ತಾಲ್ಲೂಕಿನಾದ್ಯಂತ ಒತ್ತುವರಿ ಆಗಿರುವ ಕೆರೆ ರಾಜಕಾಲುವೆಗಳನ್ನು ತೆರೆವುಗೊಳಿಸಿ ಮುಂಗಾರು, ಅಕಾಲಿಕ ಮಳೆಗೆ ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ನೀಡಿ- ರೈತ ಸಂಘ

ಶ್ರೀನಿವಾಸಪುರ, ಮಾ.19: ತಾಲ್ಲೂಕಿನಾದ್ಯಂತ ಒತ್ತುವರಿ ಆಗಿರುವ ಕೆರೆ ರಾಜಕಾಲುವೆಗಳನ್ನು ತೆರೆವುಗೊಳಿಸಲು ಹಾಗೂ ಮುಂಗಾರು ಅಕಾಲಿಕ ಆಲಿಕಲ್ಲು ಮಳೆಯಿಂದ ಬೆಳೆ ಸಮೀಕ್ಷೆ ಮಾಡಲು ವಿಶೇಷ ತಂಡ ರಚನೆ ಮಾಡಿ ಪ್ರತಿ ಎಕರೆ ಮಾವಿಗೆ 5 ಲಕ್ಷ ವಾಣಿಜ್ಯ ಬೆಳೆಗಳಿಗೆ 2 ಲಕ್ಷ ಪರಿಹಾರಕ್ಕಾಗಿ ತಾಲ್ಲೂಕಾಡಳಿತವನ್ನು ಒತ್ತಾಯಿಸಿ ಮಾ.21 ರಂದು ನಷ್ಟ ಬೆಳೆ ಸಮೇತ ತಾಲ್ಲೂಕು ಕಚೇರಿ ಮುತ್ತಿಗೆ ಹಾಕಲು ರೈತ ಸಂಘಧ ಸಭೆಯಲ್ಲಿ ತಿರ್ಮಾನಿಸಲಾಯಿತು.
ಅಕಾಲಿಕ ಮುಂಗಾರು ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ಬದುಕು ಕಟ್ಟಿಕೊಳ್ಳುತ್ತಿದ್ದ ರೈತರ ಸಾವಿರಾರು ಹೆಕ್ಟೆರ್ ಮಾವು ಪಸಲು ರಾತ್ರೋ ರಾತ್ರಿ ನೆಲಕ್ಕೆ ಉರಳಿರುವ ಬೆಳೆಯನ್ನು ನೋಡಿ ರೈತ ದಿಕ್ಕು ತೋಚದೆ ಹಾಕಿದ ಬಂಡವಾಳ ನೀರಿನಲ್ಲಿ ಕೊಚ್ಚಿ ಹೋಗಿದ್ದರೂ ಬೆಳೆ ಸಮೀಕ್ಷೆ ಮಾಡಿ ಪರಿಹಾರ ಕೊಡಬೇಕಾದ ಅಧಿಕಾರಿಗಳು ನಾಪತ್ತೆ ಆಗಿದ್ದಾರೆಂದು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್ ಗೌಡ ಅವ್ಯವಸ್ಥೆ ವಿರುದ್ದ ಅಸಮಾದಾನ ವ್ಯಕ್ತಪಡಿಸಿದರು.
ಸತತ ಎರಡು ವರ್ಷಗಳಿಂದ ಮುಂಗಾರು ಮಳೆ ಆರ್ಭಟಕ್ಕೆ ಕೈಗೆ ಬರುವ ಮಾವು ಪಸಲು ರಾತ್ರೋ ರಾತ್ರೋ ಸಂಪೂರ್ಣವಾಗಿ ನೆಲಕಚ್ಚುತ್ತಿದೆ ಅದರ ಜೊತೆಗೆ ಟೊಮೋಟೊ ಕ್ಯಾಪ್ಸಿಕಂ, ಮತ್ತಿತರ ವಾಣಿಜ್ಯ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿ ಖಾಸಗಿ ಸಾಲ ಮಾಡಿ ಬಂಡವಾಳ ಹಾಕಿ ಬೆಳೆದಿರುವಂತಹ ಬೆಳೆ ಕಣ್ಣುಮುಂದೆಯೇ ನಾಶವಾಗಿ ಹಾಕಿದ ಬಂಡವಾಳ ಕೈಗೆ ಸಿಗದೆ ಖಾಸಗಿ ಸಾಲಕ್ಕೆ ಸಿಲುಕಿ ಔಷಧಿ ಕೂಲಿ ನೀಡುವವವರು ಮನೆ ಬಾಗಿಲಿಗೆ ಬರುವಂತಹ ಪರಿಸ್ಥಿತಿ ಇದೆ ಎಂದು ರೈತರ ಅವ್ಯವಸ್ಥೆಯ ಬಗ್ಗೆ ಅಳಲು ತೋಡಿಕೋಂಡರು.
