ಅಂಪಾರು : ಸಂಜಯ ಗಾಂಧಿ ಪ್ರೌಢಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕ ಉದ್ಘಾಟನೆ

ಅಂಪಾರು: ಜೂನಿಯರ್ ರೆಡ್ ಕ್ರಾಸ್ ಘಟಕ ಉದ್ಘಾಟನೆ. ಅಂಪಾರು ಸಂಜಯ ಗಾಂಧಿ ಪ್ರೌಢಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕ ಉದ್ಘಾಟನೆ ಜರುಗಿತು.ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕಿನ ಅಧ್ಯಕ್ಷರಾದ, ಶ್ರೀ ಜಯಕರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ರೆಡ್ ಕ್ರಾಸ್ ನ ಉಗಮ, ಮಹತ್ವದ ಕುರಿತು ತಿಳಿಸಿದರು.ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಸಂವೇದನಾಶೀಲ ಗುಣಗಳ ಮೌಲ್ಯ ವರ್ಧನೆ ಚಿಕ್ಕವರಿರುವಾಗಲೇ ಮೈ ಗೂಡಿಸಿಕೊಳ್ಳಿ, ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ಜೊತೆಗೆ ಸೇವಾ ಮನೋಭಾವ ಹೊಂದಿರಿ ಎಂದು ಕರೆ ನೀಡಿದರು. ಪ್ರತಿಜ್ಞಾವಿಧಿಯನ್ನು ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಸಂಯೋಜಕರಾದ ಶ್ರೀ.ದಿನಕರ್.ಆರ್.ಶೆಟ್ಟಿಯವರು ಬೋಧಿಸಿದರು.ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಕುರಿತು ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರದ ಕೋಶಾಧಿಕಾರಿ ಶ್ರೀ.ಶಿವರಾಮ ಶೆಟ್ಟಿ, ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಪಾರು ಸಿ.ಎ.ಬ್ಯಾಂಕಿನ ಉಪಾಧ್ಯಕ್ಷರು, ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ಶ್ರೀ ಅಶೋಕ್ ನಾಯ್ಕ್ ವಹಿಸಿದ್ದರು.ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ.ಉದಯಕುಮಾರ್.ಬಿ.ಸ್ವಾಗತಿಸಿದರು.ಶ್ರೀ.ಗೋವಿಂದ ಲಮಾಣಿ ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ರಮಿತ ವಂದಿಸಿದರು.