ಕುಂದಾಪುರ ರೋಜರಿ ಚರ್ಚನಲ್ಲಿ ಕ್ರೈಸ್ತ (ನೀತಿ)ಶಿಕ್ಷಣ ದಿನಾಚರಣೆ

ಕುಂದಾಪುರ ಮಾ.5: ಕುಂದಾಪುರ ಹೋಲಿ ರೋಜರಿ ಇಗರ್ಜಿಯ ಸಭಾಭವನದಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ ಮಾ 5 ರಂದು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ನೀತಿ ಶಿಕ್ಷಣ ಪಡೆದ ಮಕ್ಕಳು ಮತ್ತು ಪಡೆಯದ ಮಕ್ಕಳ ವರ್ತನೆಯಲ್ಲಿ ವತ್ಯಾಸ ಇರುತ್ತದೆ. ನೀತಿ ಶಿಕ್ಷಣ ಪಡೆದ ಮಕ್ಕಳಲ್ಲಿ ನಯವಿನಯಗಳು ಕಾಣುತ್ತವೆ. ಅವರು ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಅವರಲ್ಲಿ ತುಂಬಿರುತ್ತೆ., ಅವರಲ್ಲಿ ದೇವ ಭಕ್ತಿ, ವಿನಮ್ರತೆ ಎದ್ದು ಕಾಣುತ್ತದೆ, ಗುರುಗಳು ಹಿರಿಯರೆಂದರೆ ಅವರಿಗೆ ಗೌರವ. ಅವರ ನಡೆ ನುಡಿ ಉತ್ತಮವಾಗಿರುತ್ತದೆ. ಯಾಕೆಂದರೆ ಇಲ್ಲಿ ಉತ್ತಮ ನೀತಿ ಶಿಕ್ಷಣ ನೀಡುವ ಶಿಕ್ಷಕರು, ಸಿಸ್ಟರ್‍ಗಳು ಉತ್ತಮ ನೀತಿ ಶಿಕ್ಷಣ ನೀಡುತ್ತಾರೆ, ನಮ್ಮ ಚರ್ಚಿನಲ್ಲಿ ಹೆಚ್ಚಿನ ಮಕ್ಕಳು ನೀತಿ ಶಿಕ್ಷಣಕ್ಕೆ ಹಾಜರಾಗುವುದು ತಂಬ ಸಂತೋಷದ ಸಂಗತಿ. ಮಕ್ಕಳ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಪ್ರೀತಿಯಿಂದ ಪೂಜೆ ಮತ್ತು ನೀತಿ ಶಿಕ್ಷಣಕ್ಕೆ ಕರೆ ತರುತ್ತಾರೆ,ನೀತಿ ಶಿಕ್ಷಣ ನೀಡುವ ಶಿಕ್ಷಕರ ತ್ಯಾಗ ದೊಡ್ಡದು. ಅವರು ರಜಾ ದಿನದಲ್ಲಿ ತಮ್ಮ ಸಮಯವನ್ನು ತ್ಯಾಗ ಮಾಡಿ ವರ್ಷವೀಡಿ ನೀತಿ ಶಿಕ್ಷಣ ನೀಡುತ್ತಾ ಬರುತ್ತಾರೆ, ಹಾಗಾಗಿ ಶಿಕ್ಷಕರು ಮತ್ತು ತಂದೆ ತಾಯಿಗಳು ಅಭಿನಂದನಾರ್ಹರು ಎಂದು ತಮ್ಮ ಸಂದೇಶದಲ್ಲಿ ತಿಳಿಸಿ ಅವರು ಶಿಕ್ಷಕರಿಗೆ ನೆನಪಿನ ಕಾಣಿಕೆಯನ್ನು ನೀಡಿದರು,
ಸಭಾ ಕಾರ್ಯ ಕ್ರಮದ ಮೊದಲು ಸಹಾಯಕ ಧರ್ಮಗುರು ವಂ|ಅಶ್ವಿನ್ ಅರಾನ್ಹಾ ಹೋಲಿ ರೋಜರಿ ಚರ್ಚನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ, ಸಭಾ ಕಾರ್ಯಕ್ರಮದಲ್ಲಿ ನೀತಿ ಶಿಕ್ಷಣದಲ್ಲಿ ಸಾಧನೆ ಮಾಡಿದವರಿಗೆ ಬಹುಮಾನವನ್ನು ವಿತರಣೆ ಮಾಡಿದರು. ಕಾರ್ಯಕ್ರಮದ ಅತಿಥಿಯಾಗಿದ್ದ ಶಿಕ್ಷಕಿ ಫಾತಿಮಾ ವಾಜ್ ಶುಭ ಹಾರೈಸಿ ಬಹುಮಾನ ವಿತರಣೆ ಮಾಡಿದರು. ಜೊತೆಗೆ ಪಾಲನಾ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು. ನೀತಿ ಶಿಕ್ಷಣದ ಬಗ್ಗೆ ಶಿಕ್ಷಕರ ಪರವಾಗಿ ಸಿಸ್ಟರ್ ಸುನೀತಾ ವಿದ್ಯಾರ್ಥಿಗಳ ಪರವಾಗಿ ವಿಯೊನ್ನಾ ಡಿಸೋಜಾ ತಮ್ಮ ಅನುಭವವನ್ನು ಹಂಚಿಕೊಂಡರು.
ಮಕ್ಕಳಿಂದ ನ್ರತ್ಯ, ಪ್ರಹಸನ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ನೀತಿ ಶಿಕ್ಷಣ ಶಿಕ್ಷರ ಸಂಚಾಲಕಿ ವೀಣಾ ಡಿಸೋಜಾ ವರದಿಯನ್ನು ವಾಚಿಸಿದರು. ವಿದ್ಯಾರ್ಥಿ ಹ್ಯಾವಿನ್ ಕೋತಾ ಮತ್ತು ಡೆನ್ಸಿಯಾ ಬರೆಟ್ಟೊ ನಿರೂಪಿಸಿದರು. ವಿದ್ಯಾರ್ಥಿನಿ ಲತಿಕಾ ಡಿಸೋಜಾ ಸ್ವಾಗತಿಸಿದಳು. ಶಿಕ್ಷಕಿ ಪ್ರೀತಿ ಬ್ರಗಾಂಜಾ ವಂದಿಸಿದರು.