


ಕುಂದಾಪುರ,ಜ.20 ಕೊಟೇಶ್ವರ ಕಟ್ಕರೆಯ ಬಾಲ ಯೇಸುವಿನ ಕಾರ್ಮೆಲ್ ಮಠಾಶ್ರಮದ ರಜತ್ಸೋವ ಮತ್ತು ಬಾಲಾ ಯೇಸುವಿನ ವಾರ್ಷಿಕ ಮಹೊತ್ಸೋವವು ಜನವರಿ 19 ಶನಿವಾರದಂದು ಸಂಜೆ ಭಕ್ತಿ ಬಲಿದಾನದ ಮೂಲಕ ಆಚರಿಸಲಾಯಿತು. ಪವಿತ್ರ ಪುಸ್ತಕದ ವಾಕ್ಯವನ್ನು ಪಠಿಸಿದ ಮಡ್ಯಾಂತರ್ ಚರ್ಚಿನ ಧರ್ಮಗುರು ವಂ|ಜೋಸೆಫ್ ಡಿಸೋಜ “ನೀವು ಸತ್ಯ ಅರಿತರೆ, ನಿಮಗೆ ಸತ್ಯ ಮುಕ್ತಿಯನ್ನು ನೀಡುತ್ತದೆ, ಸತ್ಯ ಎಂದರೆ ಯೇಸು, ಮನುಷ್ಯನ ಜೊತೆ ಇರುವುದು ನನಗೆ ಸಂತೋಷ ತರುತ್ತೆ ಎಂದು ಯೇಸು ಹೇಳಿದ್ದಾನೆ., ಮನುಷ್ಯರ ಜೊತೆ ಮನುಷ್ಯನಾಗಿ ನಾನು ಜೀವಿಸುತ್ತೇನೆ. ಜ್ಯುಬಿಲಿ ಅಂದರೆ ನಮಗೆ ಮುಕ್ತಿ, ನಮ್ಮ ಪಾಪಗಳಿಂದ ಬಿಡುಗಡೆಗೆ ಸಂತೋಷ ಪಡುವುದು, ಜುಬಿಲಿ ಅಂದರೆ ದೇವರ ದಯೆ, ನಮಗೆ ಅವನು ಬಿಡುಗಡೆಗೊಳಿಸಿದ್ದಾನೆ, ನಾವೆಲ್ಲರೂ ಪಾಪ ಮಾಡುವರೆ ಆಗಿದ್ದೇವೆ, ಯೇಸುವಿನ ಶಿಲುಭೆ ನಮಗೆ ಕ್ಷಮೆ ನೀಡಿ ಮುಕ್ತಿ ದೊರಕಿಸುತ್ತದೆ. ಶಿಲುಭೆಯ ಮೇಲೆ ಮರಣ ಹೊಂದಿದ ಯೇಸು ನಮನ್ನು ರಕ್ಷಿಸುತ್ತಾನೆ, ಇದುವೇ ಸು ವಾರ್ತೆಯಾಗಿದೆ, ಇದುವೇ ನಮಗೆಲ್ಲ, ಜುಬಿಲಿ ಉತ್ಸವ ಸಂಭ್ರಮ ಆಗಿದೆ” ಎಂದು ತಿಳಿಸಿ “ನಾವು ಇಲ್ಲಿ ಆಶ್ರಮ ಸ್ಥಾಪಿಸಿ 25 ವರ್ಷಗಳಾಗಿವೆ, ನಾವು ಇಲ್ಲಿ ದೊಡ್ಡ ದೊಡ್ಡ ಕಟ್ಟಡ ಕಟ್ಟಲಿಲ್ಲ, ಇಲ್ಲಿನ ಜನರ ಧಾರ್ಮಿಕ ಸೇವೆ, ಅವರ ಅಧ್ಯಾತ್ಮಿಕ ಅಗತ್ಯಗಳಿಗೆ ನೆರವಾಗಿದ್ದೇವೆ. ಇದುವೇ ನೀಜವಾದ ಸೇವೆ” ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದರು.
