ಗ೦ಗೊಳ್ಳಿ, ಫೆ. 20 : ಮತ್ಸ್ಯ ನಗರಿ ಗಂಗೊಳ್ಳಿಯಲ್ಲಿ ಕುಂದಾಪುರ ತಾಲೂಕು ೧೮ ನೇ ಸಾಹಿತ್ಯ ಸಮ್ಮೇಳನ ಫೆ. 19 ರಂದು ಇಲ್ಲಿನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಜ್ರಂಭಣೆಯಿಂದ ನಡೆಯಿತು
ಸಮ್ಮೇಳನದ ಸರ್ವಾಧ್ಯಕ್ಷೆತೆ ವಹಿಸಿದ್ದ ನಿವ್ರತ್ತ ಅಧ್ಯಾಪಕ, ಸಾಹಿತಿ ಖ್ಯಾತ ಅಂಕಣಗಾರ ಕೋಣಿ ಶಿವಾನಂದ ಕಾರಂತರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಕುಂದ ಕನ್ನಡ ಆಕಾಡೆಮಿ ಸ್ಥಾಪನೆಯಾಗ ಬೇಕು, ಹಾಗೇ ಕುಂದಾಕನ್ನಡ ಅಧ್ಯಯನ ಪೀಠ ಸ್ವಾಪನೆಯಾಗಬೇಕು, ಸರಕಾರ ತಮ್ಮ ಸರಕಾರಿ ಕನ್ನಡ ಶಾಲೆಗಳಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಕನ್ನಡ ಶಾಲೆಗಳಿಗೆ ನೀಡಬೇಕು, ಮತ್ತು ಕುಂದಾಪುರ ಗಂಗೊಳ್ಳಿ ಸೇತುವೆ ನಿರ್ಮಾಣ ಮಾಡಬೇಕು” ಎಂದು ಕರೆ ನೀಡಿದರು.
“ಭಾಷೆ ಬೆಳವಣಿಗೆಯಲ್ಲಿ ಇತ್ತೀಚೆಗೆ ಯುವ ಜನರು ಆಸಕ್ತಿ ವಶಿಸುತ್ತಿದ್ದಾದೆ. ಅಪಾರ ಸಾಹಿತ್ಯಕ, ಸಾಂಸ್ಕೃತಿಕ ಸಂಪತ್ತು ಹೊಂದಿರುವ 300ಕ್ಕೂ ಹೆಚ್ಚು ಗ್ರಾಮದ, 25 ಲಕ್ಷಕ್ಕೂ ಹೆಚ್ಚುಮಂದಿ ಮಾತನಾಡುವ ಕುಂದಾಪುರ ಭಾಷೆಗೆ ಸರಕಾರ ವಿಶೇಷವಾದ ಸ್ಥಾನಮಾನ ನೀಡಬೇಕು.ಪ್ರವಾಸೊದ್ಯೋಮ, ಅಭಿವ್ರಧ್ದಿಗೊಳಿಸಿ ಉದ್ಯೋಗ ನೇಡಬೇಕು,ಕುಂದಾಪುರ ಜನರು ಸಾಹಿತ್ಯ,ಕ್ರೀಡೆ, ರಂಭೂಮಿ, ಚಲನಚಿತ್ರ, ಹೋಟೆಲ್, ಕೈಗಾರಿಕೋದ್ಯಮ, ಶಿಕ್ಷಣ, ಬ್ಯಾಂಕಿಂಗ್, ವೈಧ್ಯಕೀಯ ಇನ್ನಿತರ ಕ್ಷೇತ್ರಗಳಲ್ಲಿ ಅನುಪಮ ಸಾಧನೆ ಮಾಡಿದ್ದಾರೆ, ಇವಗಳನ್ನು ತಿಳಿಸುವ ವಸ್ತು ಪ್ರದರ್ಶನ ಕೇಂದ್ರ ಸ್ತಾಪಿಸಬೇಕೆಂದು” ಅವರು ತಮ್ಮ ಭಾಷಣದಲ್ಲಿ ತಿಳಿಸಿದರು.
ಸಮ್ಮೇಳನ ಉದ್ಘಾಟಿಸಿದ ಉದ್ಯಮಿ ಜಗನ್ನಾಥ ಏ. ಪೈ ಗಂಗೊಳ್ಳಿ ಕರ್ನಾಟಕದ ಸರಕಾರ ಎಲ್ಲರಿಗೂ ಕನ್ನಡ ಕಲಿಕೆ ಕಡ್ಡಾಯ ಮಾಡಬೇಕು ಎಂದು ಹೇಳಿ ಹಳ್ಳಿಗಳಲ್ಲಿ ಭಾಷಾಭಿಮಾನ ಇದ್ದದೂ ನಗರಗಳಲ್ಲಿ ಇಲ್ಲ ಎಂದು ತಿಳಿಸಿದರು.
