ಕುಂದಾಪುರ, ಮಾ.27: ಕುಂದಾಪುರ-ಬೈಂದೂರು ತಾಲೂಕುಗಳ ಭಾವನ ಮಹಿಳಾ ಒಕ್ಕೂಟದಿಂದ ಕುಂದಾಪುರ ಸಂತ ಮೇರಿಸ್ ಪ.ಪೂ. ಕಾಲೇಜಿನ ಸಭಾಭವನದಲ್ಲಿ ಮಾ.26 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಮುಖ್ಯ ಅತಿಥಿಗಳಾದ ಸುಗಮ್ಯ ಉಡುಪಿ ಜಿಲ್ಲಾ ಮಹಿಳಾ ಒಕ್ಕೂಟಉಡುಪಿ ಧರ್ಮಪ್ರಾಂತ್ಯ ಇದರ ಅಧ್ಯಕ್ಷೆ ಅನಿತಾ ಡಾಯಸ್ ಗೀಡಕ್ಕೆ ನಿರೇರುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ “ವಲಯ ಮಟ್ಟದ ಒಕ್ಕೂಟಗಳ ಸಹಕಾರದಿಂದ ನಮ್ಮ ಮಹಿಳಾ ಒಕ್ಕೂಟವು ಉತ್ತಮ ರೀತಿಯಲ್ಲಿ ನಡೆಯುತ್ತದೆ, ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿದು ಚರ್ಚಿನ ವಾಳೆಯ ಗುರಿಕಾರರಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಮತು ಇನ್ನಿತರ ಕ್ಷೇತ್ರಗಳಲ್ಲಿ ಮಹಿಳೆ ತಾನೇನು ಕಡಿಮೆಯಿಲ್ಲವೆಂದು ಹೆಸರು ಮಾಡಿದ್ದಾಳೆ’ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಸುಗಮ್ಯ ಸೌರ್ಹಾದ ಸಹಕಾರಿ ನಿಯಮಿತ ಉಡುಪಿ ಇದರ ಅಧ್ಯಕ್ಷೆ ಪ್ರಮೀಳಾ ಡೆಸಾ, ಸುಗಮ್ಯ ಸೌರ್ಹಾದ ಸಹಕಾರಿ ನಿಯಮಿತ ಸಂಸ್ಥೆ ಸ್ಥಾಪಿಸುವುದರಲ್ಲಿ ಶ್ರಮಿಸಿದ ಪ್ರಯುಕ್ತ, ಆಶಾ ಕಾರ್ಯಕರ್ತೆಯಾದ ಸಿಂತಿಯಾ ಬುತ್ತೆಲ್ಲೊ ಇವರಿಗೆ ಶಿಸುಗಳ ಆರೈಕೆ ಗರ್ಭಿಣಿಯವರ ಸೇವೆ, ಬಾಣತನದ ಸೇವೆಯಲ್ಲಿ, ಜಿಲ್ಲಾ ಮಟ್ಟದಲ್ಲಿ ಗುರುತಿಸಿದ್ದಕಾಗಿ ಹಾಗೂ ಕುಂದಾಪುರ ತಾಲೂಕಿನಲ್ಲಿ ಆಟೋ ರಿಕ್ಷಾ ಚಾಲಕರಾಗಿ ಅನನ್ಯ ರೀತಿಯಲ್ಲಿ ಸೇವೆ ನೀಡುತ್ತೀರುವ ರೂಪ, ದೀಪ ಮತ್ತು ಸುಲೋಚನ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಪ್ರಮೀಳಾ ಡೆಸಾ ಮತ್ತು ದೀಪಾ ಅನ್ನಿಸಿಕೆಯನ್ನು ವ್ಯಕ್ತಪಡಿಸಿದರು.
ಅಧ್ಯಕ್ಷತೆ ಸ್ಥಾನ ವಹಿಸಿದ ಭಾವನ ಒಕ್ಕೂಟದ ಅಧ್ಯಾತ್ಮಿಕ ನಿರ್ದೇಶಕರಾದ ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ‘ಮಹಿಳೆ ಇಂದು ಯಾವ ಕ್ಷೇತ್ರದಲ್ಲೂ ಹಿಂದಿಲ್ಲ, ಇವತ್ತು ನಾನೊಂದು ಮಹಿಳೆಯ ಅಂತ್ಯ ಸಂಸ್ಕಾರದ ಕಾರ್ಯವನ್ನು ಮಾಡಬೇಕಿದೆ, ಸಮಾಕ ಸೇವಕಿ ಬರಹಗಾರ್ತಿಯಾದ ಅವಳು ಅವಳು ನಾನು ಸತ್ತ ನಂತರ ನನ್ನ ಶವವನ್ನು ವೈಧ್ಯಕೀಯ ಸಂಶೋಧೆನೆಗಾಗಿ ಉಪಯೋಗಿಸಲು ನೀಡಬೇಕೆಂದು ಕರಾರು ಮಾಡಿಕೊಂಡಿದ್ದಾಳೆ, ಅದರಂತೆ ಅವಳ ಮ್ರ್ ಆತ್ಮಕ್ಕಾಗಿ ಪೂಜೆ ಪ್ರಾರ್ಥನೆ ಮಾಡಿದ ನಂತರ, ಅವರ ಮ್ರತದೇಹವನ್ನು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ನೀಡಲಿಕ್ಕೆ ಇದೆ, ಇಂತಹ ದಿಟ್ಟತನ ತ್ಯಾಗಮಯಿ ಮಹಿಳೆಗಳು ಸಮಾಜದಲ್ಲಿ ಇದ್ದಾರೆ’ ಎಂದು ಹೇಳುತ್ತಾ, ಶುಭ ಕೋರಿದರು.
