ಮರೆತ ದಾರಿಗಳ ಹರಿಕಾರ ಶ್ರೀರಾಮರೆಡ್ಡಿ ಕೃತಿ ಬಿಡುಗಡೆ ಹಾಗೂ ಭವಿಷ್ಯದ ಮಕ್ಕಳ ರಂಗಭೂಮಿ, ಸವಾಲುಗಳು, ಸಾಧ್ಯತೆಗಳು ಎಂಬ ವಿಷಯ ಕುರಿತು ವಿಚಾರ ಸಂಕಿರಣ

ಶ್ರೀನಿವಾಸಪುರ: ಪಟ್ಟಣದ ಭೈರವೇಶ್ವರ ವಿದ್ಯಾನಿಕೇತನದ ಸಭಾಂಗಣದಲ್ಲಿ ಜೂ.23 ರಂದು ಬೆಳಿಗ್ಗೆ 11 ಗಂಟೆಗೆ ಮರೆತ ದಾರಿಗಳ ಹರಿಕಾರ ಶ್ರೀರಾಮರೆಡ್ಡಿ ಕೃತಿ ಬಿಡುಗಡೆ ಹಾಗೂ ಭವಿಷ್ಯದ ಮಕ್ಕಳ ರಂಗಭೂಮಿ, ಸವಾಲುಗಳು, ಸಾಧ್ಯತೆಗಳು ಎಂಬ ವಿಷಯ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ಪಟ್ಟಣದ ಭೈರವೇಶ್ವರ ವಿದ್ಯಾನಿಕೇತನದಲ್ಲಿ ಕೋಲಾರದ ಕೃಷಿ ಸಂಸ್ಕøತಿ ಕೇಂದ್ರದ ವತಿಯಿಂದ ಬುಧವಾರ ಏರ್ಪಡಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ರಂಗಭೂಮಿ ಕಲಾವಿದೆ ಡಾ. ವಿಜಯ, ಶಿಕ್ಷಣ ತಜ್ಞ ಕೋಡಿ ರಂಗಪ್ಪ ಕೃತಿ ಬಿಡುಗಡೆ ಮಾಡುವರು. ಕೃತಿ ಕುರಿತು ನಾನು ಮಾತನಾಡುತ್ತೇನೆ ಎಂದು ಹೇಳಿದರು.
ಸಂಸ್ಥೆ ಮಹಾ ಪೋಷಕ ಡಿ.ಎಲ್.ಸದಾಶಿವರೆಡ್ಡಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮುಖ್ಯ ಆಡಳಿತಾಧಿಕಾರಿ ಡಾ. ಎನ್.ಶಿವರಾಮರೆಡ್ಡಿ, ಚಲನಚಿತ್ರ ನಿರ್ದೇಶಕ ಬಿ.ಸುರೇಶ್, ವಲಯ ಅರಣ್ಯಾಧಿಕಾರಿ ಮಹೇಶ್ ಕಾಡೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಪ್ರಗತಿಪರ ಚಿಂತಕ ಡಾ. ಜಿ.ಶಿವಪ್ಪ ಅರಿವು, ಲೇಖಕ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.
ಭೈರವೇಶ್ವರ ವಿದ್ಯಾ ಸಂಸ್ಥೆಗಳ ಸಮೂಹ ಹಾಗೂ ಆಡಳಿತ ಮಂಡಳಿ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ, ಮಧ್ಯಾಹ್ನ 2.30ಕ್ಕೆ ಭವಿಷ್ಯದ ಮಕ್ಕಳ ರಂಗಭೂಮಿ, ಸವಾಲುಗಳು ಮತ್ತು ಸಾಧ್ಯತೆಗಳು ಎಂಬ ವಿಷಯ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಹೇಳಿದರು.
ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ. ಎನ್.ಶಿವರಾಮರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಶಿಕ್ಷಣ ತಜ್ಞ ಸಂತೋಷ್ ಕವಲಗಿ ಕಾರ್ಯಕ್ರಮ ಉದ್ಘಾಟಿಸುವರು. ಸೀತಿ ಬಿಜಿಎಸ್ ಶಾಲೆ ಪ್ರಾಂಶುಪಾಲ ಸಿ.ಬೈರಪ್ಪ, ಸಾಹಿತಿಗಳಾದ ಕೇಶವ ಮಳಗಿ, ಸ.ರಘುನಾಥ, ಕೋಟಿಗಾನಹಳ್ಳಿ ರಾಮಯ್ಯ, ಶ್ರೀಪಾದ ಭಟ್, ಎಚ್.ನರಸಿಂಹಯ್ಯ ಭಾಗವಹಿಸುವರು ಎಂದು ಹೇಳಿದರು.
ಪ್ರಾಂಶುಪಾಲ ಗಂಗಾಧರ ಗೌಡ, ಮುಖ್ಯ ಶಿಕ್ಷಕ ವೆಂಕಟರಮಣಾರೆಡ್ಡಿ, ಕೃಷಿ ಸಂಸ್ಕøತಿ ಕೇಂದ್ರದ ಮುಖ್ಯಸ್ಥ ಬಿಸನಹಳ್ಳಿ ಬೈಚೇಗೌಡ ಇದ್ದರು.