S.C.S ಕಾಲೇಜ್ ಆಫ್ ನರ್ಸಿಂಗ್ ಸಾಯನ್ಸ್ ಪದವಿ ಪ್ರಧಾನ ಸಮಾರಂಭ

ಮಂಗಳೂರು: ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸಾಯನ್ಸ್ ಮಂಗಳೂರು ಇದರ ಅಂತಿಮ ವರ್ಷದ ಬಿ.ಎಸ್.ಸಿ. ಹಾಗೂ ಎಂ.ಎಸ್ಸಿ. ನರ್ಸಿಂಗ್ ವಿಭಾಗದ ವಿದ್ಯಾರ್ಥಿಗಳ ಪದವಿ ಪ್ರಶಸ್ತಿ ಪ್ರಧಾನ ಸಮಾರಂಭವು ತಾ. 01.04.2023 ರಂದು ಶನಿವಾರ ಬೆಳಿಗ್ಗೆ 10.30 ಗಂಟೆಗೆ ಬೆಂದೂರಿನಲ್ಲಿರುವ ಸಂತ ಸೆಬಾಸ್ಟಿಯನರ ಪ್ಲಾಟಿನಂ ಜ್ಯುಬಿಲಿ ಸಭಾಂಗಣದಲ್ಲಿ ಅದ್ದೂರಿಯಿಂದ ಜರಗಿತು. ಶ್ರೀ ಮನೀಷ ಆನ್ ವರ್ಗೀಸ್, ಸಹಉಪನ್ಯಾಸಕಿ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಡಾ|| ತ್ರೀಝ ಮಥಾಯಿಸ್, ಪ್ರಾಧ್ಯಾಪಕರು, ಮನೋಶುಶ್ರೂಷಕ ವಿಭಾಗದ ಮುಖ್ಯಸ್ಥರು, ಲಕ್ಷೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್, ಮಂಗಳೂರು ಇವರು ವಹಿಸಿದ್ದರು.
ಅತಿಥಿ ಭಾಷಣದಲ್ಲಿ ಪದವೀಧರರಿಗೆ ಶುಶ್ರೂಷಕರ ಆರೈಕೆಯಲ್ಲಿ ಪ್ರೀತಿ, ಸಹಾನುಭೂತಿ ಮತ್ತು ಸಮರ್ಪಣೆಯ ಮಹತ್ವವನ್ನು ಮತ್ತು ನೈತಿಕ ಮೌಲ್ಯಗಳ ಬಗ್ಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಯು. ಕೆ. ಖಾಲಿದ್, ಆಡಳಿತಾಧಿಕಾರಿ, ಎಸ್.ಸಿ.ಎಸ್. ಗ್ರೂಫ್ ಆಫ್ ಇನ್ಸ್ಟಿಟ್ಯೂಶನ್, ಮಂಗಳೂರು ಇವರು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲೊಲಿಟ ಎಸ್.ಎಮ್.ಡಿಸೋಜರವರು ಪದವೀಧರ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು ಮತ್ತು ವಾರ್ಷಿಕ ವರದಿಯನ್ನು ಓದಿದರು. ಡಾ|| ಅಮರನಾಥ ಸೊರಕೆ, ಸಂಸ್ಥಾಪಕ ಅಧ್ಯಕ್ಷರು, ಹಾಗೂ ಕಾಲೇಜಿನ ಉಪಪ್ರಾಂಶುಪಾಲರಾಗಿರುವ ಶ್ರೀ ಅನಿಲ್ ಕುಮಾರ್ ಸಿ.ಎಂ.ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ರಿಕಿತ್ ಪಿಂಟೊ ಹಾಗೂ ಕುಮಾರಿ ಡೆಲಿಶ ಕ್ಯಾರಲ್ ಡಿಸೋಜ ಅವರು ನಿರ್ವಹಿಸಿದರು. ಶ್ರೀ ಡೆನ್ಸಿಲ್ ಡಿಸೋಜ, ಸಹಉಪನ್ಯಾಸಕರವರು ವಂದನಾರ್ಪಣೆ ಮಾಡಿದರು. ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು
.