ಶ್ರೀನಿವಾಸಪುರ 2 : ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಉತ್ತೇಜಿಸಿ , ಹವಾಮಾನ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ವ್ಯಕ್ತಿಗಳನ್ನು ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ಮೇರಾ ಸ್ವಚ್ಚ ಶೆಹರ್ ಮೆಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಚ ಭಾರತ್ ಮಿಷನ್ ನಗರ -2.0 ಯೋಜೆಯಡಿ ಹೆಚ್ಚಿನ ರೀತಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪರಿಣಾಮ ಬೀರುವ ಅಭಿಯಾನವನ್ನು ಪ್ರಾರಂಭಿಸಿದ್ದು, ಪ್ಲಾಸ್ಟಿಕ್ ಬ್ಯಾಗ್ ಸೇರಿದಂತೆ ಆಟಿಕೆ ವಸ್ತುಗಳು , ಬಳಸಿದ ಬಟ್ಟೆ , ದಿನ ಪತ್ರಿಕೆಗಳು, ಹಳೆಯ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂತಹ 6 ಬಗೆಯ ನವೀಕರಿಸಿ ಮರುಬಳಸ ಬಹುದಾದಂತಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ದತಿಗಳನ್ನು ಆಳವಡಿಸಿಕೊಳ್ಳುವ ಮೂಲಕ ಪರಸಿರವನ್ನು ರಕ್ಷಿಸುವುದು ಲೈಫ್ ಮಿಷನ್‍ನ ಮುಖ್ಯ ಉದ್ದೇಶವಾಗಿರುತ್ತದೆ ಎಂದರು.
ಇದೇ ತಿಂಗಳು 20 ರಿಂದ ಜೂನ್ 5 ರತನಕ ಮೇರಾ ಸ್ವಚ್ಚ ಶಹರ್ ಯೋಜನೆಯ ನನ್ನ ಲೈಫ್ ನನ್ನ ಸ್ವಚ್ಚ ನಗರ ಕಾರ್ಯಕ್ರಮದಡಿ ತ್ಯಾಜ್ಯ ನಿರ್ವಹಣೆಯ ತತ್ವಗಳನ್ನು ಕಡಿಮೆಗೊಳಿಸುವುದು, ಮರುಬಳಕೆ, ಪುನರ್‍ಬಳಕೆ, (ಆರ್‍ಆರ್‍ಆರ್) ಕೇಂದ್ರಗಳನ್ನು ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಆಯ್ಕೆ ಮಾಡಿ 6 ವಿವಿಧ ಬಗೆಯ ತ್ಯಾಜ್ಯವನ್ನು ನಿರ್ವಹಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು.
ಮೇರಾ ಸ್ವಚ್ಚ ಶೆಹರ್ ಯೋಜನೆ ಅಡಿಯಲ್ಲಿ ಆರ್‍ಆರ್‍ಆರ್ ಕೇಂದ್ರಗಳನ್ನು ಪಟ್ಟಣದ ಪುರಸಭೆ ವ್ಯಾಪ್ತಿಯ ಸಂತೇ ಮೈದಾನ, ಪಂಪ್ ಹೌಸ್ ಮತ್ತು ಮುಸಾಫೀರ್ ಖಾನ್ ವಾಣಿಜ್ಯ ಸಂಕೀರ್ಣದಲ್ಲಿ ಕೇಂದ್ರಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರಗಳನ್ನು ಸಾರ್ವಜನಿಕರು ಪ್ರತಿ ದಿನ ಬೆಳಗ್ಗೆ 6:30 ರಿಂದ ಮಧ್ಯಾಹ್ನ 1:00 ಗಂಟೆ ವರೆಗೂ ಸದುಪಯೋಗ ಪಡಿಸಿಕೊಂಡು ಮೇರಿ ಲೈಫ್ ಮೇರಾ ಸ್ವಚ್ಚ ಶೆಹರ್ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಹೆಚ್ಚಿನ ಮಾಹಿತಿಗಾಗಿ ಪುರಸಭಾ ಕಚೇರಿಯ ಆರೋಗ್ಯ ಶಾಖೆಯಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದರು.
ಸ್ವಚ್ಚಭಾರತ್ ರಾಯಬಾರಿ ಮಾಯಬಾಲಚಂದ್ರ ಮಾತನಾಡಿ ಈ ಯೋಜನೆ ಅಡಿಯಲ್ಲಿ ಬುದ್ದಿಹೀನ ಬಳಕೆಯನ್ನು ಬುದ್ದಿಪೂರ್ವಕ ಬಳಕೆಯೊಂದಿಗೆ ಬದಲಿಸುವ ಗುರಿಯನ್ನು ಹೊಂದಿದೆ ಮತ್ತು ವ್ಯಕ್ತಿಗಳು ಮತ್ತು ಸಮುದಾಯಗಳು ತಮ್ಮ ದೈನಂದಿನ ಜೀವನದಲ್ಲಿ ಹವಾಮಾನ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸುವುದೇ ಈ ಅಭಿಯಾನದ ಮೂಲ ಉದ್ದೇಶ . ಕೋವಿಡ್ ಸಮಯದಲ್ಲಿ ಪುರಸಭೆ ವತಿಯಿಂದ ಸ್ವಚ್ಚಾಭಾರತ್ ಕಾರ್ಯಕ್ರಮದಲ್ಲೂ ಪಟ್ಟಣದಲ್ಲಿ ಜಾಥ ಹಮ್ಮಿಕೊಂಡು ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲಾಗಿತ್ತು ಎಂದರು.
ಪುರಸಭೆ ಆರೋಗ್ಯಾಧಿಕಾರಿ ಕೆ.ಜಿ.ರಮೇಶ್, ವ್ಯವಸ್ಥಾಪಕ ನವೀನ್‍ಚಂದ್ರ ಇದ್ದರು.
17, ಎಸ್‍ವಿಪುರ್ 2 : ಪಟ್ಟಣದ ಪುರಸಭೆ ಕಚೇರಿಯಲ್ಲಿ ಮೇರಾ ಸ್ವಚ್ಚ ಶೆಹರ್ ಮೆಗಾ ಅಭಿಯಾನಕ್ಕೆ ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್ ಚಾಲನೆ ನೀಡಿ ಮಾತನಾಡಿದರು.