ಕುಂದಾಪುರ, ಮಾ.20: ಇಲ್ಲಿನ ಕಾರ್ಮೆಲ್ ಸಂಸ್ಥೆಯ ಕಾರ್ಮೆಲ್ ಧರ್ಮಭಗಿನಿಯರು ಸಂತ ಜೋಸೆಫರಿಗೆ ಸಮರ್ಪಿಸಲ್ಪಟ್ಟ ಕಾನ್ವೆಂಟ್ ಮತ್ತು ವಿದ್ಯಾ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುತ್ತಾರೆ ದಿನಾಂಕ 19 ರಂದು ಸಂತ ಜೋಸೆಫರ ಹಬ್ಬ ಇದರ ಪ್ರಯುಕ್ತ ದಿನಾಂಕ 20 ರಂದು ಪವಿತ್ರ ಬಲಿದಾನವನ್ನು ಅರ್ಪಿಸಿ ಹಬ್ಬವನ್ನು ಆಚರಿಸಿದರು.
ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪ್ರಧಾನ ಗುರುಗಳಾಗಿ ಪವಿತ್ರ ಬಲಿದಾನವನ್ನು ಅರ್ಪಿಸಿ ಧರ್ಮಭಗಿನಿಯರಿಗೆ ಶುಭ ಕೋರಿ ‘ಕೆಲವು ಪಂಗಡದವರು ಮೇರಿ ಮಾತೆಯನ್ನು ತಮ್ಮ ಮನೆಯೊಳಗೆ ಸೇರಿಸ್ಕೊಳ್ಳುವುದಿಲ್ಲ, ಆದರೆ ಸಂತ ಜೋಸೆಫ್ ಮೇರಿ ಮಾತೆಯ ಮೇಲೆ ಕಳಂಕ ಬಂದಾಗ, ದೇವರು ಮೇರಿಯನ್ನು ಸ್ವೀಕರಿಸಬೇಕೆಂದು ತಿಳಿಸಿದಾಗ ಸಂತ ಜೋಸೆಫನಿಗೆ ತಿಳಿಸಿದಾಗ, ಸಂತ ಜೋಸೆಫನು ದೇವರ ಆಣತಿಯಂತೆ, ಮೇರಿ ಮಾತೆಯನ್ನು ಸ್ವೀಕರಿಸಿ ಅವಳನ್ನು ತನ್ನ ಮನೆಗೆ ಕರೆದುಕೊಂಡು ಬಂದನು, ಇದೇ ರೀತಿ ಮೇರಿಮಾತೆಯನ್ನು ನಾವೆಲ್ಲರೂ ನಮ್ಮ ಮನ ಮತ್ತು ಮನೆಗಳಲ್ಲಿ ಕರೆದುಕೊಂಡು ಹೋಗಬೇಕು’ ಎಂದು ತೀಳಿಸಿದರು.
