಕ್ಕತ್ತಾಯ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಕೆ. ರಮಾನಂದ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.
ಆರೋಗ್ಯ ಶಿಬಿರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ವೈದ್ಯರುಗಳಾದ ಆಡಿ. ವಿಜಯೇಂದ್ರ ಭಟ್, ಆಡಿ. ಸಹನಾ ಕಾಮತ್, ಆಡಿ. ವಿದ್ಯಾಬಲ್ಲಾಳ್, ಆಡಿ. ಅರುಣ್ ಕುಮಾರ್, ಆಡಿ. ಚಿತ್ರಲೇಖ, ಆಡಿ. ರಾಧಿಕಾ ಆಗಮಿಸಿದ 200ಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ತಪಾಸಣೆ ನಡೆಸಿದರು. ಅಗತ್ಯವುಳ್ಳವರಿಗೆ ಉಚಿತವಾಗಿ