ಶಿರ್ವ ಸಂತ ಮೇರಿ ಪ. ಪೂರ್ವ ಕಾಲೇಜ್ :2023ರ ದ್ವಿ. ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಪಡೆದವರಿಗೆ ಅಭಿನಂದನೆ

ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಕುಟುಂಬದ ಪಾತ್ರ ಮಹತ್ತರ”. ” ಮಕ್ಕಳ ಬಗ್ಗೆ ನಾವು ಬಹಳ ಕಾಳಜಿ ವಹಿಸುತ್ತೆವೆ. ಇಂದು ಮಕ್ಕಳನ್ನು ಬೆಳೆಸುವುದು ಒಂದು‌ ಸವಾಲಿನ ಕೆಲಸವಾಗಿದೆ. ನಮ್ಮ ಸಂಸ್ಥೆಯು ಉತ್ತಮ ಉಪನ್ಯಾಸಕ ವೃಂದದ ಸಹಕಾರದೊಂದಿಗೆ ವಿಧ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಿದ್ದು, ಹೆತ್ತವರ ಜೊತೆ ಸೇರಿ ಇನ್ನು ಹೆಚ್ಚು ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ” ಎಂದು‌ ಶಿರ್ವ ಸಂತ ಮೇರಿ ಪ. ಪೂರ್ವ ಕಾಲೇಜಿನ ಸಂಚಾಲಕರಾದ ವಂದನೀಯ ಗುರು ಡಾ. ಲೆಸ್ಲಿ ಸಿ ಡಿಸೋಜರವರು ಹೇಳಿದರು. ಅವರು 2023 ರ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರ ಅಭಿನಂದನಾ ಕಾರ್ಯಕ್ರಮ ಎಕ್ಸಲೆನ್ಸ್ ಡೆ ಮತ್ತು ರಕ್ಷಕ ಶಿಕ್ಷಕ ಸಂಘದ 2023 24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ರು ಶ್ರೀ ಕುದಿ ವಸಂತ ಶೆಟ್ಟಿ ಅವರು ಸಂದೇಶ ನೀಡಿ ” ಮಕ್ಕಳಿಗೆ ಸರಿಯಾದ ಜೀವನ ಕ್ರಮ, ಕೌಟುಂಬಿಕ ಮೌಲ್ಯಗಳು ಆಹಾರ ಪದ್ಧತಿ ಮತ್ತು ಉತ್ತಮ ಮಾರ್ಗದರ್ಶನದ ಅವಶ್ಯಕತೆ ಇದೆ. ಇಂದಿನ ಮಕ್ಕಳು ಹೆತ್ತವರ ಮಾತನ್ನು ಕೇಳುವುದಕ್ಕಿಂತಲೂ ಅವರ ನಡೆ ನುಡಿಯನ್ನು ನೋಡಿ ಕಲಿಯುತ್ತಾರೆ. ಆದ್ದರಿಂದ ತಂದೆ ತಾಯಿ ಮಕ್ಕಳಿಗೆ ಆದರ್ಶರಾಗಿರಬೇಕೆಂದು ತಿಳಿಸಿದರು .ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಯಶಂಕರ ಕೆ ಅವರು ಸ್ವಾಗತಿಸಿ ,ವಿದ್ಯಾರ್ಥಿ ಆಕಾಶ್ ವಂದಿದಸಿದರು. ಬಹುಮಾನಿತರ ಪಟ್ಟಿಯನ್ನು ಕುಮಾರಿ ಅನನ್ಯ ಭಟ್ ವಾಚಿಸಿ, ಕುಮಾರಿ ಚೈತ್ರಿಕ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ನಡೆದ ವಾರ್ಷಿಕ ಮಹಾಸಭೆಯಲ್ಲಿ 2023- 24 ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ನಿರ್ದೇಶಕರಾಗಿ ವಂದನೀಯ ಗುರು ಡಾ. ಲೆಸ್ಲಿ ಸಿ ಡಿಸೋಜ, ಗೌರವಾಧ್ಯಕ್ಷರಾಗಿ ಪ್ರಾಂಶುಪಾಲರಾದ ಶ್ರೀ ಜಯಶಂಕರ್ ಕೆ, ಅಧ್ಯಕ್ಷರಾಗಿ ಶ್ರೀ ಸುಧೀರ್ ಜೂಡ್ ಡಿಸೋಜಾ, ಉಪಾಧ್ಯಕ್ಷರಾಗಿ ಶ್ರೀಮತಿ ಜ್ಯೋತಿ ಡಿಸೋಜಾ, ಖಜಾಂಚಿಯಾಗಿ ಶ್ರೀಮತಿ ಸಾನಿಯಾ, ಕಾರ್ಯದರ್ಶಿಯಾಗಿ ಮರಿಯ ಜೆಸಿಂತಾ ಫ಼ುರ್ಟಾಡೊ ಮತ್ತು ಹೊಸ ಕಾರ್ಯಕಾರಿ ಮಂಡಳಿಯನ್ನು ಆಯ್ಕೆ ಮಾಡಲಾಯಿತು.ಈ ಸಂಧರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಕಾಲೇಜಿನಲ್ಲಿ ಹಿರಿಯ ಇತಿಹಾಸ ಉಪನ್ಯಾಸಕಿ ಶ್ರೀಮತಿ ಮರಿಯ ಜೆಸಿಂತಾ ಪುರ್ಟಾಡೊ , ನೂತನವಾಗಿ‌ ಆಯ್ಕೆಯಾದ ವಿಧ್ಯಾರ್ಥಿ ನಾಯಕ ಪವನ್ ಹಾಗೂ ಉಪ ನಾಯಕ ಕನಿಷ್ಕ್ ಪೂಜಾರಿಯನ್ನು ಅಭಿನಂದಿಸಲಾಯಿತು.