ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ತೆರೆ-ಬಹುಮಾನ ವಿತರಣೆ- ಕ್ರೀಡೆಗಳಿಂದ ಉತ್ತಮ ಆರೋಗ್ಯದ ಜತೆ ಹಣ ಗೌರವವೂ ಸಾಧ್ಯ-ರಮೇಶ್‍ಕುಮಾರ್

ಕೋಲಾರ:- ಅಕ್ಷರ ಕಲಿಕೆಯಲ್ಲಿ ಸೋತರೂ ಕ್ರೀಡೆಯನ್ನೇ ನಂಬಿ ವಿಶ್ವಮಟ್ಟದಲ್ಲಿ ಹೆಸರುಗಳಿಸಿರುವ ಅನೇಕರು ನಮ್ಮ ಕಣ್ಮುಂದೆ ಇದ್ದು, ಆಟೋಟಗಳಿಂದ ಉತ್ತಮ ಆರೋಗ್ಯ ಮಾತ್ರವಲ್ಲ ಹಣ,ಗೌರವವನ್ನು ಸಂಪಾದಿಸಬಹುದಾಗಿದೆ ಎಂದು ಅಬಕಾರಿ ಜಿಲ್ಲಾ ಉಪ ಆಯುಕ್ತ ಹೆಚ್.ರಮೇಶ್‍ಕುಮಾರ್ ತಿಳಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಎರಡು ದಿನಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಗೆಲುವು ಸಾಧಿಸಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿ, ಅಂಗಡಿಯೊಂದರಲ್ಲಿ ಅಳಿದುಳಿದ ಬ್ರೆಡ್,ಬರ್ಗರ್ ಪಡೆದು ತಿಂದು ಕಷ್ಟದ ಜೀವನ ನಡೆಸುತ್ತಿದ್ದ ವಿಶ್ವ ಪುಟ್‍ಬಾಲ್ ಆಟಗಾರ ರೊನಾಲ್ಡೋ ಕೊನೆಗೆ ವಿಶ್ವಮಾನ್ಯರಾದರು ಎಂದು ಉದಾಹರಿಸಿ, ಜಿಲ್ಲಾ ಕ್ರೀಡಾಕೂಟವನ್ನು ಇಷ್ಟೊಂದು ಯಶಸ್ವಿಯಾಗಿ ನಡೆಸಿದ ಸಂಘದ ಅಧ್ಯಕ್ಷರು,ಪದಾಧಿಕಾರಿಗಳು ಅಭಿನಂದನಾರ್ಹರು ಎಂದರು.
ಸರ್ಕಾರಿ ನೌಕರರು ಒತ್ತಡದಿಂದ ಮುಕ್ತರಾಗಲು ಕ್ರೀಡೆಗಳು ಅತಿ ಮುಖ್ಯ ಎಂದು ಸಲಹೆ ನೀಡಿದ ಅವರು, ಕ್ರೀಡೆ,ವ್ಯಾಯಾಮ ನಿರಂತರವಾಗಿದ್ದರೆ ಮಾತ್ರ ನಿವೃತ್ತಿ ನಂತರ ಉತ್ತಮ ಜೀವನ ನಡೆಸಲು ಸಾಧ್ಯ ಎಂಬ ಸತ್ಯ ಅರಿತು ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳಿ ಎಂದು ತಿಳಿಸಿ, ಗೆದ್ದವರಿಗೆ ಶುಭಾಷಯ ಸೋತವರಿಗೆ ಮುಂದಿನ ಗೆಲುವಿಗೆ ಪ್ರೋತ್ಸಾಹ ನೀಡೋಣ, ನೌಕರರ ಬದುಕು ಕ್ರೀಡಾಸ್ಪೂರ್ತಿಯಿಂದ ಕೂಡಿರಲಿ ಎಂದರು.
