ಸಂವಿಧಾನ ರಕ್ಷಣೆ ಎಲ್ಲರ ಹೊಣೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಸಂವಿಧಾನ ರಕ್ಷಣೆ ಎಲ್ಲರ ಹೊಣೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಹೊರತುಪಡಿಸಿ ಭಾರತ ಅಥವಾ ಜಗತ್ತಿನ ಇತಿಹಾಸ ಬರೆಯಲಾಗದು ಎಂದು ಹೇಳಿದರು.
ಆರ್‍ಎಸ್‍ಎಸ್, ಮನುವಾದಿಗಳು, ಪ್ರಧಾನಿ ಮೋದಿ, ಅಮಿತ್ ಷಾ ಸಮುದ್ರದ ಅಲೆಗಳನ್ನು ಹಿಂದಿರುಗಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಹಾಗೆ ಮಾಡುವುದು ಅವರಿಂದ ಸಾಧ್ಯವಿಲ್ಲ. ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಾರೆ. ಇದು ಬಹುಜನ, ಬಹು ಧರ್ಮೀಯರ ಸಮಾಜ, ಇಲ್ಲಿ ಅವರ ಆಟ ನಡೆಯುವುದಿಲ್ಲ. ಗೋಮುಖ ವ್ಯಘ್ರರಂತೆ ಬಂದು ಅಲ್ಪ ಸಂಖ್ಯಾತರನ್ನು ಹೆದರಿಸುವುದು ಬೇಡ. ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವುದು ಬೇಡ. ಬಿಜೆಪಿ ಆಡಳಿತದಲ್ಲಿ ಬಡವರ ಆದಾಯ ಹೆಚ್ಚಲಿಲ್ಲ. ಅದಾನಿ ಆದಾಯ ಹೆಚ್ಚಿದೆ. ಡಾ. ಬಿ.ಆರ್. ಅಂಬೇಡ್ಕರ್ ಅದನ್ನು ಬಯಸಿರಲಿಲ್ಲ. ಎಲ್ಲರ ಅಭಿವೃದ್ಧಿ ಬಯಸಿದ್ದರು. ಆದರೆ ಪರಿಸ್ಥಿತಿ ಬದಲಾಗಿದೆ ಎಂದು ಹೇಳಿದರು.
ಮುಖಂಡರಾದ ಎಂ.ಶ್ರೀನಿವಾಸನ್, ಆರ್.ಎನ್.ನರಸಿಂಹಯ್ಯ, ದಿಂಬಾಲ ಅಶೋಕ್, ಕೆ.ಕೆ.ಮಂಜು, ಸಿ.ಎಂ.ಮುನಿಯಪ್ಪ, ಎನ್.ಮುನಿಸ್ವಾಮಿ, ವೈ.ವಿ.ನರಸಿಂಹಮೂರ್ತಿ, ಮುನಿವೆಂಕಟಪ್ಪ, ಈರಪ್ಪ, ವಿ.ಮುನಿಯಪ್ಪ, ಬಿ.ಎಂ.ಪ್ರಕಾಶ್, ವಿ.ಮುನಿರಾಜು, ನಾಗರಾಜ್, ರಾಮಾಂಜಮ್ಮ, ಉಮಾದೇವಿ, ಭದ್ರಿ ನರಸಿಂಹಮೂರ್ತಿ, ಬಕ್ಷುಸಾಬ್, ವೆಂಕಟೇಶ್, ವೆಂಕಟರೆಡ್ಡಿ, ಶಿವಮೂರ್ತಿ ರಾಮಮೂರ್ತಿ ಇದ್ದರು.