ಐ.ಎಂ.ಜೆ. ವಿದ್ಯಾ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಎಪ್ರಿಲ್ ಹತ್ತರಂದು:ಹಲವಾರು ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ

ಮೂಡ್ಲಕಟ್ಟೆ ಐ.ಎಂ.ಜೆ. ವಿದ್ಯಾ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆಯನ್ನು ಇದೇ ಬರುವ ಎಪ್ರಿಲ್ ಹತ್ತರಂದು ನಡೆಯಲಿದೆ. ಇದರ ಪ್ರಯುಕ್ತ ಸಂಸ್ಥೆಯಲ್ಲಿ ಹಲವಾರು ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಎಪ್ರಿಲ್ ಎಂಟನೇ ತಾರೀಖಿನಂದು ಬೆಂಗಳೂರಿನ ಮಾಜಿ ಇಸ್ರೋ ವಿಜ್ಞಾನಿ ಆರ್‍ಆರ್‍ಎಸ್‍ಸಿ ಸೌತ್ ಇದರ ನಿವೃತ್ತ ಜನರಲ್ ಮ್ಯಾನೇಜರ್ ಡಾ. ಕೆ. ಗಣೇಶ ರಾಜ್‍ರವರಿಂದ ಶ್ರೀ ಐ.ಎಂ.ಜಯರಾಮ ಶೆಟ್ಟಿ ಸ್ಮರಣಾರ್ಥ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ಅವರು ಭೂಕಂಪ ಹಾಗೂ ಸಮಾಜದ ಮೇಲೆ ಅದರ ಪರಿಣಾಮ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಇದೇ ಬರುವ ಎಪ್ರಿಲ್ 10, ಸೋಮವಾರದಂದು ಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಗುವುದು ಈ ಕಾರ್ಯಕ್ರಮಕ್ಕೆ ಡಿವೈನ್ ಪಾರ್ಕ್ ಕೋಟ ಇಲ್ಲಿಯ ಎಸ್ ಎಚ್ ಆರ್ ಎಸ್ ವಿಭಾಗದ ಮೆಡಿಕಲ್ ಡೈರೆಕ್ಟರ್ ಹಾಗೂ ಡಿವೈನ್ ಪಾರ್ಕ್ ಟ್ರಸ್ಟ್‍ನ ಟ್ರಸ್ಟಿ ಆಗಿರುವ ಡಾ. ವಿವೇಕ್ ಎ. ಉಡುಪರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ.ಎಂ.ಜೆ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಶ್ರೀಯುತ ಸಿದ್ದಾರ್ಥ ಜೆ. ಶೆಟ್ಟಿಯವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀದೇವಿ ಆಂಬುಲೆನ್ಸ್ ಸರ್ವಿಸ್, ಕುಂದಾಪುರದ ಶ್ರೀ ವಾಸುದೇವ ಹಂದೆ ಅವರಿಗೆ ಅವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಲಾಗುವುದು. ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅಲ್ಲದೇ ಸಮಾಜ ಸೇವಾ ಕಾರ್ಯಕ್ರಮಗಳಾಗಿ ಬುದ್ಧಿಮಾಂಧ್ಯ ಮಕ್ಕಳಿಗೆ “ವಿಸ್ಮಯ” ವೃದ್ಧಾಶ್ರಮದಲ್ಲಿ “ಮೈತ್ರಿ” ಕುಂದಾಪುರ ನಗರಸಭಾ ಸಹಯೋಗದೊಂದಿಗೆ “ಸಂರಕ್ಷಣೆ” ನಗರ ಸ್ವಚ್ಛತಾ ಕಾರ್ಯಕ್ರಮ “ನಮ್ಮ ಭೂಮಿ” ಬಸ್ರೂರು ಅವರೊಂದಿಗೆ ಒಡಂಬಡಿಕೆ ಹಾಗೂ ಸಂಸ್ಥೆಯ ಆವರಣದಲ್ಲಿ ಮಳೆನೀರು ಕೊಯ್ಲು ಮುಂತಾದವುಗಳನ್ನು ಹಮ್ಮಿಕೊಳ್ಳಲಾಗಿದೆ.

ಸಂಸ್ಥಾಪಕರ ದಿನಾಚರಣೆಯ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದಿಂದ “ಸತ್ವ ದರ್ಶನಂ” ನಾಟಕ ಪ್ರದರ್ಶನವನ್ನು ಮಾಡಲಾಗುವುದು.