ಶ್ರೀನಿವಾಸಪುರ: ಮತದಾರರು ಶಾಂತಿಯುತವಾಗಿ ಮತದಾನ ಮಾಡಬೇಕು : ಶಾಸಕ ಕೆ.ಆರ್.ರಮೇಶ್ ಕುಮಾರ್

ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮದಲ್ಲಿ ಸೋಮವಾರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ ಬಳಿಕ ಮಾತನಾಡಿ, ನಾನು ಕ್ಷೇತ್ರದ ಪ್ರಗತಿಗೆ ಪಕ್ಷಾತೀತವಾಗಿ ಶ್ರಮಿಸಿದ್ದೇನೆ. ಯಾವುದೇ ಭೇದ ಭಾವ ಮಾಡದೆ ಸಕರ್ಾರದ ಸೌಲಭ್ಯ ವಿತರಿಸಿದ್ದೇನೆ ಎಂದು ಹೇಳಿದರು.
    ಹಿಂದೆ ಕ್ಷೇತ್ರದಲ್ಲಿ 1800 ಅಡಿ ಕೊಳವೆ ಬಾವಿ ಕೊರೆದರೂ ನೀಡು ಸಿಗುತ್ತಿರಲಿಲ್ಲ. ಈಗ ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಿದ ಪರಿಣಾಮವಾಗಿ ಅಂತರ್ಜಲ ವೃದ್ಧಿಗೊಂಡಿದೆ. 600 ಅಡಿಯಲ್ಲೇ ನೀರು ಸಿಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ನೀಡುವ ಬಡ್ಡಿರಹಿತ ಸಾಲದ ಮೊತ್ತವನ್ನು ರೂ.50 ಸಾವಿರದಿಂದ ರೂ.1 ಲಕ್ಷಕ್ಕೆ ಹೆಚ್ಚಿಸಲಾಗುವುದು. ಅಕ್ಕಿ ನೀಡುವ ಪ್ರಮಾಣ 10 ಕೆಜಿಗೆ ಹೆಚ್ಚಿಸಲಾಗವುದು. ಪ್ರತಿ ಕುಟುಂಬದ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಗ್ಯಾಸ್ ಸಲಿಂಡರ್ ಬೆಲೆಯನ್ನು ಅರ್ಧಕ್ಕೆ ಇಳಿಸಲಾಗುವುದು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
  ಕ್ಷೇತ್ರದ ಜನರ ಸೇವೆ ಮಾಡುವ ಉದ್ದೇಶದಿಂದ ಮತ್ತೆ ಚುನಾವಣೆಗೆ ಸ್ಪಧರ್ಿಸಿದ್ದೇನೆ. ನೀವು ಆಶೀವರ್ಾದ ಮಾಡಿ ವಿಧಾನ ಸಭೆಗೆ ಕಳಿಸಿಕೊಟ್ಟರೆ, ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ. ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
  ಪಿಎಲ್ಡಿ ಬ್ಯಾಂಕ್ ಅದ್ಯಕ್ಷ ದಿಂಬಾಲ ಅಶೋಕ್, ಮುಖಂಡರಾದ ಕೆ.ಕೆ.ಮಂಜು, ನಾಗರತ್ನಮ್ಮ ಮಂಜುನಾಥರೆಡ್ಡಿ, ಶಾಮಲಾ ರಮೇಶ್, ರಮೇಶ್ ಬಾಬು, ಎಸ್.ವಿ.ಮಂಜುನಾಥರೆಡ್ಡಿ, ಪ್ರಸಾದ್, ಎ.ಸಿ.ಮಂಜುನಾಥರೆಡ್ಡಿ, ಹನುಮಂತರೆಡ್ಡಿ, ಶ್ರೀನಿವಾಸ್, ಹರ್ಷ ಇದ್ದರು.
  ಬೈಕ್ ರ್ಯಾಲಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಬೈಕ್ ರ್ಯಾಲಿ ಏರ್ಪಡಿಸಿದ್ದವು. ಜೆಡಿಎಸ್ ಅಭ್ಯಥರ್ಿ ಜಿ.ಕೆ.ವೆಂಕಟಶಿವಾರೆಡ್ಡಿ, ಎಎಪಿ ಅಭ್ಯಥರ್ಿ ಡಾ. ವೈ.ವಿ.ವೆಂಕಟಾಚಲ ಹಾಗೂ ಬಿಜೆಪಿ ಅಭ್ಯಥರ್ಿ ಜಿ.ಆರ್.ಶ್ರೀನಿವಾಸರೆಡ್ಡಿ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.