ಮುಕಾಂಬಿಕ ಮಹಿಳಾ ಮಂಡಲ ಮತ್ತು ಮಹಿಳಾ ಸಾಂತ್ವನ ಕೇಂದ್ರ ಕುಂದಾಪುರ ಇದರ ಅಧ್ಯಕ್ಷೆ ಸಮಾಜ ಸೆವಕಿ ರಾಧ ದಾಸ್ ಮಾತನಾಡಿ ‘ತಮ್ಮ ಮನೆಯ ವ್ರದ್ದರನ್ನು ಚೆನ್ನಾಗಿ ನೋಡಿಕೊಳ್ಳಿ, ಅವರನ್ನು ವ್ರದ್ದಾಶ್ರಮದಲ್ಲಿ ಇಡುವುದು ಸರಿಯಲ್ಲ, ಅಲ್ಲಿ ಅವರ ವೇದನೆ ನೋಡಲಾರದು ಎಂದು ಹೇಳುತ್ತಾ, ನಾನು ಎಷ್ಟೊ ಅತ್ಯಾಚಾರದ ಪ್ರಕರಣದಲ್ಲಿ ಶಿಕ್ಷೆ ನೀಡುವಲ್ಲಿ ಶ್ರಮಿಸಿದ್ದೇನೆ, ಇಂತಹ ಎಷ್ಟೊ ಪ್ರಕರಣದಲ್ಲಿ ಎರಡು ಕಡೆಯವರಿಗೆ ಒಟ್ಟು ಕೂಡಿಸಿ, ಅವರನ್ನು ಮದುವೆ ಮಾಡಿಸಿದ್ದೇನೆ, ಮಹಿಳೆಯ ಸಾಂತ್ವಾನ ಕೇಂದ್ರವನ್ನು ತೆರೆದಿದ್ದೇನೆ, ಸುಸಜ್ಜಿತ ಶವಾಗರವನ್ನು ನಿರ್ಮಿಸಿದೇನೆ, ಇದ್ಯಾಕೆ ನಾನು ಹೇಳುತ್ತಿದ್ದೇನೆ ಅಂದರೆ, ನನ್ನನ್ನೆ ನಾನು ಸಾಧಕಿಯೆಂದು ಬಿಂಬಿಸಿಕೊಳ್ಳಲು ಅಲ್ಲ, ನೀವು ಕೂಡಾ ಮಹಿಳೆಯರಾಗಿ ಮುಂದೆ ಇಂತಹ ಕೆಲಸಗಳನ್ನು ಮಾಡಿ, ಮಹಿಳೆಯರಿಗಾಗಿ ಶ್ರಮಿಸಬೇಕೆಂಬುದೆ ನನ್ನ ಉದ್ದೇಶ ಎಂದು ಹೇಳಿದರು.
ಕುಂದಾಪುರ, ಬಸ್ರೂರು, ಬೈಂದೂರು, ಪಿಯುಸ್ ನಗರ್, ಪಡುಕೋಣೆ, ಗಂಗೊಳ್ಳಿ ಮಹಿಳಾ ಘಟಕಗಳು ನ್ರತ್ಯ ಹಾಡುಗಳ ಪ್ರದರ್ಶನ ನೀಡಿದರು. ತ್ರಾಸಿ ಘಟಕವು ಪ್ರಹಸನ ಪ್ರದರ್ಶನ ಮಾಡಿದರೆ, ಕೋಟದ ಘಟಕವು ಪ್ರಾರ್ಥನೆ ಗೀತೆ ಹಾಡಿತು. ತಲ್ಲೂರು ಘಟಕವು ಉಪಚಾರ ಸೇವೆಯನ್ನು ಕೈಗೊಂಡಿತು. ಕೋಟ ಚರ್ಚಿನ ಧರ್ಮಗುರು ವಂ|ಆಲ್ಫೊನ್ಸ್ ಡಿಲಿಮಾ ಉಪಸ್ಥತರಿದ್ದರು
ಕುಂದಾಪುರ-ಬೈಂದೂರು ತಾಲೂಕುಗಳ ಭಾವನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಲೆಟ್ ಡಿಸಿಲ್ವಾ ಸ್ವಾಗತಿಸಿದರು.ಕಾರ್ಯದರ್ಶಿ ಜ್ಯೋತಿ ಡಿಮೆಲ್ಲೊ ವಂದಿಸಿದರು, ರೇನಿಟಾ ಬಾರ್ನೆಸ್ ಮತ್ತು ಆಶಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.