ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ಕೃತಜ್ಞತಾ ದಿನಆಚರಣೆ

ವರದಿ ಮತ್ತು ಚಿತ್ರಗಳು: ಫಾ| ಅನಿಲ್ ಫೆರ್ನಾಂಡಿಸ್

ಮಂಗಳೂರು, ಎ.23: ಮಂಗಳೂರು ಜೆಪ್ಪುವಿನ ಸಂತಅಂತೋನಿ ಚಾರಿಟೇಬಲ್ ಸಂಸ್ಥೆಗಳ ಶತಮಾನೋತ್ಸವದ ರಜತ ಮಹೋತ್ಸವದ ಅಂಗವಾಗಿ ಕೃತಜ್ಞತಾ ದಿನವನ್ನು 2023ರ ಏಪ್ರಿಲ್ 23ರ ಭಾನುವಾರದಂದು ಜೆಪ್ಪುವಿನ ಸಂತ ಅಂತೋನಿ ಚಾಪೇಲ್‍ನಲ್ಲಿ ಆಚರಿಸಲಾಯಿತು.
ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠಗುರು ಅತೀ ವಂದನೀಯ ಮ್ಯಾಕ್ಸಿಮ್‍ಎಲ್ ನೊರೊನ್ಹಾ ಸಂಸ್ಥೆಯ ಮೇಲೆ ತೋರಿದ ಕೃಪಾವರಗಳಿಗೆ ದೇವರಿಗೆ ಸ್ತೋತ್ರ ಸಲ್ಲಿಸಿ ದಿವ್ಯ ಬಲಿಪೂಜೆಯನ್ನು ಆರ್ಪಿಸಿದರು. ಸಂಸ್ಥೆಯ ಸಹಾಯಕ ನಿರ್ದೇಶಕ ಫಾದರ್ ರೂಪೇಶ್ ತಾವ್ರೊ ಅವರು ಪ್ರವಚನ ಬೋಧಿಸಿದರು. ಮಂಗಳೂರು ಧರ್ಮಕ್ಷೇತ್ರದ ಕುಲಪತಿಗಳು, ಆತೀ ವಂದನೀಯ ವಿಕ್ಟರ್ ಜಾರ್ಜ್ ಡಿಸೋಜ, ಸಂಸ್ಥೆಯ ನಿವೃತ್ತ ನಿರ್ದೇಶಕರಾದ ಡಾ. ವಿಲಿಯಂ ಬಾರ್ಬೋಜಾ, ಫಾದರ್ ಲಾರೆನ್ಸ್ ಡಿಸೋಜ, ಫಾದರ್ ಫ್ರಾನ್ಸಿಸ್ ಡಿಸೋಜ, ಫಾದರ್ ತ್ರಿಶನ್ ಡಿಸೋಜ, ಸಂಸ್ಥೆಯ ನಿರ್ದೇಶಕ ಫಾದರ್ ಜೆ.ಬಿ.ಕ್ರಾಸ್ತಾ, ಸಹಾಯಕ ನಿರ್ದೇಶಕ ಫಾದರ್ ಲ್ಯಾರಿ ಪಿಂಟೋ ಉಪಸ್ಥಿತರಿದ್ದರು.
‘ಸಂಭ್ರಮ’ ಸಭಾಂಗಣದಲ್ಲಿ ನಡೆದಕಿರು ಸನ್ಮಾನ ಕಾರ್ಯಕ್ರಮದಲ್ಲಿ ಸಂಸ್ಥೆಗೆ ಸೇವೆ ಸಲ್ಲಿಸಿದ ನಿರ್ದೇಶಕರು, ಹಿತಚಿಂತಕರು, ದಾನಿಗಳು ಹಾಗೂ ಹಿತೈಷಿಗಳನ್ನು ಸನ್ಮಾನಿಸಲಾಯಿತು. ಎಲ್ಲಾ ಹಿತ ಚಿಂತಕರಿಗೆ ಕೃತಜ್ಞತೆಯ ಸಂಕೇತವಾಗಿ ಸಚಿತ ಅಂತೋನಿಯವರ ಪ್ರತಿಮೆಯನ್ನು ಕಾಣಿಕೆ ನೀಡಲಾಯಿತು.
