ಮೂಡ್ಲಕಟ್ಟೆ ಎಂಐಟಿ : ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ

ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ, ಕುಂದಾಪುರ ಇಲ್ಲಿಯ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿಗಳಾದ ಅಮರ್ ಮತ್ತು ವಿಷ್ಣುಮೂರ್ತಿಯವರು ತಮಿಳುನಾಡಿನ ರಾಮಪುರದ ಎಸ್.ಆರ್.ಎಮ್. ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ “ಪ್ರಾಜೆಕ್ಟ್ ಕಲ್ಪನಾ ಪ್ರಸ್ತುತಿ” ಸ್ಫರ್ಧೆಯಲ್ಲಿ “ಸ್ವಯಂಚಾಲಿತ ಘನತ್ಯಾಜ್ಯ ಸಂಸ್ಕರಣೆ” ಎಂಬ ಪ್ರಾಜೆಕ್ಟ್‍ಗೆ “ಭವಿಷ್ಯದ ತಂತ್ರಜ್ಞಾನ ಪ್ರಶಸ್ತಿ”ಯನ್ನು ಪಡೆದು ಕಾಲೇಜಿನ ಹಿರಿಮೆ ಹೆಚ್ಚಿಸಿದ್ದಾರೆ. ಒಂದು ಸಾವಿರಕ್ಕೂ ಅಧಿಕ ತಂಡಗಳು ಭಾಗವಹಿಸಿದ ಈ ಸ್ಫರ್ಧೆಯಲ್ಲಿ ದೇಶದ 50 ತಂಡಗಳು ಮಾತ್ರ ಅಂತಿಮ ಸುತ್ತಿಗೆ ತೇರ್ಗಡೆ ಹೊಂದಿದ್ದು, ಅದರಲ್ಲಿ ಕರ್ನಾಟಕದಿಂದ ಎರಡು ತಂಡಗಳಿಗೆ ಮಾತ್ರ ಅವಕಾಶ ಸಿಕ್ಕಿತ್ತು. ಈ ಎರಡು ತಂಡಗಳಲ್ಲಿ ಮೂಡ್ಲಕಟ್ಟೆ ತಂಡವು ಒಂದಾಗಿದ್ದು, ಫೈನಲ್ ಸ್ಫರ್ಧೆಯಲ್ಲಿ ಎಂ.ಐ.ಟಿ.ಯ ತಂಡವು ಪ್ರಶಸ್ತಿಯನ್ನು ಪಡೆಯುವಲ್ಲಿ ಯಶ್ವಸಿಯಾಯಿತು. ವಿದ್ಯಾರ್ಥಿಗಳ ತಂಡಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಂ ಅವರು ಮಾರ್ಗದರ್ಶನ ನೀಡಿದ್ದು, ಪ್ರಾಧ್ಯಾಪಕರಾದ ಅಕ್ಷತಾ ನಾಯಕ್ ಮತ್ತು ವರುಣ ಕುಮಾರ್‍ರವರು ಸಹಾಯ ಮಾಡಿದ್ದರು. ವಿಜೇತ ತಂಡವು ಕುಂದಾಪುರದ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಸಂಬಂಧಪಟ್ಟ ಯೋಜನೆ ಕೂಡ ತಯಾರಿಸುತ್ತಿದ್ದು, ಹಲವರ ಮೆಚ್ಚುಗೆಗೆ ಕಾರಣವಾಗಿದೆ. ವಿದ್ಯಾರ್ಥಿಗಳ ಸಾಧನೆಗೆ, ಆಡಳಿತ ಮಂಡಳಿ ಅಧ್ಯಕ್ಷ ಸಿದ್ಧಾರ್ಥ್ ಜೆ. ಶೆಟ್ಟಿ, ಪ್ರಾಶುಂಪಾಲರಾದ ಡಾ. ಅಬ್ದುಲ್ ಕರೀಂ, ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿಸೋಜ, ವಿಭಾಗದ ಮುಖ್ಯಸ್ಥ ಪ್ರೊ. ಬಾಲನಾಗೇಶ್ವರ್ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.