ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಬಿಷಪರ ನಿವಾಸದಲ್ಲಿರುವ ಕಛೇರಿಯ ನವೀಕರಣದ ಉದ್ಘಾಟನೆ

ಮಂಗಳೂರು: ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಬಿಷಪರ ನಿವಾಸದಲ್ಲಿರುವ ಕಛೇರಿಯ ನವೀಕರಣದ ಉದ್ಘಾಟನೆ ಹಾಗೂ ಆಶೀರ್ವಚನ 06-03-2023 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಜರುಗಿತು. ಉದ್ಘಾಟನೆಯನ್ನು ಹಿರಿಯ ಮಾಜಿ ಅಧ್ಯಕ್ಷರಾದ ಶ್ರೀ. ಕಾಸ್ಮಿರ್ ಮಿನೇಜಸ್ ನೆರವೇರಿಸಿದರು. ಆಶೀರ್ವಚನವನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಇದರ ಅಧ್ಯಾತ್ಮಿಕ ನಿರ್ದೇಶಕರಾದ ಅತಿ ವಂದನೀಯ.ಫಾ| ಡಾ.ಜೆ.ಬಿ.ಸಲ್ಡಾನ್ಹ ಅವರು ಕಛೇರಿಯ ಆಶೀರ್ವಚನಗೊಳಿಸಿ, ಪ್ರಾರ್ಥನೆ ಸಲ್ಲಿಸಿದರು.
ನಂತರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಲೋಬೋ ಪ್ರಸ್ತಾವಿಕ ಭಾಷಣದಲ್ಲಿ ಕಥೊಲಿಕ್ ಸಭಾ ಕಚೇರಿಯ ಅವಶ್ಯಕತೆಯ ಬಗ್ಗೆ ವಿವರವನ್ನು ನೀಡಿ ಎಲ್ಲರನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಶ್ರೀ ಕಾಸ್ಮಿರ್ ಮಿನೇಜಸ್‍ರವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ತಮ್ಮ ನುಡಿಯಲ್ಲಿ ಶ್ರೀ ಕಾಸ್ಮಿರ್ ಮಿನೇಜಸ್ ಕ್ಯಾಥೋಲಿಕ್ ಸಭಾದ ಪ್ರಾರಂಭಿಕ ದಿನಗಳ ಹೋರಾಟಗಳು ಮತ್ತು ತೊಂದರೆಗಳ ಬಗ್ಗೆ ನೆನಪಿಸಿದರು ಹಾಗೂ ನಮ್ಮ ಸಮುದಾಯವನ್ನು ಬಳಿಷ್ಟಗೊಳಿಸಲು ಕರೆ ನೀಡಿದರು.
ಶ್ರೀ ಮರಿಟ್ಟೊ ಸಿಕ್ವೇರಾರವರು ಕಛೇರಿಯ ನವೀಕರಣಗೊಳಿಸಿದ್ದಕ್ಕೆ ಅಧ್ಯಕ್ಷರನ್ನು ಅಭಿನಂದಿಸಿದರು ಮತ್ತು ಅವರ ಸಾಮಥ್ರ್ಯ ಮತ್ತು ಕಾರ್ಯವನ್ನು ಶ್ಲಾಘಿಸಿದರು. ಹಾಗೆಯೇ ಅವರು ಬಿಷಪ್ ಹೌಸ್‍ನಲ್ಲಿ ಹೇಗೆ ಕಚೇರಿಯನ್ನು ಪಡೆದರು ಎಂಬುದನ್ನು ನೆನಪಿಸಿಕೊಂಡರು, ನಮ್ಮ ಸಮುದಾಯದ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡಲು ಹಿಂದಿನ ಎಲ್ಲಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಒಂದು ಮಾದರಿಯಾಗಬೇಕಾಗಿ ಪ್ರೇರೇಪಿಸಿದರು.
ಅತಿ ವಂದನೀಯ.ಫಾ| ಡಾ.ಜೆ.ಬಿ.ಸಲ್ಡಾನ್ಹ, ತಮ್ಮ ಭಾಷಣದಲ್ಲಿ ನಮ್ಮ ಸಮುದಾಯದ ಯೋಗ ಕ್ಷೇಮಕ್ಕಾಗಿ ಕ್ಯಾಥೋಲಿಕ್ ಸಭೆಯು ಯಾವುದೇ ವೈಮನಸ್ಸು ಇಟ್ಟುಕೊಳ್ಳದೆ ಒಟ್ಟಾಗಿ ಕೆಲಸ ಮಾಡಿ ನಮ್ಮ ಸಮುದಾಯವನ್ನು ಬಲಿಷ್ಟಪಡಿಸಲು ಕರೆ ಕೊಟ್ಟು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಎಸ್ಟೇಟ್ ಮ್ಯಾನೇಜರ್ ಆದ ವಂದನೀಯ.ಫಾ| ಮ್ಯಾಕ್ಸಿಮ್ ರೊಸಾರಿಯೊ, ಹಿಂದಿನ ಆಧ್ಯಾತ್ಮಿಕ ನಿರ್ದೇಶಕರಾದ ಫಾ|ವಾಲ್ಟರ್‍ಡಿಮೆಲ್ಲೊ ಹಾಗೂ ಫಾ|.ಜೆ.ಬಿ.ಕ್ರಾಸ್ತಾ, ಆಮ್ಚೊ ಸಂದೇಶ್ ಆಡಳಿತ ಮಂಡಳಿಯ ಸಂಚಾಲಕರಾದ ಎಲ್ರೊಯ್ ಕಿರಣ್ ಕ್ರಾಸ್ಟೊ, ಸಮನ್ವಯ ಸಮಿತಿ ಸಂಚಾಲಕರಾದ ಶ್ರೀ ನೈಜಿಲ್ ಪಿರೇರಾ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ಶ್ರೀ.ಎಲ್.ಜೆ. ಫೆನಾರ್ಂಡಿಸ್, ವಾಲ್ಟರ್‍ಡಿಸೋಜಾ, ಆಂಡ್ರ್ಯೂ ನೊರೊನ್ಹಾ, ಪೀಟರ್ ಜೆರಿ ರೋಡ್ರಿಗಸ್, ಫ್ಲೇವಿ ಡಿಸೋಜಾ, ಸಮನ್ವಯ ಸಮಿತಿ ಸಹ- ಸಂಚಾಲಕರಾದ ಶ್ರೀ ವಲೇರಿಯನ್ ಫೆರ್ನಾಂಡಿಸ್ ಮತ್ತು ಕೇಂದ್ರ, ವಲಯ ಮತ್ತು ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಬಳಿಕ ಕಥೊಲಿಕ್ ಸಭಾ ಕಛೇರಿಯ ನವೀಕರಣ ಕಾರ್ಯಕ್ಕೆ ಸಹಕರಿಸಿದವರಿಗೆ ಪುಷ್ಪಗುಚ್ಛಗಳನ್ನು ನೀಡಿ ಗೌರವಿಸಲಾಯಿತು
ಶ್ರೀ ಎಲ್ರೋಯ್ ಕಿರಣ್ ಕ್ರಾಸ್ಟೊ ವಂದಿಸಿದರು. ಕೋಶಾಧಿಕಾರಿ ಅಲ್ಫೋನ್ಸ್ ಫೆನಾರ್ಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.