ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲೂ ಸಬ್ಸಿಡಿ ದರದಲ್ಲಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಟೊಮೊಟೊ ವಿತರಣೆ ಮಾಡಬೇಕೆಂದು:ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ

ಕೋಲಾರ,ಜು.10: ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲೂ ಸಬ್ಸಿಡಿ ದರದಲ್ಲಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಟೊಮೊಟೊ ವಿತರಣೆ ಮಾಡಬೇಕೆಂದು ರೈತ ಸಂಘದಿಂದ ಎ.ಪಿ.ಎಂ.ಸಿ ಕಾರ್ಯದರ್ಶಿ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ನಕಲಿ ಬಿತ್ತನೆ ಬೀಜ ಕೀಟ ನಾಶಕಗಳ ಹಾವಳಿಯಿಂದ ಲಕ್ಷಾಂತರ ರೂ ಬಂಡವಾಳ ಹಾಕಿ ಬೆಳೆದಿರುವ ಟೊಮೊಟೊ ಬೆಳೆ ರೋಗಕ್ಕೆ ತುತ್ತಾಗಿ ಉತ್ತಮ ಪಸಲಿಲ್ಲದೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯನ್ನು ಟೊಮೊಟೊ ಮೀರುಸುತ್ತಿದೆ. ಇದರಿಂದ ರೈತರಿಗೂ ಲಾಭದಾಯಕವಿಲ್ಲ, ಗ್ರಾಹಕರಿಗೂ ಹೊರೆಯನ್ನು ತಪ್ಪಿಸಲು ಸರ್ಕಾರವೇ ಟೊಮೋಟೊ ರೈತರಿಂದ ಖರೀದಿ ಮಾಡಿ ಜನಸಾಮಾನ್ಯರಿಗೆ ನ್ಯಾಯ ಬೆಲೆ ಅಂಗಡಿಗಳ ಮುಖಾಂತರ ಮಾರಾಟ ಮಾಡಬೇಕೆಂಧು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಸರ್ಕಾರವನ್ನು ಒತ್ತಾಯಿಸಿದರು.
ಟೊಮೊಟೊ ದರ ದೇಶದ ಬಹುತೇಕ ಕಡೆ 150 ರೂ ದಾಟಿದೆ ಈ ಬೆಲೆ ನಿಯಂತ್ರಣ ಮಾಡಲು ಸಾಧ್ಯವಿಲ್ಲ, ಬೆಲೆ ಇಳಿಕೆ ಆಗಬೇಕಾದರೆ ಉತ್ತಮ ಬೆಳೆ ಬರಬೇಕು ಈಗಾಗಲೇ ಅಲ್ಪ ಸ್ವಲ್ಪ ಬೆಳೆಯಾಗಿರುವ ತೋಟವನ್ನು ಕಳ್ಳರಿಂದ ರಕ್ಷಣೆ ಮಾಡಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳು ಈ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸಿ ಟೊಮೊಟೊ ವನ್ನು ನ್ಯಾಯಬೆಲೆ ಅಂಗಡಿ, ನಂದಿನಿ ಹಾಲು ಮಾರಾಟ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ಆದೇಶ ನೀಡಬೆಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎ.ಪಿ.ಎಂ.ಸಿ ಕಾರ್ಯದರ್ಶಿ ವಿಜಯಲಕ್ಷ್ಮೀ ರವರು ನಿಮ್ಮ ಮನಿವಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಶೈಲಜ, ರತ್ನಮ್ಮ, ಮಂಜುಳಾ, ರಾಧಮ್ಮ, ಚೌಡಮ್ಮ, ಮುನಿಯಮ್ಮ, ವೆಂಕಟಮ್ಮ, ನಾಗರತ್ನ, ಶೋಭ ಮುಂತಾದವರಿದ್ದರು
.