ಪಡುಕೋಣೆ ಸಂತ ಅಂತೋನಿ ಚರ್ಚ್ ವತಿಯಿಂದ ವಿಧ್ಯಾರ್ಥಿಗಳಿಗೆ 3 ದಿನಗಳ ಬೇಸಿಗೆ ಶಿಬಿರ

ಪಡುಕೋಣೆ, ಎಪ್ರಿಲ್ 22: ಪಡುಕೋಣೆ ಸಂತ ಅಂತೋನಿ ಚರ್ಚ್ ವತಿಯಿಂದ ಪಡುಕೋಣೆ ಶಾಲಾ ಸಭಾಭವನದಲ್ಲಿ ಎಪ್ರಿಲ್ 20 ರಿಂದ 22 ರ ವರೆಗೆ 3 ದಿನಗಳ ಕಾಲ 1 ರಿಂದ 10 ನೇ ತರಗತಿಯ ವಿಧ್ಯಾರ್ಥಿಗಳಿಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಯಿತು.ಚರ್ಚಿನ ಧರ್ಮ ಗುರುಗಳಾದ  ವಂ ಫ್ರಾನ್ಸಿಸ್ ಕರ್ನೆಲಿಯೊ ರವರು ಶಿಬಿರವನ್ನು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು. ಶಿಬಿರಗಳಲ್ಲಿ ಸಂಗೀತ ಅಭಿನಯ,ಆಟ,ಪಾಠ,ಮನೋರಂಜನೆ ಜೀವನ ಕೌಶಲಗಳ ಭೋಧನೆ, ವಿಧ್ಯಾಭ್ಯಾಸದ ಮುಂದಿನ ನೋಟ ಮಾರ್ಗದರ್ಶನ ಇತ್ಯಾದಿ ವಿಷಯಗಳು ಒಳಗೊಂಡಿರುವುದರಿಂದ ವ್ಯಕ್ತಿ ಯ ವ್ಯಕ್ತಿತ್ವ, ವಿಕಸನ, ಪ್ರತಿಭೆಗಳ ಪ್ರದರ್ಶನಕ್ಕೆ ಆಧಾರವಾಗಿವೆ ಎಂದು ಶುಭ ಹಾರೈಸಿದರು.

ಚರ್ಚಿನ ಪಾಲನ ಮಂಡಳಿಯ ಕಾರ್ಯದರ್ಶಿ ಶ್ರೀ. ಅಲೆಕ್ಸ್ ಡಿ’ಸೋಜ, 20 ಆಯೋಗಗಳ ಸಂಯೋಜಕ ಶ್ರೀ. ವಿನ್ಸೆಂಟ್ ಡಿ’ ಸೋಜ, ಸಂತ ಅಂತೋನಿ ಕಾನ್ವೆಂಟಿನ ಭಗಿನಿ ಸಿ| ಮರ್ಸಿ, ಪಾಲನಾ ಮಂಡಳಿ ಯ ಸದಸ್ಯರಾದ ಶ್ರೀ.ಗ್ರೇಶನ್ ಕ್ರಾಸ್ತಾ  ಹಾಗೂ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಬ್ರ|ಶೋನ್ ಕೆಮ್ಮಣ್ಣು, ಬ್ರ|ಸ್ಟೀವನ್ ನೀಡ್ಪಳ್ಳಿ ಹಾಗೂ ಬ್ರ| ಕೆವಿನ್ ಪಡುಕೋಣೆ, ಉಪಸ್ಥಿತರಿದ್ದರು.

ಶಿಬಿರಾರ್ಥಿ ಕು|ಶೈನಿ ಆಲ್ಮೇಡಾ ಎಲ್ಲರನ್ನು ಸ್ವಾಗತಿಸಿದರು. ಕು| ರೊಯ್ಲಿನ್, ಕು| ಆಮ್ರತಾ, ಕು| ಆಶ್ಲಿಟಾ, ಹಾಗೂ ಕೆಲ್ವಿನ್ ಕ್ರಾಸ್ತಾ ಮುಂತಾದ ಶಿಬಿರಾರ್ಥಿಗಳು ಶಿಬಿರದ ಯಶಸ್ವಿಗೆ ಪ್ರಾರ್ಥನಾನಿಧಿ ನಡೆಸಿಕೊಟ್ಟರು. ಕು|ಪ್ರಿಯಾಂಕ ವಂದಿಸಿದರು ಶಿಕ್ಷಕಿ ಶ್ರೀಮತಿ ಐವಿ ಕಾರ್ಯಕ್ರಮ ನಿರೂಪಿಸಿದರು.