ಮಣಿಪುರ ಮಹಿಳೆಯರ ವಿವಸ್ತ್ರ ಪ್ರಕರಣ – ಈ ತನಕ 7 ಆರೋಪಿಗಳ ಬಂದನ : ಹಿಂಸಾಚಾರದಲ್ಲಿ -160 ಕ್ಕೂ ಹೆಚ್ಚು ಜನರ ಸಾವು, 256 ಚರ್ಚುಗಳಿಗೆ ಬೆಂಕಿ

ಇಂಫಾಲ, ಜು.25: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೌಬಲ್ ಜಿಲ್ಲೆಯಿಂದ ಸೋಮವಾರ ಸಂಜೆ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು,  ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಂದಿಸಿದಂತಾಗಿದೆ ಎಂದು ತಿಳಿದು ಬಂದಿದೆ.

      ಮೇ 4 ರಂದು ಇಬ್ಬರು ಮೈತೆಯಿ ಬುಡಕಟ್ಟು ಮಹಿಳೆಯರ ವಿವಸ್ತ್ರ ಪ್ರಕರಣದಲ್ಲಿ ಭಾಗವಹಿಸಿದ 14 ಜನರನ್ನು ವೀಡಿಯೊ ಮುಖಾಂತರ ಪೊಲೀಸರು ಮೊದಲು ಗುರುತಿಸಿದ್ದರು.

       ಇಬ್ಬರು ಮಹಿಳೆಯರನ್ನು ಅಪಹರಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಯ 26 ಸೆಕೆಂಡುಗಳ ವಿಡಿಯೋ ಜುಲೈ 19 ರಂದು ಹೊರಬಿದ್ದಿತ್ತು, ವೀಡಿಯೊದಲ್ಲಿ ಕಂಡುಬರುವ ಮಹಿಳೆಯರಲ್ಲಿ ಒಬ್ಬರು ಮಾಜಿ ಸೈನಿಕರ ಪತ್ನಿಯಾಗಿದ್ದು, ಅವರ ಸೈನಿಕ ಪತಿ ಅಸ್ಸಾಂ ರೆಜಿಮೆಂಟ್‌ನಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿದ್ದಾರೆ ಹಾಗೆ ಕಾರ್ಗಿಲ್ ಯುದ್ಧದಲ್ಲಿ ಸಹ ಹೋರಾಡಿದ್ದಾರೆ ಎಂದು ತಿಳಿದು ಬಂದಿದೆ.

       ಕಾಂಗ್‌ಪೊಕ್ಪಿ ಜಿಲ್ಲೆಯ ಸೈಕುಲ್ ಪೊಲೀಸ್ ಠಾಣೆಯಲ್ಲಿ ಒಂದು ತಿಂಗಳ ಹಿಂದೆ ಜೂನ್ 21 ರಂದು ವೀಡಿಯೊಗೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಅದರೆ ವೀಡಿಯೊ ಈಗ ವೈರಲ್ ಆದುದರಿಂದ ಈಗ ಕ್ರಮ ತೆಗೆದುಕೊಳ್ಳಲಾಗಿ. ಮೇ 3 ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗಿನಿಂದ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ, ಜೂನ್ ೧೩ ರಂದೇ 256 ಚರ್ಚುಗಳಿಗೆ ಬೆಂಕಿ ಹಚ್ಚಿದ್ದಾರೆ ಅಥವಾ ಧ್ವಂಸ ಮಾಡಿದ್ದಾರೆಂದು ಟೆಲಿಗ್ರಾಫ್ ವಾರ್ತೆ ಸಂಸ್ಥೆ ಪ್ರಕಟಿಸಿದೆ. ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಮೈತೆಯಿ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಬೆಟ್ಟದ ಜಿಲ್ಲೆಗಳಲ್ಲಿ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಲಾಗಿತ್ತು. ಅದಕ್ಕೆ ಪ್ರತೀಕಾರವಾಗಿ ಕುಕ್ಕಿ ಜನಾಂಗದ ಮೇಲೆ ಮೈತೆಯಿ ಜನಾಂಗ ಅಮಾನವೀಯ ರೀತಿಯಲ್ಲಿ ಹಿಂಸಾಚಾರ ಎಸಗಿದೆ      ಮಣಿಪುರದ ಜನಸಂಖ್ಯೆಯ ಸುಮಾರು 53 ಪ್ರತಿಶತದಷ್ಟಿರುವ ಮೈತೈಗಳು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ, ಆದರೆ ನಾಗಾಗಳು ಮತ್ತು ಕುಕಿಗಳನ್ನು ಒಳಗೊಂಡಿರುವ ಬುಡಕಟ್ಟು ಜನಾಂಗದವರು ಶೇಕಡಾ 40 ರಷ್ಟಿದ್ದಾರೆ ಮತ್ತು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