ಗ್ರಾಮೀಣ ಭಾಗದಲ್ಲಿ ಪಕ್ಷಾತೀತವಾಗಿ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳಿಗೆ ಮೊದಲ ಆಧ್ಯತೆ ನೀಡಲಾಗುತ್ತಿದೆ : ಶಾಸಕ ಕೆ.ಆರ್.ರಮೇಶ್‍ಕುಮಾರ್

ಗ್ರಾಮೀಣ ಭಾಗದಲ್ಲಿ ಪಕ್ಷಾತೀತವಾಗಿ ವಸತಿ ರಹಿತರಿಗೆ ವಸತಿ ನೀಡಲಾಗಿದೆ. ಕುಡಿಯುವ ನೀರು, ಸಮುದಾಯಭವನಗಳನ್ನು ನಿರ್ಮಿಸಲಾಗುತ್ತಿದೆ. ಮುಖ್ಯವಾಗಿ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳಿಗೆ ಮೊದಲ ಆಧ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಹೇಳಿದರು.
ಚಿಕ್ಕರಂಗೇಪಲ್ಲಿ ಗ್ರಾಮದಲ್ಲಿ ವಿವಿಧ ಯೋಜನೆಯಲ್ಲಿ 30 ಲಕ್ಷ ವೆಚ್ಚದ ಕಾಮಗಾರಿಗಳನ್ನು ಹಾಗು ಜಿಲ್ಲಾ ಕೋಮುಲ್ ಹಾಲು ಒಕ್ಕೂಟದಿಂದ ನಿರ್ಮಿಸಲಾದ ಹಾಲಿನ ಡೈರಿ ಕಟ್ಟಡವನ್ನು ಶುಕ್ರವಾರ ಉದ್ಗಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯು ರೈತ ಹಾಗೂ ಬಡ ಕುಟುಂಬಗಳ ಆರ್ಥಿಕವಾಗಿ ಸಭಲರಾಗಲು ಕಾರಣವಾಗಿದ್ದು, ರೈತರು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಮಾಡುವಂತೆ ಸಲಹೆ ನೀಡಿದರು.
ಗ್ರಾಮದಲ್ಲಿನ ಹಾಲು ಡೈರಿಯಲ್ಲಿ ದಿನಕ್ಕೆ 385 ಲೀಟರ್ ಉತ್ಪಾದನೆ ಆಗುತ್ತಿದ್ದು, ಇದರಿಂದ 4.20 ಲಕ್ಷ ಆದಾಯ ಇದೆ. ಈಗ ಬರುವ ಆದಾಯವು 4.20 ಲಕ್ಷ ದಿಂದ 8 ಲಕ್ಷ ಆದಾಯದ ಗುರಿ ಸೇರಬೇಕು. ಆಗ ನೀವು ಅಭಿವೃದ್ಧಿಯಾಗುತ್ತೀರಿ ಎಂದರು. ಜನರಿಗೆ ಒಳ್ಳೆಯ ಅಭಿವೃದ್ಧಿ ಕಾರ್ಯಗಳು ಮಾಡಿದರೆ ಮುಂದಿನ ದಿನಗಳಲ್ಲಿ ಪುನಃ ನಮ್ಮನ್ನ ಆಯ್ಕೆ ಮಾಡುತ್ತಾರೆ.
ಈ ನಿಟ್ಟಿನಲ್ಲಿ ಬಡ ಕುಟುಂಬಗಳ ಮಹಿಳೆಯರ ಏಳಿಗೆಗಾಗಿ ಡಿಸಿಸಿ ಬ್ಯಾಂಕ್ ವತಿಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲವಿತರಣೆಯು ಪಕ್ಷತೀತವಾಗಿ ಮಾಡಲಾಗಿದೆ. ಗ್ರಾಮದಲ್ಲಿನ ಎಲ್ಲಾ ಗ್ರಾಮಸ್ಥರು ಒಟ್ಟಾಗಿ ಸಲಹೆ ಸಹಕಾರಗಳೊಂದಿಗೆ ಹಬ್ಬ ಹರಿದಿನಗಳನ್ನು ಆಚರಣೆ ಮಾಡಿಕೊಳ್ಳುತ್ತಾ ಒಗ್ಗಾಟ್ಟಾಗಿ ಇರುವಂತೆ ಸಲಹೆ ನೀಡಿದರು.
ಅಂಗನವಾಡಿ ನೂತನ ಕಟ್ಟಡ, ಸಿಸಿ ರಸ್ತೆ , ಶಾಲಾ ಶೌಚಾಲಯ , ಶಾಲಾ ಕಾಂಪೌಂಡ್, ಸಿಸಿ ಚರಂಡಿ ರಸ್ತೆಯನ್ನು ಉದ್ಗಾಟಿಸಲಾಯಿತು. ಪಿಎಲ್‍ಡಿ ಬ್ಯಾಂಕ್ ತಾಲೂಕು ಅಧ್ಯಕ್ಷ ದಿಂಬಾಲ್ ಅಶೋಕ್ , ನೆಲವಂಕಿ ಗ್ರಾ.ಪಂ.ಅಧ್ಯಕ್ಷೆ ಗೌತಮಿ ಮುನಿರಾಜು, ಸದಸ್ಯ ಸಿ.ಎಂ.ರಮೇಶ್ , ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸಂದ್ರ ಕೆ.ಆರ್.ಶಿವಾರೆಡ್ಡಿ, ಮುಖಂಡರಾದ ಆರ್.ವೆಂಕಟೇಶ್‍ಮೂರ್ತಿ, ಕೆ.ಕೆ.ಮಂಜು, ಬೋರ್‍ವೈಲ್ ಕೃಷ್ಣಾರೆಡ್ಡಿ, ಎಂಸಿಎಸ್ ಅಧ್ಯಕ್ಷ ನಾರಾಯಣಸ್ವಾಮಿ, ರಮಣಾರೆಡ್ಡಿ, ಮುನಿಯಪ್ಪ, ಅಮರನಾರಾಯಣ, ಶ್ರೀನಿವಾಸ್ ಕೋಮುಲ್ ಶ್ರೀನಿವಾಸಪುರ ಶಿಬಿರ ಕಚೇರಿ ವ್ಯವಸ್ಥಾಪಕ ಮುನಿರಾಜು ಇದ್ದರು.