ಸಂತೆಕಟ್ಟೆಯಲ್ಲಿ ಅಂಡರ್ ಪಾಸ್‌ ಗಾಗಿ ನಿರ್ಮಿಸಿದ ಅಗೆತದಲ್ಲಿ ಮಳೆ ನೀರು ಸೆಳೆದು ರಸ್ತೆ ಕುಸಿತ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಸಂತೆಕಟ್ಟೆಯಲ್ಲಿ ಅಂಡರ್ ಪಾಸ್‌ ಗಾಗಿ ನಿರ್ಮಿಸಿದ ಅಗೆತದಲ್ಲಿ ನೀರು ಸೆಳೆದು, ಅದಕ್ಕೆ ತಡಗೋಡೆ ನಿರ್ಮಿಸುವ ಬದಿಯಲ್ಲಿನ ಸರ್ವಿಸ್‌ ರಸ್ತೆ ಬದಿಯಲ್ಲಿನ ಸರ್ವಿಸ್ ರಸ್ತೆಯ ಭಾಗ ಕುಸಿದು ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಈ ಬಗ್ಗೆ  ಮಾಧ್ಯಮದವರು  ವರದಿ ಪ್ರಕಟಿಸಿ, ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಗಮನ ಸೆಳೆದಿದ್ದರು. ಸಂಸದೆ ಶೋಭಾ ಕರಂದ್ಲಾಜೆ ಅಂಡರ್ ಪಾಸ್‌ ನಿರ್ಮಾಣಕ್ಕಾಗಿ ಅಗೆದಿರುವ ಹೊಂಡವನ್ನು ಮಳೆಗಾಲದಲ್ಲಿ ಅಪಾಯವುಂಟಾಗಬಹುದೆಂದು ಮುಚ್ಚಲು ಆದೇಶಿಸಿದ್ದರು.

  ಹೊಂಡದ ಇಕ್ಕೆಲಗಳಲ್ಲಿ ಕಾಂಕ್ರೀಟಿಕರಣದ ತಡೆ ಗೋಡೆಗಳ ಕಾಮಗಾರಿ ನಡೆಸಲಾಗುತ್ತಿದ್ದು, ಅದು ಸಂಪೂರ್ಣವಾಗದೆ ತಡೆಗೋಡೆ ನಿರ್ಮಾಣದ ಹಂತದಲ್ಲಿದ್ದು ರಸ್ತೆ ಭಾಗ ಕುಸಿಯುತ್ತೀದೆ. ಇದೀಗ ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿ  ಮಾರ್ಪಟ್ಟಿದೆ. ಇನ್ನು ಕಾಮಗಾರಿ ನಡೆಯುತ್ತಿರುವ ಪರ್ಯಾಯ ಮಾರ್ಗ ಕೂಡ ಸರಿಯಾದ ಡಾಂಬರೀಕರಣ ಇಲ್ಲದ ಕಾರಣ ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ.. ಕೋಟ್ಯಾಂತರ ರೂಪಾಯಿ ಇಂತಹ ಕಾಮಗಾರಿ ನಡೆಯುತ್ತಿದ್ದರೂ ಅವೈಜ್ಞಾನಿಕವಾಗಿ ಕೂಡಿದ್ದು, ಅಸಡ್ಡೆಯ ಕಾಮಗಾರಿಯಿಂದ  ರಾಷ್ಟ್ರೀಯ ಪ್ರಾಧಿಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.