ರಜತ್ಸೋವದ ಪ್ರಯುಕ್ತ ಪವಿತ್ರ ಬಲಿದಾನದ ನೇತ್ರತ್ವ ವಹಿಸಿಕೊಂಡು ಬಲಿದಾನ ಅರ್ಪಿಸಿದ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ “ಇಲ್ಲಿ ಕಟ್ಕರೆಯಲ್ಲಿ ಕಾರ್ಮೆಲ್ ಮೇಳದ ಧರ್ಮಗುರುಗಳು ಬಾಲಯೇಸುವಿನ ಮಠಾಶ್ರಮವನ್ನು ಸ್ಥಾಪಿಸಿ 25 ವರ್ಷಗಳಿಂದ ಕುಂದಾಪುರ ವಲಯಕ್ಕೆ ಅಧ್ಯಾತ್ಮಿಕ ಸೇವೆಗಳನ್ನು ನೀಡುತ್ತಾ ಬಂದಿದ್ದಾರೆ, ಅವರ ಸೇವೆ ಬಹು ಅಮೂಲ್ಯ, ಇವರ ಸೇವೆ ಕೇವಲ ಕುಂದಾಪುರ ವಲಯಕ್ಕೆ ಸೀಮಿತವಾಗಿಲ್ಲ, ಇಡೀ ಉಡುಪಿ ಧರ್ಮಪ್ರಾಂತಕ್ಕೆ ಅವರು ಸೇವೆ ನೀಡುತ್ತಾರೆ, ಇಂದು ನಾವು ಮೂರು ಸಂಭ್ರಮವನ್ನು ಆಚರಿಸುತ್ತೇದ್ದೆವೆ, ಬಾಲ ಯೇಸುವಿನ ವಾರ್ಷಿಕ ಉತ್ಸವ, ಇಲ್ಲಿನ ಬಾಲ ಯೇಸುವಿನ ಮಠಾಶ್ರಮದ ರಜತ್ಸೋವ ಮತ್ತೊಂದು ನಾಳೆ ಬೈಬಲ್ ಭಾನುವರ ಅದನ್ನು ಆಚರಿಸುತ್ತಿದ್ದೇವೆ. ದಿನ ನಿತ್ಯ ನಾವು ಕುಟುಂಬ ಸಮೇತ ಬೈಬಲನ್ನು ಒದಿ ಅರ್ಥಮಾಡಿಕೊಳ್ಳಬೇಕು, ಅದು ನಮ್ಮ ಅಧ್ಯಾತ್ಮಿಕತೆಯನ್ನು ಬಲ ಪಡಿಸುತ್ತದೆ” ಎಂದು ಸಂದೇಶ ನೀಡಿದರು.
ಇಲ್ಲಿ ಈ ಹಿಂದೆ ಮುಖ್ಯಸ್ಥರಾಗಿದ್ದ ಈಗ ಕರ್ನಾಟಕ – ಗೋವಾ ಪ್ರಾಂತೀಯ ಮುಖ್ಯಸ್ಥರಾದ ಅ|ವಂ| ಜಾರ್ಜ್ ಸಾಂತುಮಾಯೆರ್ ತಮ್ಮ ಅನುಭವನ್ನು ತಿಳಿಸಿ ಶುಭಾಶಯ ಕೋರಿದರು. ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಭೋಜನವನ್ನು ಆಶಿರ್ವದಿಸಿದರು.
ಈ ಉತ್ಸವದ ತಯಾರಿಗಾಗಿ ಆಶ್ರಮದಲ್ಲಿ 3 ದಿನಗಳ ಧ್ಯಾನ ಕೂಟವನ್ನು ಹಮ್ಮಿಕೊಂಡಿತ್ತು. ಈ ಧ್ಯಾನ ಕೂಟವನ್ನು ವಂ|ಫಾ|ರುಡೊಲ್ಪ್ ರಾಜ್ ಪಿಂಟೊ, ಮತ್ತು ಬ್ರದರ್ ಪ್ರಕಾಶ್ ನಡೆಸಿ ಕೊಟ್ತರು. ಬಾಲ ಯೇಸು ಮಠಾಶ್ರಮದ ವಂ ಫಾ|ದೀಪ್ ಫೆರ್ನಾಂಡಿಸ್ ದಾನಿಗಳ ಹೆಸರುಗಳನ್ನು ವಾಚಿಸಿದರು. ಇಲ್ಲಿನ ಮಠಾಶ್ರಮದ ಪ್ರಥಮ ಮುಖ್ಯಸ್ಥರಾದ ವಂ|ಫಾ|ಬೋನಿಪಾಸ್ ಡಿಸೋಜಾ ದಾನಿಗಳನ್ನು ಗೌರವಿಸಿದರು.
ರಿಶಿವನ- ರಾಣಿಪುರ ಇದರ ನಿರ್ದೇಶಕರಾದ ವಂ ಫಾ| ಆರ್ಚಿಬಾಲ್ಡ್ ಗೊನ್ಸಾಲ್ವಿಸ್, ಕೋಟೆಶ್ವರದ ವಂ|ಫಾ|ಸಿರಿಲ್ ಮಿನೇಜಸ್, ಫ್ರಾನ್ಸಿಸ್ ಮೊಂತೇರೊ, ಕಾರ್ಮೆಲ್ ಸಂಸ್ಥೆಯ ಹಲವಾರು ಧರ್ಮಗುರುಗಳು ಹಾಗೇ ಕುಂದಾಪುರ ವಲಯದ ಹಲವಾರು ಧರ್ಮಗುರುಗಳು, ಅತಿಥಿ ಧರ್ಮಗುರುಗಳು ಈ ಉತ್ಸವದ ಬಲಿದಾನದಲ್ಲಿ ಭಾಗಿಯಾದರು. ಕಟ್ಕೆರೆ ಬಾಲ ಯೇಸು ಪುಣ್ಯ ಕ್ಷೇತ್ರದ ರೆಕ್ಟರ್ ಧರ್ಮಗುರು ವಂ|್ವಆಲ್ವಿನ್ ಸಿಕ್ವೇರ ವಂದಿಸಿದರು.







































