ತಾಲ್ಲೂಕಾದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಕಳೆದ ಎರಡು ವರ್ಷ ಮುಂಗಾರು ಮಳೆ ಆರ್ಭಟಕ್ಕೆ ಮಳೆ ನೀರು ಸಮರ್ಪಕವಾಗಿ ಕೆರೆಗಳಿಗೆ ಹರಿದು ಹೋಗಲು ರಾಜಕಾಲುವೆಗಳಿಲ್ಲದೆ ಮಳೆ ನೀರು ರೈತರ ತೋಟ ಹಾಗೂ ಬಡವರ ಮನೆಗಳಿಗೆ ನುಗ್ಗಿ ಅವಾಂತರಗಳು ಸೃಷ್ಠಿ ಮಾಡಿರುವುದು ಕಣ್ಣುಮುಂದೆ ಇದ್ದರೂ ಇನ್ನೂ ಅಧಿಕಾರಿಗಳಿಗೆ ಬುದ್ದಿ ಬಂದಂತಿಲ್ಲ, ಸಮಸ್ಯೆ ಆದಾಗ ನೆಪ ಮಾತ್ರಕ್ಕೆ ಸ್ಥಳಕ್ಕೆ ಬೇಟಿ ನೀಡಿ ಕೈ ತೊಳೆದುಕೊಳ್ಳುವ ಜನ ವಿರೋದಿ ನೀತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಮಳೆಯಾಗುವ ಸಾದ್ಯತೆ ಇರುವುದರಿಂದ ಮುಂಜಾಗೃತವಾಗಿ ಒತ್ತುವರಿ ಆಗಿರುವ ಕೆರೆ ರಾಜಕಾಲುವೆ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಅಕಾಲಿಕ ಮುಂಗಾರು ಆಲಿಕಲ್ಲು ಮಳೆಗೆ ನಷ್ಟವಾಗಿರುವ ಪ್ರತಿ ಎಕರೆ ಮಾವಿಗೆ 5 ಲಕ್ಷ ಇತರ ಬೆಳೆಗಳಿಗೆ 2 ಲಕ್ಷ ಪರಿಹಾರ ನೀಡಬೇಕೆಂದು ಮಾ.21 ರ ಮಂಗಳವಾರ ನಷ್ಟ ಮಾವು ಬೆಳೆ ಸಮೇತ ತಾಲ್ಲೂಕು ಕಚೇರಿಯ ಮುಂದೆ ಹೋರಾಟ ಮಾಡುವ ನಿರ್ದಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ , ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಆಲವಟ್ಟಿ ಶಿವ, ವೆಂಕಟ್, ಸಹದೇವಣ್ಣ, ಶೆಕ್‍ಶಪಿವುಲ್ಲಾ , ಸಂತೋಷ್, ಹೆಬ್ಬಣಿ ಅನಂದ್‍ರೆಡ್ಡಿ, ಶ್ರೀಕಾಂತ್, ಕೋಟೆ ಶ್ರೀನಿವಾಸ್, ಮಂಜುಳಾಮ್ಮ, ಶೈಲಜ, ರಾಧ, ಬೈರಮ್ಮ, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ರಾಮಸಾಗರ ವೇಣು, ಯಲ್ಲಪ್ಪ,, ಹರೀಶ್, ಮುಂತಾದವರಿದ್ದರು.