ಜಿಲ್ಲಾಧಿಕಾರಿ ವೆಂಕಟ್‍ರಾಜಾ, ಇತ್ತೀಚೆಗೆ ಉತ್ತಮ ಸೇವಾ ಪ್ರಶಸ್ತಿ ಪಡೆದ ಜಿಪಂ ಸಿಇಒ ಯುಕೇಶ್‍ಕುಮಾರ್, ನೂತನ ಎಸ್ಪಿ ನಾರಾಯಣ ಈ ಮೂವರು ತ್ರಿಮೂರ್ತಿಗಳ ಪ್ರಯತ್ನದಿಂದ ಇಂದು ಜಿಲ್ಲೆ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿ ಅಭಿನಂದನೆ ಸಲ್ಲಿಸಿದರು.


ಕ್ರೀಡಾಕೂಟ ಯಶಸ್ವಿ ಸಂಘದ ಧನ್ಯವಾದ


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ಕ್ರೀಡಾಕೂಟ ಇಷ್ಟೊಂದು ಯಶಸ್ಸಿಗೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಸ್ಪಿಯವರು ಸೇರಿದಂತೆ ಹಲವಾರು ಮಂದಿಯ ಶ್ರಮವಿದೆ,ಟೀ-ಶರ್ಟ್, ಕ್ಯಾಪ್‍ಗೆ ನಮ್ಮ ಸಂಘದ ಜಿಲ್ಲಾ ಕಾರ್ಯದರ್ಶಿ ಅಜಯ್,ನರಸಾಪುರ ಹರಿ ತಂಡದದ ನೆರವು,ಮೊಮೊಂಟೊಸ್ ತಂದು ಸಿದ್ದಪಡಿಸುವಲ್ಲಿ ಚೇತನ್‍ಮಧುರೆ, ವಿಜಿ ಸಹಕರಿಸಿದ್ದಾರೆ.
ಇಡೀ ಕಾರ್ಯಕ್ರಮದ ಎಲ್ಲಾ ದಾಖಲೆಗಳ ಡಿಟಿಪಿ ಕಾರ್ಯದಲ್ಲಿ ಹಗಲಿರುಳು ದುಡಿದ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಉತ್ತಮ ಊಟ ಒದಗಿಸುವಲ್ಲಿ ಆಹಾರ ಇಲಾಖೆ ಡಿಡಿ ಶೃತಿ, ಇಇ ಮುನೀರ್, ಇಒ ವೆಂಕಟೇಶಪ್ಪ, ಆರ್‍ಟಿಒ ಇಲಾಖೆ ಮತ್ತಿತರ ಸಹಕಾರ ಪಡೆಯುವಲ್ಲಿ ಕೆಲಸ ಮಾಡಿದ ಸಂಘದ ಹಿರಿಯ ಉಪಾಧ್ಯಕ್ಷ ಸುಬ್ರಮಣಿ ಸೇವೆ ಸ್ಮರಣೀಯವಾಗಿದೆ, ಸದಾ ನನ್ನ ಬೆನ್ನಿಗೆ ನಿಂತು ಸಹಕರಿಸಿದ ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷರುಗಳಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್ ಅವರ ಸೇವೆಯನ್ನು ಸ್ಮರಿಸುವುದಾಗಿ ತಿಳಿಸಿದರು.
ಕ್ರೀಡಾಂಗಣ ಸಿದ್ದತೆಯಲ್ಲಿ ಶ್ರಮಿಸಿದ ಕೋಚ್ ವೆಂಕಟೇಶ್,ಅರುಣ್ ತಂಡ, ನೋಂದಣಿ ಕಾರ್ಯದಲ್ಲಿ ಪದಾಧಿಕಾರಿಗಳಾದ ಶಿವಕುಮಾರ್, ಅನಿಲ್,ರವಿ, ಕ್ರೀಡಾ ಕಾರ್ಯದರ್ಶಿ ಶ್ರೀರಾಮ್ ಮತ್ತಿತರ ನೆರವು ಮರೆಯಲಾಗದು ಎಂದರು.