ಕಾರ್ಯಕ್ರಮದ ಆಧ್ಯಕ್ಷರಾಗಿ ಅತೀ ವಂದನೀಯ ಮ್ಯಾಕ್ಸಿಮ್‍ಎಲ್ ನೊರೊನ್ಹಾ ಮತ್ತು ಮುಖ್ಯ ಅತಿಥಿಯಾಗಿ ಶ್ರೀ ಮಾರ್ಸೆಲ್ ಮೊಂತೇರೊ ಅವರು ಸಂಸ್ಥೆಯ ನಿರ್ದೇಶಕರುಗಳೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅತೀ ವಂದನೀಯ ಮ್ಯಾಕ್ಸಿಮ್‍ಎಲ್ ನೊರೊನ್ಹಾಆವರು ಮಾತಾನಾಡಿ, “ಯಾವುದೇ ದಾನಿ ಪ್ರತಿಫಲವನ್ನು ನಿರೀಕ್ಷಿಸಿ ದಾನ ಮಾಡುವುದಿಲ್ಲ. ಇಂದು, ಈ ದಿನವನ್ನು ಆಚರಿಸಲು ಬಂದಿರುವುದು ಗುರುತಿಸಲ್ಪಡುವ ಉದ್ದೇಶದಿಂದಲ್ಲ, ಬದಲಾಗಿ ಹೃದಯ ಮತ್ತು ಮನಸ್ಸಿನ ಉದಾರತೆಗೆ ಭಗವಂತನಿಗೆ ಧನ್ಯವಾದ ಹೇಳಲು ಮತ್ತು ಈ ಸಂಸ್ಥೆಯ ಬಗ್ಗೆ ನಮ್ಮಲ್ಲಿರುವ ಪ್ರೀತಿಯನ್ನು ತೋರಿಸಲು. ಯೇಸುವಿನ ಅತೀ ಸಣ್ಣ ಸಹೋದರ-ಸಹೋದರಿಗೆ ಸ್ವಇಚ್ಛೆಯಿಂದ ಮತ್ತು ಉದಾರವಾಗಿ ಕೊಡುಗೆ ನೀಡುವವರು ಸರಿಯಾದ ಸಮಯದಲ್ಲಿತಮ್ಮ ಪ್ರತಿಫಲವನ್ನು ಕಂಡುಕೊಳ್ಳುತ್ತಾರೆ ಮತ್ತು ದೇವರು ಅವರನ್ನು ಹೇರಳವಾಗಿ ಆಶೀರ್ವದಿಸುತ್ತಾನೆ.” ಎಂದು ಹೇಳಿದರು.
ಹಿತಚಿಂತಕರನ್ನು ಸ್ಮರಿಸುವ ಮತ್ತು ದೇವರಿಗೆಕೃತಜ್ಞತೆ ಸಲ್ಲಿಸುವ ಈ ದಿನವನ್ನು ಆಚರಿಸುವ ಈ ಹೊಸ ಉಪಕ್ರಮವು ಸಚಿತ ಅಂತೋನಿ ಆಶ್ರಮದಲ್ಲಿ ಇದೇ ಮೊದಲನೆಯದು. “ನಿರ್ದೇಶಕರು ಮತ್ತು ಸಹಾಯಕರ ಚಿಂತನಶೀಲತೆಗೆ ನಾನು ಧನ್ಯವಾದಿಸುತ್ತೇನೆ ಮತ್ತು ಪ್ರಶಂಸಿಸುತ್ತೇನೆ” ಎಚಿದು ಶ್ರೇಷ್ಠಗುರು ಮ್ಯಾಕ್ಸಿಮ್ ಹೇಳಿದರು.
ಸಂಸ್ಥೆಯ ಮರು ವಿನ್ಯಾಸಗೊಳಿಸಲಾದ ವೆಬ್‍ಸೈಟ್‍ಅನ್ನುಇದೇ ಸಂದರ್ಭದಲ್ಲಿ ಶ್ರೇಷ್ಠಗುರು ಮ್ಯಾಕ್ಸಿಮ್ ನೊರೊನ್ಹಾ ಅವರು ಮರು ಪ್ರಕಟಿಸಿದರು.
ನಿಸರ್ಗ ಪ್ರೇಮಿಯಾಗಿದ್ದ ಪಾದುವ ಸಂತ ಅಂತೋನಿಯವರ ಸವಿನೆನಪಿಗೆ ಸಚಿತ ಅಂತೋನಿ ಚಾರಿಟಿ ಸಂಸ್ಥೆಯಗಣ್ಯರು, ಹಿತೈಷಿಗಳು ಹಾಗೂ ವಿದ್ಯಾರ್ಥಿಗಳಿಂದ 10 ಫಲ ನೀಡುವ ಗಿಡಗಳನ್ನು ನೆಡಲಾಯಿತು.
ಫಾದರ್ ಲ್ಯಾರಿ ಪಿಂಟೋಅವರು ಚಟುವಟಿಕೆಗಳ ಸಂಕ್ಷಿಪ್ತ ವರದಿಯನ್ನು ದಾಖಲಿಸಿದರು ಮತ್ತು ಆಶ್ರಮ ಮತ್ತು ಅದರ ನಿವಾಸಿಗಳ ಕೆಲವು ಅವಶ್ಯಕತೆಗಳು ಮತ್ತು ಅಗತ್ಯಗಳನ್ನು ಪಟ್ಟಿ ಮಾಡಿದರು.
ಫಾದರ್ ಜೆ ಬಿ ಕ್ರಾಸ್ತಾ ಸ್ವಾಗತಿಸಿ, ಫಾದರ್ ರೂಪೇಶ್ ತಾವ್ರೊ ವಂದಿಸಿದರು. ಫಾದರ್ ತ್ರಿಶಾನ್ ಡಿಸೋಜಾ ಭೋಜನದ ಪ್ರಾರ್ಥನೆ ಮಾಡಿದರು.
ಶ್ರೀ ಸೈಮನ್ ಪಾಯ್ಸ್, ಬಜಾಲ್ ಮತ್ತು ತಂಡದಿಂದ ಬಲಿಪೂಜೆಯ ಗಾಯನವನ್ನು ಹಾಡಿ ಸಹಕರಿಸಿತು.