ಮೋಚಾ ಚಂಡಮಾರುತ ಅಪ್ಪಳಿಕೆ, ಇಂದು ರಾತ್ರಿ ತೀವ್ರ ಸ್ವರೂಪ ಪಡೆಯಲಿದೆ – ಕರ್ನಾಟಕದಲ್ಲಿ ಮಳೆ ಬರುವ ಸಾಧ್ಯತೆ

ಭಾರತೀಯ ಹವಾಮಾನ ಇಲಾಖೆ (IMD) ಮೇ 6 ರಿಂದ ಬಂಗಾಳ ಕೊಲ್ಲಿಯಲ್ಲಿ (BOB) ರೂಪುಗೊಳ್ಳುವ ಸಂಭಾವ್ಯ ಸೈಕ್ಲೋನಿಕ್ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಿದೆ. ಮೇ ತಿಂಗಳಲ್ಲಿ, BOB (ಬಂಗಾಳ ಕೊಲ್ಲಿ) ಸಾಮಾನ್ಯವಾಗಿ ಹಲವಾರು ಉಷ್ಣವಲಯದ ಚಂಡಮಾರುತಗಳನ್ನು ತರುತ್ತದೆ. ಕೆಲವು ವ್ಯಾಪಕ ಹಾನಿ ಮತ್ತು ನಷ್ಟವನ್ನು ಉಂಟುಮಾಡುತ್ತವೆ. IMD ಮತ್ತೊಮ್ಮೆ ಅಂತಹ ಘಟನೆಯ ಮುನ್ಸೂಚನೆ ನೀಡಿದ್ದ ‘ಮೋಚಾ’ ಚಂಡಮಾರುತ ಇಂದು ತೀವ್ರ ಸ್ವರೂಪವನ್ನು ಪಡೆದುಕೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದಾಗಿ ಹಲವು ರಾಜ್ಯಗಳಲ್ಲಿ ತೀವ್ರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ. ಭಾರತೀಯ ಹವಾಮಾನ ಇಲಾಖೆ ಮೋಚಾ ಚಂಡಮಾರುತದ ಬಗ್ಗೆ ಇತ್ತೀಚಿನ ನವೀಕರಣವನ್ನು ಬಿಡುಗಡೆ ಮಾಡಿದೆ.

ಚಂಡಮಾರುತದ ಪರಿಣಾಮ ಹಲವು ರಾಜ್ಯಗಳಲ್ಲಿ ಕಂಡುಬರಲಿದ್ದು, ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಚಂಡಮಾರುತ ಒಡಿಶಾ, ಬಂಗಾಳ ಮತ್ತು ಅಂಡಮಾನ್-ನಿಕೋಬಾರ್ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಆದ್ದರಿಂದ ಇಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಚಂಡಮಾರುತ ಪರಿಣಾಮ ಇಂದು ಭಾರೀ ಮಳೆಯಾಗುವ ಸಾಧ್ಯತೆ ದಟ್ಟವಾಗಿದ್ದು,
ಬಾಂಗ್ಲಾದೇಶ- ಮ್ಯಾನ್ಮಾರ್ ಗಡಿಯತ್ತ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ಮಧ್ಯಾಹ್ನ ಸುಮಾರಿಗೆ ಆಗ್ನೇಯ ದಿಕ್ಕಿನ ಮಧ್ಯ ಬಂಗಾಳ ಕೊಲ್ಲಿಯ ಮೇಲೆ, ಪೋರ್ಟ್‌ಬ್ಲೇರ್‌ನ ಪಶ್ಚಿಮ-ವಾಯುವ್ಯಕ್ಕೆ ೫೨೦ ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದೆ.

ಇನ್ನೂ, ಮೋಚಾ ಚಂಡಮಾರುತದ ಪರಿಣಾಮ ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು ಮಿಜೋರಾಂನಲ್ಲಿ ಶನಿವಾರದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನಾಗಾಲ್ಯಾಂಡ್, ಮಣಿಪುರ ಮತ್ತು ದಕ್ಷಿಣ ಅಸ್ಸಾಂನಲ್ಲಿ ಭಾನುವಾರ ಮಳೆಯಾಗಬಹುದು.

ಎಚ್ಚರಿಕೆ: ಮತ್ತೊಂದೆಡೆ, ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಎಂಟು ತಂಡಗಳನ್ನು ನಿಯೋಜಿಸಿದ್ದು, ೨೦೦ ಕೋಸ್ಟ್ ಗಾರ್ಡ್‌ಗಳನ್ನು ಸಜ್ಜುಗೊಳಿಸಿದೆ. ಮೀನುಗಾರರು, ಹಡಗುಗಳು, ದೋಣಿಗಳು ಮತ್ತು ಟ್ರಾಲರ್‌ಗಳು ಭಾನುವಾರದವರೆಗೆ ಮಧ್ಯ ಮತ್ತು ಈಶಾನ್ಯ ಬಂಗಾಳ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರಕ್ಕೆ ಹೋಗದಂತೆ ಇಲಾಖೆ ಎಚ್ಚರಿಸಿದೆ.

ಮಧ್ಯ ಬಂಗಾಳ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರದಲ್ಲಿ ನೌಕಾಯಾನ ಮಾಡುವವರಿಗೆ ಕರಾವಳಿಗೆ ಮರಳಲು ಸೂಚಿಸಲಾಗಿದೆ.

ಮೋಚಾ ಚಂಡಮಾರುತವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತೀಯ ಹವಾಮಾನ ಇಲಾಖೆ, “ಭಾನುವಾರದ ವೇಳೆಗೆ ಚಂಡಮಾರುತ ಕ್ರಮೇಣ ತೀವ್ರಗೊಳ್ಳಲಿದೆ. ಬಾಂಗ್ಲಾ- ಮಯನ್ಮಾರ್ ಗಡಿಯಲ್ಲಿ ಭೂಕುಸಿತ ಉಂಟು ಮಾಡುವ ಸಾಧ್ಯತೆ ಇದ್ದು, ಗಂಟೆಗೆ 150-160 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ” ಎಂದು ಹೇಳಿದೆ.

ಇದರ ಪರಿಣಾಮ ಅಂಡಮಾನ್ ಮತ್ತು ನಿಕೋಬಾರ್, ತ್ರಿಪುರ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ, ದಕ್ಷೀಣ ಆಸ್ಸಾಂನಲ್ಲಿ ರವಿವಾರದ ವರೆಗೂ ಮಳೆಯಾಗಲಿದೆ. ಕೇರಳ, ಒಡಿಶಾ ಮತ್ತು ಕರ್ನಾಟದಲ್ಲೂ ಗುಡುಗು ಸಿಡಿಲಿನಿಂದ ಕೂಡಿದ ಮಳಯಾಗಲಿದೆ. ಎಂದು ಎಚ್ಚರಿಕೆ ನೀಡಿದೆ.