ಕಥೊಲಿಕ್ ಸಭಾ ಹಾಗೂ ಸ್ತ್ರೀ ಸಂಘಟನೆಗಳಿಂದ ಆಂಜೆಲೊರ್ ಧರ್ಮಕೇಂದ್ರದಲ್ಲಿ ಮಹಿಳಾ ದಿನಾಚರಣೆ


ಮಂಗಳೂರು : ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ದಿನಾಂಕ 5.3.2023ರಂದು ಗಾರ್ಡಿಯನ್ ಏಂಜಲ್ ಚರ್ಚ್, ಆಂಜೆಲೊರ್, ನಾಗುರಿ, ಇದರ ಕಥೊಲಿಕ್ ಸಭಾ ಹಾಗೂ ಸ್ತ್ರೀ ಸಂಘಟನೆಗಳ ಆಂಜೆಲೊರ್ ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ, ರಾಜಕೀಯ, ಆರೋಗ್ಯ, ಆಟೋಟ, ಕೃಷಿ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಮಾಜಸೇವೆಗೈದ 11 ಮಹಿಳೆಯರನ್ನು ಸನ್ಮಾನಿಸಲಾಯಿತು.

ಶ್ರೀಮತಿ ಫ್ಲೋರಾ ಕ್ಯಾಸ್ತೆಲಿನೊ, ವಿಭಾಗ ಮುಖ್ಯಸ್ಥೆ – ಕೊಂಕಣಿ ವಿಭಾಗ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು, ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಆಂಜೆಲೊರ್ ಧರ್ಮಪ್ರಾಂತ್ಯದ ಪ್ರಧಾನ ಧರ್ಮಗುರುಗಳಾದ ವಂ. ಸ್ವಾ. ವಿಲಿಯಂ ಮಿನೇಜಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಧರ್ಮಪ್ರಾಂತ್ಯದ ಸಹಾಯಕ ಧರ್ಮಗುರುಗಳಾದ ವಂ. ಸ್ವಾ. ಲಾರೆನ್ಸ್ ಕುಟಿನ್ಹೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಶ್ರೀ ಪೌಲ್ ರೊಡ್ರಿಗಸ್, ಕಾರ್ಯದರ್ಶಿ ಶ್ರೀಮತಿ ಲೊಲಿನಾ ಡಿ’ಸೋಜಾ, 21 ಆಯೋಗಗಳ ಸಂಯೋಜಕಿ ಕು. ರೆನಿಟಾ ಮಿನೇಜಸ್, ಕಥೊಲಿಕ್ ಸಭಾದ ಅಧ್ಯಕ್ಷ ಶ್ರೀ ಫೆಲಿಕ್ಸ್ ಮೋರಾಸ್, ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಸುನಿತಾ ಡಿ’ಸೋಜಾ, ಶ್ರೀಮತಿ ರೆನಿಟಾ ವಾಸ್ ಹಾಜರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಶ್ರೀ ರಾಜೇಶ್ ಮಿಸ್ಕಿತ್ ಹಾಗೂ ಪಂಗಡದವರು ಮಹಿಳಾ ದಿನಾಚರಣೆಯ ಅಭಿನಂದನಾ ಗೀತೆಯನ್ನು ಹಾಡಿದರು. ಸ್ತ್ರೀ ಸಂಘಟನೆಯ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಶ್ರೀ ಮನೋಹರ್ ಸಲ್ಡಾನಾ ಹಾಗೂ ಶ್ರೀಮತಿ ಲೊಲಿನಾ ಡಿ’ಸೋಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.