ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೆ ನಾಪತ್ತೆ ಆಗಿರುವ ಸಚಿವ ಮುನಿರತ್ನ, ಶಾಸಕ ಹೆಚ್.ನಾಗೇಶ್‍ ನಾಪತ್ತೆ, ಹುಡುಕಿ ಕೊಡಿ- ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡರಿಂದ ಮುಖ್ಯ ಮಂತ್ರಿಗಳಿಗೆ ಒತ್ತಾಯ

ಕಾಣೆಯಾದ ಶಾಸಕ ಹೆಚ್.ನಾಗೇಶ್‍

ಮುಳಬಾಗಿಲು, ಮಾ.11: ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೆ ನಾಪತ್ತೆ ಆಗಿರುವ ಉಸ್ತುವಾರಿ ಸಚಿವರಾದ ಮುನಿರತ್ನ ಹಾಗೂ ಮುಳಬಾಗಿಲು ಕ್ಷೇತ್ರದ ಶಾಸಕರದಾದ ಹೆಚ್.ನಾಗೇಶ್‍ರು ನಾಪತ್ತೆಯಾಗಿದ್ದು ಹುಡುಕಿಕೊಡಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾನ್ಯ ಮುಖ್ಯ ಮಂತ್ರಿಗಳನ್ನು ಪತ್ರಿಕಾ ಹೇಳಿಕೆ ಮುಖಾಂತರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರವರು ಚುನಾವಣೆ ಇನ್ನೂ 2 ತಿಂಗಳು ಬಾಕಿ ಇರುವಾಗಲೇ ಮುಳುಬಾಗಿಲು ಕ್ಷೇತ್ರದ ಶಾಸಕರಾದ ಹೆಚ್.ನಾಗೇಶ್‍ರವರು ಜನ ಸಾಮಾನ್ಯರ ಕೈಗೆ ಸಿಗದೆ ನಾಪತ್ತೆ ಆಗಿದ್ದಾರೆ. ತಾಲ್ಲೂಕಿನಾದ್ಯಾಂದ ಹೆಜ್ಜೆ ಹೆಜ್ಜೆಗೂ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಚಾರ ನೂರಾರು ಕೋಟಿ ವೆಚ್ಚದಲ್ಲಿ ಅಭಿವೃದ್ದಿಪಡಿಸುತ್ತಿರುವ ಕಾಮಗಾರಿಗಳ ಗುದ್ದಲಿ ಪೂಜೆಗೆ ಮಾತ್ರ ಸೀಮಿತವಾಗಿರುವ ಜೊತೆಗೆ ಹದಗೆಟ್ಟಿರುವ ರಸ್ತೆಗಳು ನಿಯಂತ್ರಣಕ್ಕೆ ಬಾರದ ಬೆಳೆಯ ರೋಗಗಳು ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಜನರ ಮದ್ಯೆ ಇದ್ದು, ಜನ ನಾಯಕನಾಗಬೇಕಾದ ಶಾಸಕರು ನಾಪತ್ತೆಯಾಗಿ ಕಚೇರಿಗೂ ಬೀಗ ಹಾಕುವ ಮೂಲಕ ಜನ ವಿರೋದಿ ನೀತಿಯನ್ನು ಅನುಸರಿಸುತ್ತಿದ್ದಾರೆ.
ಕಷ್ಟ ಹೇಳಿಕೊಳ್ಳಲು ಬರುವ ಜನ ಸಾಮಾನ್ಯರು ಕಚೇರಿಯ ಬೀಗ ನೋಡಿ ವಾಪಸ್ಸು ಹೋಗುವ ಜೊತೆಗೆ ಕಷ್ಟಕ್ಕೆ ಸ್ಪಂದಿಸದ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದು ಮುಳಬಾಗಿಲು ಕ್ಷೇತ್ರದ ಸಮಸ್ಯೆಯಾದರೆ ಇನ್ನೂ ತೋಟಗಾರಿಕಾ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನಂ ರವರು ಸಹ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ತಮ್ಮ ಪಕ್ಷದ ಆಭ್ಯರ್ಥಿಗಳಿಗೆ ಚುನಾವಣೆ ಖರ್ಚಿಗೆ ಕೋಟಿ ಕೋಟಿ ಹಣ ನೀಡುವ ಇವರು ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಮಾರುಕಟ್ಟೆಯ ಜಾಗದ ಸಮಸ್ಯೆ, ರಸ್ತೆ, ಕುಡಿಯುವ ನೀರು, ಗ್ರಾಮೀಣ ಪ್ರದೇಶಗಳ ಜನರ ಕಷ್ಟಕ್ಕೆ ಸ್ಪಂದಿಸದೇ ನಾಪತ್ತೆ ಆಗಿರುವುದು ದುರಾದೃಷ್ಟಕರ ಇನ್ನೂ ನೆಪ ಮಾತ್ರಕ್ಕೆ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಕಚೇರಿಯಿದ್ದು, ಪ್ರತಿ ದಿನ ಕಚೇರಿಗೆ ಬೀಗ ಹಾಕಿರುತ್ತಾರೆ ಹೊರತು ಯಾವುದೇ ಪ್ರಯೋಜನವಿಲ್ಲ,
ಇಷ್ಟವಿಲ್ಲದ ಉಸ್ತುವಾರಿ ಸಚಿವರ ಸ್ಥಾನ ಪಡೆದು ಹೋದ ಪುಟ್ಟ ಬಂದಾ ಪುಟ್ಟ ಎಂಬ ಗಾದೆಯಂತೆ ಜಿಲ್ಲೆಯ ಜಲ್ವಂತ ಸಮಸ್ಯೆಗಳಿಗೆ ಸ್ಪಂದಿಸದ ಉಸ್ತುವಾರಿ ಸಚಿವರು ಹಾಗೂ ಮುಳಬಾಗಿಲು ಕ್ಷೇತ್ರದ ಶಾಸಕರಾದ ಹೆಚ್.ನಾಗೇಶ್‍ರವರನ್ನು ಹುಡುಕಿಕೊಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.