ವೇದಿಕೆ ನಿರ್ಮಾಣದಲ್ಲಿ ಆರೋಗ್ಯ ಇಲಾಖೆಯ ವಿಜಯಮ್ಮ ಪ್ರೇಮಾ,ಶಿಕ್ಷಣ ಇಲಾಖೆಯ ಭಾಗ್ಯ ತಂಡ, ಪೆಂಡಾಲ್ ಒದಗಿಸಿದ ಯೋಜನಾ ನಿರ್ದೇಶಕಿ ಭಾಗ್ಯಮ್ಮ, ನಗರಸಭಾ ಆಯುಕ್ತಪವನ್ ಕುಮಾರ್,ಆರೋಗ್ಯ ನಿರೀಕ್ಷ ನವಾಜ್, ಇಡೀ ಕಾರ್ಯಕ್ರಮದ ಸಿದ್ದತೆಯಲ್ಲಿ ಕೆಜಿಎಫ್ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ,ಟಿಪಿಒಗಳಾದ ಬಾಬು, ಚಂದ್ರಶೇಖರ್,ಗೋಪಾಲ್,ರಮೇಶ್,ನಾರಾಯಣಸ್ವಾಮಿ, ತಂಡದ ನೆರವನ್ನು ಸ್ಮರಿಸಿ, ಸಂಘದ ಧ್ವಜ ಸಿಗದಂತೆ ಮಾಡುವ ಕೆಲವರ ಪ್ರಯತ್ನ ವಿಫಲಗೊಳಿಸಿ ಸಕಾಲಕ್ಕೆ ಧ್ವಜ ಸಿದ್ದಪಡಿಸಿ ತಂದ ಜಿಲ್ಲಾ ಕಾರ್ಯದರ್ಶಿ ಅಜಯ್‍ಕುಮಾರ್,ತಿಲಕ್,ಮುನಿರಾಜು ನೆರವು, ಪ್ರತಿ ಹಂತದಲ್ಲೂ ಶ್ರಮಿಸಿದ ಸಂದೀಪ್ ತಂಡದ ಕಾರ್ಯ ಮರೆಯಲಾಗದು ಎಂದರು.
ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್ ಸ್ವಾಗತಿಸಿ, ಕೆ.ಟಿ.ಶಿವಕುಮಾರ್ ನಿರೂಪಿಸಿ, ಜಿಲ್ಲಾಮಟ್ಟದಲ್ಲಿ ಆಯ್ಕೆಯಾಗಿರುವವರು ನಿರಂತರ ಅಭ್ಯಾಸ ಮುಂದುವರೆಸಿ, ರಾಜ್ಯಮಟ್ಟದಲ್ಲಿ ಸಾಧನೆ ಮಾಡಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದ ಜಿಲ್ಲಾ ಯುವ ಸಬಲೀಕರಣ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಕಲ್ಲಂಡೂರು ನಾರಾಯಣಸ್ವಾಮಿ, ತಾಲ್ಲೂಕು ಸೇರಿದಂತೆ ಎಲ್ಲಾ ಜಿಲ್ಲಾ,ತಾಲ್ಲೂಕು ಸಂಘಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಅಜಯ್‍ಕುಮಾರ್, ಗೌರವಾಧ್ಯಕ್ಷ ರವಿಚಂದ್ರ, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಹಿರಿಯ ಉಪಾಧ್ಯಕ್ಷರಾದ ಸುಬ್ರಮಣಿ, ನಂದೀಶ್,ಉಪಾಧ್ಯಕ್ಷ ರತ್ನಪ್ಪ, ಖಜಾಂಚಿ ವಿಜಯ್, ಸಹಕಾರ್ಯದರ್ಶಿ ವಿಜಯಮ್ಮ, ವಿವಿಧ ತಾಲ್ಲೂಕುಗಳ ಅಧ್ಯಕ್ಷರಾದ ನರಸಿಂಹಮೂರ್ತಿ, ಬಂಗವಾದಿ ನಾಗರಾಜ್,ದೈಹಿಕ ಶಿಕ್ಷಣಾಧಿಕಾರಿ ಬಾಬು, ಕ್ರೀಡಾ ಕಾರ್ಯದರ್ಶಿ ಶ್ರೀರಾಮ್, ಸಂಘಟನಾ ಕಾರ್ಯದರ್ಶಿ ಪಿಡಿಒ ನಾಗರಾಜ್,ರವಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಜರಿದ್ದು, ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ನೌಕರ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.