ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಪುರಸಭೆ ಆಶ್ರಯದಲ್ಲಿ ