ಸಂವಿಧಾನ ಹಾಗೂ ದಲಿತ ವಿರೋಧಿ ಕೊತ್ತೂರು ಮಂಜುನಾಥ ರನ್ನು ಸೋಲಿಸಿ ಮನೆಗೆ ಕಳುಹಿಸಿ ; ಬಾಲಾಜಿ ಚನ್ನಯ್ಯ

ಕೋಲಾರ ಏಪ್ರಿಲ್ 26 : ಸುಳ್ಳು ಜಾತಿ ಪ್ರಮಾಣಪತ್ರದ ಪ್ರಕರಣದಲ್ಲಿ ಜೈಲಿನಲ್ಲಿರಬೇಕಾಗಿದ್ದ ಕೊತ್ತೂರು ಮಂಜುನಾಥ್‍ಗೆ ಕೋಲಾರ ವಿಧಾನಸಭಾ ಕ್ಷೇತ್ರದ ಟಿಕೇಟ್‍ನ್ನು ಕಾಂಗ್ರೆಸ್ ಪಕ್ಷವು ನೀಡಿರುತ್ತದೆ. ಸುಳ್ಳು ಜಾತಿ ಪ್ರಮಾಣ ಪತ್ರವನ್ನು ನೀಡಿ ಶಾಸಕನಾಗಿ ಐದು ವರ್ಷಗಳ ಅಧಿಕಾರವನ್ನು ನಡೆಸಿ ದಲಿತರ ಮೀಸಲಾತಿಯನ್ನು ಕಿತ್ತುಕೊಂಡ ಕೊತ್ತೂರು ಮಂಜುನಾಥ್ ರವರಿಗೆ ಕ್ಷೇತ್ರದ ಜನತೆ 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠವನ್ನು ಕಲಿಸುವಂತೆ ಬಾಲಾಜಿ ಚನ್ನಯ್ಯ ಆಗ್ರಹಿಸಿರುತ್ತಾರೆ.
ಪತ್ರಿಕಾಗೋಷ್ಠಿ ನಡೆಸಿದ ಇವರು ಕೊತ್ತೂರು ಮಂಜುನಾಥ್ ಹಿಂದುಳಿದ ವರ್ಗಗಳ ಪ್ರವರ್ಗ-1 ಬೈರಾಗಿ ಜಾತಿಗೆ ಸೇರಿದವರಾಗಿದ್ದು, ಇವರು ಪರಿಶಿಷ್ಟ ಜಾತಿಯ ಬುಡ್ಗ ಜಂಗಮ ಜಾತಿಗೆ ಸೇರಿದವನೆಂದು ಅಂದಿನ ತಹಶೀಲ್ದಾರ್ ಜಯಮಾದವ ರವರಿಗೆ ಲಂಚ ನೀಡಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದು ಶಾಸಕರಾಗಿರುತ್ತಾರೆ. ಇವರು ದಲಿತರನ್ನು ತನ್ನ ಬೆಲೆ ಬಾಳುವ ಲೇಲೆಕರ್ ಶೂಗೆ ಹೋಲಿಸಿ ಅವಹೇಳನ ಮಾಡಿ ಅವಮಾನಿಸಿರುತ್ತಾರೆ. ಜಿಲ್ಲೆಯ ಪ್ರಭಾವಿ ಮುಖಂಡರಾದ ದಲಿತ ಜನಾಂಗದ ಕೆ.ಹೆಚ್.ಮುನಿಯಪ್ಪನವರನ್ನು ಚರಂಡಿಗೆ ಹೋಲಿಕೆ ಮಾಡಿ ಹೀಯಾಳಿಸಿರುತ್ತಾರೆ. ಆಗ ಇದಕ್ಕೆ ಪ್ರತಿ ಉತ್ತರವಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿದಂತಹ ಕೆ.ಹೆಚ್.ಎಂ. ರವರು ಈತನು ಮುಳಬಾಗಿಲು ಕ್ಷೇತ್ರದಲ್ಲಿ ಸಾವಿರಾರು ಮನೆಗಳನ್ನು ಹಾಳು ಮಾಡಿರುವುದಾಗಿ ಸಾರಿರುತ್ತಾರೆ. ಇವರ ವಿರುದ್ಧ ಅಂದಿನ ಕಾಂಗ್ರೆಸ್ ಮುಖಂಡರುಗಳು ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸಿದವರು. ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿರುವುದು ವಿಪರ್ಯಾಸವೆಂದು ಹಾಗೂ ಇವರ ವಿರುದ್ಧವಾಗಿ ಪ್ರತಿಭಟಿಸಿದವರು ಇಂದು ಇವರ ಪರವಾಗಿ ಪ್ರಚಾರ ಮಾಡುತ್ತಿರುವುದು ಇವರಿಗೆ ಮಾನ ಮರ್ಯಾದೆ ಇಲ್ಲವೆ ಎಂದಿದ್ದಾರೆ.
ಕೋಲಾರ ಕ್ಷೇತ್ರದಲ್ಲಿ ಸ್ಥಳೀಯ ಟಿಕೇಟ್ ಆಕಾಂಕ್ಷಿಗಳಾದ ವಿ.ಆರ್.ಸುದರ್ಶನ್, ಎಲ್.ಎ. ಮಂಜುನಾಥ್, ಊರುಬಾಗಿಲು ಶ್ರೀನಿವಾಸ್, ಬ್ಯಾಲಹಳ್ಳಿ ಗೋವಿಂದಗೌಡ, ಜಯರಾಮ್ (ಜೆಕೆ) ರಂತಹ ಎಲ್ಲಾ ವಿದದಲ್ಲೂ ಸಮರ್ಥರಾಗಿರುವವರನ್ನು ಬಿಟ್ಟು ಹೊರಗಿನ ಮೀಸಲಾತಿ ವಂಚಕ ಕೊತ್ತೂರು ಮಂಜುನಾಥ್‍ರವರನ್ನು ತರಬೇಕಾದ ಔಚಿತ್ಯವಾದರೂ ಕಾಂಗ್ರೆಸ್ ಪಕ್ಷಕ್ಕೆ ಏನು ಎಂದು ಪ್ರಶ್ನಿಸಿದ್ದಾರೆ.
ಮುಳಬಾಗಿಲು ಕ್ಷೇತ್ರದಲ್ಲಿ ಎ.ಐ.ಸಿ.ಸಿ. ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಬಲಗೈ ಅಸ್ಪøಶ್ಯ ಜನಾಂಗದ ಮುದ್ದು ಗಂಗಾಧರ್ ಎಂಬುವರಿಗೆ ಟಿಕೇಟ್ ನೀಡಿದರೂ ಸಹ ಕೊತ್ತೂರು ಮಂಜುನಾಥ್ ಹಟ ಹಿಡಿದು ಇದನ್ನು ರದ್ದುಗೊಳಿಸಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಬ್ಲಾಕ್‍ಮೇಲ್ ಮಾಡಿ ಸೃಷ್ಯ ಜನಾಂಗದ ಆದಿ ನಾರಾಯಣ್ ರವರಿಗೆ ಟಿಕೇಟ್ ಕೊಡಿಸಿದ್ದು, ಇದು ಇವರು ಅಸ್ಪøಶ್ಯ ದಲಿತ ಜನಾಂಗದ ಕಡು ವಿರೋಧಿ ಎಂಬುವುದಕ್ಕೆ ಸಾಕ್ಷಿಯಾಗಿದೆ.
ಅಂಬೇಡ್ಕರ್‍ಗೆ ಧಿಕ್ಕಾರ ಕೂಗಿದ ಕೋಲಾರ ನಗರಸಭೆಯ ಸದಸ್ಯ ಅಂಬರೀಶ್ ಹಾಗೂ ಹಿಂದೆ ದಲಿತರನ್ನು ಲೇಲೇಕರ್ ಶೂಗೆ ಹೋಲಿಸಿ ಅವಮಾನಗೊಳಿಸಿದ ಸಂದರ್ಭದಲ್ಲಿ ಕೊತ್ತೂರು ಮಂಜುನಾಥ್ ವಿರುದ್ಧ ಹೋರಾಟ ಮಾಡಿದ್ದ ದಲಿತ ವಕ್ಕಲೇರಿ ರಾಜಪ್ಪ ರವರುಗಳು ಈಗ ಇಂತಹ ಕೊತ್ತೂರು ಮಂಜುನಾಥ್ ಪರವಾಗಿಯೇ ಪ್ರಚಾರದಲ್ಲಿ ತೊಡಗಿರುವುದು ದಲಿತ ಸಿದ್ಧಾಂತದ ವಿರೋಧ ಅಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಕೊತ್ತೂರು ಮಂಜುನಾಥ್ ರವರಿಂದ ನ್ಯಾಯಾಲಯವು ವಿಧಿಸಿರುವ 92 ಲಕ್ಷ ದಂಡವನ್ನು ತಕ್ಷಣ ವಸೂಲಿ ಮಾಡುವುದರ ಜೊತೆಗೆ ಇವರನ್ನು ಜೈಲಿಗೆ ಕಳುಹಿಸುವ ಕೆಲಸವು ಸರ್ಕಾರವು ತಕ್ಷಣ ಮಾಡಬೇಕೆಂದು ಒತ್ತಾಯಿಸಿರುತ್ತಾರೆ. ಇಂತಹ ದಲಿತ ಮೀಸಲಾತಿಯನ್ನು ಕಬಳಿಸಿ, ಅವಕಾಶವನ್ನು ತಪ್ಪಿಸಿ ವಂಚಿಸಿದ ಇವರಿಗೆ ಕ್ಷೇತ್ರದ ಯಾವೊಬ್ಬ ಸ್ವಾಭಿಮಾನಿ ದಲಿತರು ಹಾಗೂ ಇತರೆ ಪ್ರಜ್ಞಾವಂತ ಮತದಾರರು ಮತ ನೀಡದಿರುವಂತೆ ಮನವಿ ಮಾಡಿಕೊಂಡಿರುತ್ತಾರೆ.
ಕುರುಬ ಸಂಘದ ಮಾಜಿ ರಾಜ್ಯ ನಿರ್ದೇಶಕರಾದ ಕನಕನಪಾಳ್ಯ ಜಟ್ ಅಶೋಕ್ ಮಾತನಾಡಿ ಕೋಲಾರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಅಭ್ಯರ್ಥಿಗಳಾದ ಸಂದರ್ಭಗಳಲ್ಲಿ ಈಗಿನ ಘಟಬಂಧನ್ ನಾಯಕರು ಏಕೆ ಪ್ರಚಾರ ಮಾಡಿ ಗೆಲ್ಲಿಸಲಿಲ್ಲ? ಈಗ ಸಿದ್ಧರಾಮಯ್ಯನವರು ಬರದೇ ಇದ್ದಾಗ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಿ ಶಾಸಕರನ್ನಾಗಿ ಮಾಡುವ ಕೆಲಸವನ್ನು ಇವರುಗಳು ಮಾಡದೆ ಜನಾಂಗವನ್ನು ವಂಚಿಸಿ ಅವಕಾಶವನ್ನು ಕಿತ್ತುಕೊಂಡಿದ್ದಾರೆ. ಈಗಿನ ಚುನಾವಣೆ ಹಣ-ಮನುಷ್ಯತ್ವದ ನಡುವೆ ನಡೆಯುತ್ತಿರುವ ಹೋರಾಟವಾಗಿದ್ದು, ಜನರು ಒಳ್ಳೆಯತನದ ಪರವಾಗಿ ನಿಂತು ಗೆಲ್ಲಿಸಬೇಕು. ಮಂಗಳವಾರ ರಘುಪತಿ ಹೊಸಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಸಿ.ಎಂ.ಆರ್.ಗೆ ಜೈಕಾರವನ್ನು ಹಾಕುತ್ತಿದ್ದಾಗ ಈ ಮಾರ್ಗವಾಗಿ ಬಂದ ವಕ್ಕಲೇರಿ ರಾಜಪ್ಪ ಹಾಗೂ ನಗರಸಭೆ ಸದಸ್ಯ ಅಂಬರೀಶ್ ರವರುಗಳು ಇವರ ಮೇಲೆ ದೌರ್ಜನ್ಯ ಮಾಡಿ ಘೋಷಣೆ ಕೂಗದಂತೆ ಧಮಕಿ ಹಾಕಿ ಗೂಂಡಾಗಿರಿ ಪ್ರದರ್ಶಿಸಿರುತ್ತಾರೆ. ಚುನಾವಣೆ ಮುಂಚಿತವಾಗಿಯೇ ಕಾಂಗ್ರೆಸ್‍ನವರ ದಬ್ಬಾಳಿಕೆ ಗೂಂಡಾಗಿರಿ ಈ ಮಟ್ಟಕ್ಕೆ ಇರಬೇಕಾದರೆ ಇವರನ್ನು ಗೆಲ್ಲಿಸಿದರೆ ಕ್ಷೇತ್ರ ಜನತೆಯ ಮೇಲೆ ಇನ್ನೆಷ್ಟು ದಬ್ಬಾಳಿಕೆ ಹಾಗೂ ಗೂಂಡಾಗಿರಿಯನ್ನು ಇವರುಗಳು ಮಾಡಬಹುದು ಎಂದು ಪ್ರಶ್ನಿಸಿರುತ್ತಾರೆ.
ರಾಜ್ಯ ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕುತುಬ್ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿನ ಘಟ ಬಂಧನ್ ನಾಯಕರು ಹಿಂದಿನ ಕೋಲಾರ ಕ್ಷೇತ್ರದ ಚುನಾವಣಾ ಸಂದರ್ಭದಲ್ಲಿ ಪಕ್ಷದ ಮುಸ್ಲಿಂ ಅಭ್ಯರ್ಥಿಗೆ ಏಕೆ ಮತ ಹಾಕಿಸಲಿಲ್ಲ. ಮುಸ್ಲಿಂ ಜನಾಂಗವನ್ನು ಕೇವಲ ಮತ ಬ್ಯಾಂಕ್ ರಾಜಕಾರಣಕ್ಕೆ ಕಾಂಗ್ರೆಸ್ ಪಕ್ಷವು ಬಳಸಿಕೊಂಡು ಅಧಿಕಾರ ವಂಚಿತರನ್ನಾಗಿ ಮಾಡುತ್ತಿರುವುದು ಜನಾಂಗದ ಅರಿವಿಗೆ ಬಂದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮುನಿಸ್ವಾಮಿರವರನ್ನು ಬೆಂಬಲಿಸಿ ಗೆಲ್ಲಿಸಿದ ಕೊತ್ತೂರು ಮಂಜುನಾಥ್ ಹೇಗೆ ತಾನೇ ಮುಸ್ಲಿಂ ಹಿತೈಷಿಯಾಗಲು ಸಾಧ್ಯ ಎಂದು ಪ್ರಶ್ನಿಸಿರುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ನಗರದ ಹರೀಶ್, ಹೂಹಳ್ಳಿ ನಾರಾಯಣಸ್ವಾಮಿ, ಖಾದ್ರಿಪುರ ಸುಧಾಕರ್, ಕ್ಯಾಲನೂರು ಸುರೇಶ್, ಉಮರ್‍ವುಲ್ಲಾ ಷರೀಫ್, ಬಾರಂಡಹಳ್ಳಿ ನಾರಾಯಣಸ್ವಾಮಿ, ಕಲಾ ರಮೇಶ್, ಸಿರಾಜ್, ಕಠಾರಿಪಾಳ್ಯ ಅಶೋಕ್ ಮುಂತಾದವರು ಭಾಗವಹಿಸಿದ್ದರು.