ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು

ಶ್ರೀನಿವಾಸಪುರ 1 : ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರಿಗೆ ತಾಲೂಕಿನ ಸಮಾನ ಮನಸ್ಕರ ಸಾಂಸ್ಕøತಿಕ ವೇದಿಕೆ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ದಲಿತ ಹಿರಿಯ ಮುಖಂಡ ಮುನಿಸ್ವಾಮಿ ತಿಳಿಸಿದರು.
ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಕಚೇರಿ ಆವರಣದಲ್ಲಿ ಶನಿವಾರ ತಾಲೂಕಿನ ಸಮಾನ ಮನಸ್ಕರ ಸಾಂಸ್ಕøತಿಕ ವೇದಿಕೆ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರಿಗೆ ಅಭಿನಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. .
ಮಾರ್ಚ್ 6 ರ ಸೋಮವಾರದೊಂದು ಬೆ11;30 ಕ್ಕೆ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರನ್ನ ಮುಳಬಾಗಿಲು ವೃತ್ತದಿಂದ ಪುಷ್ಪಪಲ್ಲಕಿಯಲ್ಲಿ ಗೌರವಯುತವಾಗಿ ಎಂಜಿ ರಸ್ತೆಯ ಮೂಲಕ ತಾಲೂಕು ಕಚೇರಿ ಆವರಣದ ವರೆಗೂ ಕರೆತಂದು, ಈ ಸಭೆಯು ಶಾಸಕರಾದ ಕೆ.ಆರ್.ರಮೇಶ್‍ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಶಾಸಕರು ಪದ್ಮಶ್ರೀ ಪುರಸ್ಕøತರಾದ ಮುನಿವೆಂಕಟಪ್ಪ ರವರನ್ನ ಅಭಿನಂದಿಸಲಾಗುವುದು ಎಂದು ಮಾಹಿತಿ ನೀಡಿದರು .
ಪಿಎಲ್‍ಡಿ ಬ್ಯಾಂಕ್ ತಾಲೂಕು ಅಧ್ಯಕ್ಷ ದಿಂಬಾಲ್ ಅಶೋಕ್ ಮಾತನಾಡಿ ಒಂದು ಕಾಲದಲ್ಲಿ ತಮಟೆ ವಾದ್ಯವು ಉದಾಸೀನವಿತ್ತು . ಆದರೆ ಮುನಿವೆಂಕಟಪ್ಪ ರವರು ತಮಟೆ ವಾದ್ಯದಲ್ಲಿ ಪ್ರಾವೀಣ್ಯತೆ ಹೊಂದಿರುವ ಇವರು ದೇಶ, ವಿದೇಶಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿ ಪ್ರಖ್ಯಾತರಾಗಿ , ವಿವಿಧ ರೀತಿಯ ಪುರಸ್ಕಾರವನ್ನು ಪಡೆದಿರುವ ಅದ್ಭುತ ಕಲಾವಿದನಿಗೆ ಇತ್ತೀಚಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರವು ನೀಡಿ ಗೌರವಿಸಲಾಗಿದೆ. ಇಂತಹ ಅದ್ಭುತ ಕಲಾವಿದನಿಗೆ ಜ್ಯಾತೀತವಾಗಿ, ಪಕ್ಷಾತೀತವಾಗಿ ಕಾರ್ಯಕ್ರಮದಲ್ಲಿ ಪಾಲ್ಗುಂಡು ಕಲಾವಿದನಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಜಿ.ಪಂ.ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಮಾತನಾಡಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರು ವಿಶೇಷವಾಗಿ ತಾಲೂಕಿನ ಅಳಿಯರಾಗಿರುವ ಇವರು , ಇವರಿಂದ ತಾಲೂಕಿಗೆ ಒಂದು ರೀತಿಯಲ್ಲಿ ಗೌರವ ಸಿಕ್ಕ ಹಾಗೆ . ತಾಲೂಕಿನ ಕಲಾಭಿಮಾನಿಗಳು ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಿಗೆ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಬೇಕು. ಈ ಒಂದು ಕಾರ್ಯಕ್ರಮವು ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಗಬೇಕು ಎಂದರು.
ತಾಲೂಕಿನ ಕಲಾವಿದರು, ಕವಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ಕಲಾಭಿಮಾನಿಗಳು, ಕನ್ನಡಪರ , ರೈತಪರ ಸಂಘಟನೆಗಳು, ಅಲ್ಪಸಂಖ್ಯಾತರು ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಮುಖಂಡರಾದ ಉಪ್ಪರಪಲ್ಲಿ ತಿಮಯ್ಯ , ಕೆ.ಕೆ.ಮಂಜುನಾಥ್, ರಾಮಾಂಜನಮ್ಮ, ವಾಸು, ಬಂದರ್ಲಾಪಲ್ಲಿ ಮುನಿಯಪ್ಪ, ಚಲ್ದಿಗಾನಹಳ್ಳಿ ಗ್ರಾಮದ ಮುನಿವೆಂಕಟಪ್ಪ, ವೆಂಕಟೇಶ್, ರಾಮಕೃಷ್ಣ, ಶ್ರೀನಿವಾಸರೆಡ್ಡಿ, ಕೃಷ್ಣಾರೆಡ್ಡಿ, ನರಸಿಂಹ ಇದ್ದರು.