ಮಂಗಳೂರು ಕಾರ್ಮೆಲ್ ಸಭೆಯ ಕೌನ್ಸಿಲರ್. ಬಾಲಯೇಸು ಆಶ್ರಮದ ವಂ|ಧರ್ಮಗುರು ದೀಪ್ ಫೆರ್ನಾಂಡಿಸ್ “ಸಂತ ಜೋಸೆಫರು ನಮ್ಮ ರಕ್ಷಕನಾದ ಯೇಸು ಸ್ವಾಮಿಯ ರಕ್ಷಕನು, ಅಂದರೆ ರಕ್ಷಕನ ರಕ್ಷಕನು, ಯೇಸು ಚಿಕ್ಕವನಿರುವಾಗ ಹಲವಾರು ಗಂಡಾಂತರಗಳು ಬರುತ್ತವೆ. ಆವಾಗ ಯೇಸು ಮತ್ತು ಮೇರಿಯನ್ನು ಆ ಎಲ್ಲಾ ಗಂಡಾಂತರಗಳಿಂದ ರಕ್ಷಿಸಿದವನು ಸಂತ ಜೋಸೆಫ್. ಎಲ್ಲರೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ತಮ್ಮ ಪಾತ್ರ ಪ್ರಧಾನ ಪಡೆಯಬೇಕೆಂದು ಆಶಿಸುತ್ತಾರೆ, ಆದರೆ ಸಂತ ಜೋಸೆಫ್ ಹಾಗಲ್ಲ, ತಮ್ಮ ಪಾತ್ರ ಪ್ರಧಾನತನ ಪಡೆಯಬೇಕೆಂದು ಆಶಿಸಲೇ ಇಲ್ಲಾ. ದೇವರಿಗೆ ವಿಧೇರಾಗಿ ತಮ್ಮೆಲ್ಲಾ ಕರ್ತವ್ಯಗಳನ್ನು ಮಾಡುತ್ತಾ ಬಂದಂತಹ ಮಹಾ ಸಂತರು. ಸಂತ ವೆರೋನಿಕಳು ಸಂತ ಜೋಸೆಫರ ಅನನ್ಯ ಭಕ್ತಳು, ಸಂತ ಜೋಸೆಫರು ನನಗೆ ಬೇಕಾದುದು ಎಲ್ಲವನ್ನು ನೀಡಿದ್ದಾನೆ ಎಂದು ಪ್ರತಿಪಾದಿಸಿ ಅವಳು ಸಂತ ಜೋಸೆಫರ ಹೆಸರಿನಲ್ಲಿ ಕಾನ್ವೆಂಟ್ ಮತ್ತು ಶಾಲೆಗಳನ್ನು ಸ್ಥಾಪಿಸಿದಳು. ಕೆಥೊಲಿಕ್ ಪರಮೊಚ್ಚ ಪೆÇೀಪ್ ಸ್ವಾಮಿಗಳು ಸಂತ ಜೋಸೆಫರನ್ನು ಕೆಥೊಲಿಕ್ ಧರ್ಮಸಭೆಯ ಸಾರ್ವತಿಕ ಪಾಲಕ ಎಂದು ಘೋಶಿಸಿ ಮಹತ್ತರದ ಸ್ಥಾನವನ್ನು ನೀಡಿ ಗೌರವಿಸಿದ್ದಾರೆ. ಸಂತ ಜೋಸೆಫರು ದೇವರ ಎಲ್ಲಾ ಆಣತಿಗಳನ್ನು ವಿಧೆಯತೆಯಿಂದ ಪಾಲಿಸಿದ ಮಹಾ ಸಂತರು. ಅವರು ನಮಗೆಲ್ಲ ದೇವರಲ್ಲಿ ವಿಧೇಯಕರಾಬೇಕು ಎಂದು ಸಂದೇಶ ನೀಡುತ್ತಾನೆ” ಎಂದು ತಮ್ಮ ಸಂದೇಶದಲ್ಲಿ ತಿಳಿಸಿದರು.
ಕೋಟೆಶ್ವರ ಚರ್ಚಿನ ಧರ್ಮಗುರು ವಂ|ಸಿರಿಲ್ ಮಿನೆಜೆಸ್ ಮತ್ತು ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಸಹಬಲಿದಾನವನ್ನು ಅರ್ಪಿಸಿದರು. ಸಂತ ಜೋಸೆಫ್ ಕಾನ್ವೆಂಟಿನ ಧರ್ಮಭಗಿನಿಯರು, ಅತಿಥಿ ಧರ್ಮಭಗಿನಿಯರು, ಕಾರ್ಮೆಲ್ ಭಗಿನಿಯರ ಸಹಾಯಕ್ಕಾಗಿರುವ ಬ್ಲೊಸಮ್ ಪಂಗಡದವರು ಮತ್ತು ಭಕ್ತಾಧಿಗಳು ಹಬ್ಬದ ಬಲಿದಾನದಲ್ಲಿ ಭಾಗಿಯಾಗಿದ್ದರು. ಕಾನ್ವೆಂಟ್ ಮುಖ್ಯಸ್ಥೆ ಧರ್ಮಭಗಿನಿ ಸಂಗೀತ ವಂದಿಸಿದರು.