

ಬ್ರಹ್ಮಾವರ: ನಿನ್ನೆ ಸಂಜೆ ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮ್ರತಪಟ್ಟ ದುರ್ಘಟನೆ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರ ಪೆಟ್ರೋಲ್ ಬಂಕ್ ವೊಂದರ ಬಳಿ ನಡೆದಿದೆ.
ಶಿವಮೊಗ್ಗ ನಿವಾಸಿ ಸಮಿತ್ ಕುಮಾರ್(19) ಹಾಗೂ ಸಾಲಿಗ್ರಾಂ ಚಿತ್ರಪಾಡಿ ನಿವಾಸಿ ವಾಗೀಶ್(19) ಮೃತರೆಂದು ಗುರುತು ಹಿಡಿಯಲಾಗಿದೆ..
ಇವರು ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಇವರು ಕಾಲೇಜು ಮುಗಿಸಿ ರಾತ್ರಿ ಮನೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಎದುರಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಬೈಕ್ ಲಾರಿಗೆ ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಬೈಕ್ ರಸ್ತೆಗೆ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.