ಮೂಡ್ಲಕಟ್ಟೆ ಎಂಐಟಿಕೆ ಎಂ.ಬಿ.ಎ ವಿಭಾಗದ ಯುವ-2023

ಎಂಐಟಿ ಮೂಡ್ಲಕಟ್ಟೆ ಕುಂದಾಪುರ ಇಲ್ಲಿಯ ಎಂ.ಬಿ.ಎ ವಿಭಾಗವು ಯುವ-2023 ರಾಜ್ಯಮಟ್ಟದ ಅಂತರಕಾಲೇಜು ಮ್ಯಾನೇಜ್‍ಮೆಂಟ್ ಮತ್ತು ಸಾಂಸ್ಕøತಿಕ ಹಬ್ಬವನ್ನು ದಿನಾಂಕ 25 ಮೇ 2023ರಂದು ಕಾಲೇಜಿನ ಆವರಣದಲ್ಲಿ ನಡೆಸುತ್ತಿದೆ. ಆಹ್ವಾನಿತ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ತಮ್ಮ ವ್ಯಾವಹಾರಿಕ ಮತ್ತು ಸಾಂಸ್ಕøತಿಕ ಕೌಶಲ್ಯಗಳನ್ನು ಪ್ರದರ್ಶಿಸಲು ಹಾಗೂ ಸ್ಪರ್ಧಾತ್ಮಕ ಮನೋಭಾವನೆಯನ್ನು ಉತ್ತೇಜಿಸಲು “ಯುವ” ಒಂದು ಉತ್ತಮ ವೇದಿಕೆಯಾಗಲಿದೆ. ಉಡಾನ್ (ಬಿಸಿನೆಸ್ ಪ್ಲಾನ್) ಆ್ಯಡ್‍ಮ್ಯಾಡ್, ಚದುರಂಗ (ಬಿಸಿನೆಸ್ ಕ್ವಿಜ್), 100 ಕಾಫಂಡ್ ಹಾಗೂ ಹ್ಯಾಷ್ ಟ್ಯಾಗ್ ಸ್ಪರ್ಧೆಗಳು ವ್ಯವಹಾರ ಚತುರತೆಯನ್ನು ಉತ್ತೇಜಿಸಿದರೆ, “ಯುವ ಪರಂಪರಾ” ಇದು ಸಂಪ್ರದಾಯಕವಾದ ಸಾಂಸ್ಕøತಿಕ ವೈಭೋಗದ ಮೇಲೆ ಬೆಳಕು ಚೆಲ್ಲಲಿದೆ. ನೃತ್ಯ, ಹಾಡುಗಾರಿಕೆ, ಮೈಮ್, ನಾಟಕ ಮತ್ತು ಪ್ಯಾಷನ್ ಶೋ ಸ್ಪರ್ಧೆಗಳು ಸಾಂಪ್ರದಾಯಿಕವಾಗಿ ಮೂಡಿಬರಲಿದೆ. ಈ ಕಾರ್ಯಕ್ರಮಕ್ಕೆ ಹಲವಾರು ತಂಡಗಳು ತಯಾರಿಯಲಿದ್ದು ಭಾಗವಹಿಸುವ ನಿರೀಕ್ಷೆಯಲ್ಲಿದೆ.

ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಡಾ. ಭಾಸ್ಕರ್ ಶೆಟ್ಟಿ ಎಸ್, ಪ್ರಾಂಶುಪಾಲರು ಡಾ. ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು, ಉಡುಪಿ ಇವರು ಆಗಮಿಸಲಿದ್ದಾರೆ. ಸಂಜೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಶ್ರೀ ಎಚ್. ಕೆ. ಗಂಗಾಧರ್ ಡಿಜಿಎಂ ಮತ್ತು ಮುಖ್ಯ ಕಲಿಕಾ ಅಧಿಕಾರಿ, ಕೆನರಾ ಬ್ಯಾಂಕ್ ಇವರು ಆಗಮಿಸಲಿದ್ದಾರೆ. ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಐಎಂಜೆ ವಿದ್ಯಾಸಂಸ್ಥೆಗಳ ಚೇರ್‍ಮೆನ್‍ರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿಯವರು ವಹಿಸಲಿದ್ದಾರೆ.