ಕ್ಯಾಂಪ್ಳೋ ಅಧ್ಯಕ್ಷ! ಕಿಶೋರ್ ಕುಮಾರ್ ಕೊಡ್ಗಿ ಬೆಳಗೋಡು ರಮೇಶ್ ಭಟ್ ಬರೆದ ಕೋ.ಶಿ. ಕಾರಂತರ ವಾಸ್ ವ್ರೆಖರಿ ಪುಸ್ತಕ ಬಡುಗಡೆ ಮಾಡಿ, ಕುಂದಾಪ್ರ ಕನ್ನಡ ಅಭಿಯಾನ ಇನ್ನಷ್ಟು ಹೆಚ್ಚಾಗಬೇಕು ಎಂದು ಹೇಳಿ ಕ್ಯಾಂಪ್ಕೋ ಕನ್ನಡಾಕ್ಕಾಗಿ ನೆರವು ನೀಡುತ್ತದೆ’ ಎಂದರು.
ವಿಮರ್ಶಕ, ಸಾಹಿತಿ ಬೆಳಗೋಡು ರಮೇಶ್‌ಭಟ್, ಕಾರಂತರುಪಂಚಮುಖಿ ವ್ಯಕ್ತಿತ್ವದವರು. ಸಾಹಿತ್ಯ, ಅಧ್ಯಾಪನ, ನಾಟಕ, ಸಂಘಟನೆ, ನಿರ್ದೇಶನ ಎಲ್ಲಕ್ಷೇತ್ರದಲ್ಲೂ ತೊಡಗಿಸಿಕೊಂಡವರು. 5 ಸಾವಿರ ಅಂಕಣ ಬರೆಹ ಬರೆದಂತಹ ಖ್ಯಾತಿವೆತ್ತವರು, ಅವರ ಈ ಸಾಧನೆ ಹಿಂದೆ ಯಾರೂ ಮಾಡಲಿಲ್ಲಾ, ಮುಂದೆಯು ಯಾರೂ ಮಾಡುವುದಿಲ್ಲಾ ಎಂದು ಅವರ ಪರಿಚಯ ನೀಡಿದರು.
ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗೆ, ಕುಂದಾಪ್ರ ಕನ್ನಡ ಅಕಾಡೆಮಿ ಸ್ಟಾಪನೆ ಯಾಗಬೇಕು. ಜಿಲ್ಲೆಯಲ್ಲಿ ಹಾಗೂ ಎಲ್ಲ ತಾಲೂಕುಗಳಲ್ಲಿ ಕನ್ನಡ ಭವನಗಳು ನಿರ್ಮಾಣವಾಗಬೇಕು. ಜಿಲ್ಲಾ ಭವನಕ್ಕೆ ಅನುದಾನ ಬಿಡುಗಡೆಯಾಗಬೇಕು. ಅಡಿಗರ ಸ್ಥಾರಕ ಮಂದಿರ ಕೆಲಸ ಬೇಗ ಪೂರ್ಣವಾಗಬೇಕು. ಸರಕಾರಿ ಶಾಲೆಗಳ ಕುರಿತಾಗಿ ಸರಕಾರದ ಜಾಣಕುರುಡು ನೀತಿ ನಿಲ್ಲಬೇಕು. ಕನ್ನಡ ಶಾಲೆ ಉಳಿದರೆ ಕನ್ನಡದ ಬೇರುಗಳನ್ನು ಬಲಪಡಿಸಲು ಆಗುತ್ತದೆ. ಶಿಕ್ಷಕರ ನೇಮಕಾತಿ ನಡೆಸಿ ಅನುದಾನಿತ ಹಾಗೂ ಸರಕಾರಿ ಶಾಲೆಗಳಿಗೆ ಒಂದೇ ನಿಯಮ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಬೆಳಗೋಡು ವಿರಚಿತ ವೈಖರಿ ಪುಸ್ತಕ, ಸಮ್ಮೇಳನಾಧ್ಯಕ್ಷರು ಬರೆದ. ಹತ್ತು ಮುತ್ತುಗಳು, ಅರಿವಿಗೆ ಬಾರದವರು ಎಂಬ ಪುಸ್ತಕಗಳ ಬಿಡುಗಡೆ ನಡೆಯಿತು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಚ್. ಗಣೇಶ ಕಾಮತ್, ಕಾರ್ಯದರ್ಶಿ ಯು.ಎಸ್. ಶೆಣೈ, ಕಾಲೇಜಿನ ಪ್ರಾಂಶುಪಾಲೆ ಎಂ.ಸಿ. ಕವಿತಾ, ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಮನೋಹರ್ ಪಿ. ಕಸಾಪ ಬೈಂದೂರು ಅಧ್ಯಕ್ಷ ಡಾ। ರಘು ನಾಯ್ಕ್ ಕಾರ್ಕಳ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಬ್ರಹ್ಮಾವರ ಅಧ್ಯಕ್ಷ ರಾಮಚಂದ್ರ ಐತಾಳ್, ತಾಲೂಕು. ಕಾರ್ಯದರ್ಶಿ ಅಕ್ಷತಾ ಗಿರೀಶ್, ಜಿಲ್ಲಾಕಸಾಪ ಮಾಜಿ ಅಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್, ಕೋ.ಶಿವಾನಂದ ಕಾರಂತರ ಪತ್ನಿ ಕುಸುಮಾ ಕಾರಂತ ಇನ್ನಿತರರು ಉಪಸ್ಥಿತರಿದ್ದರು.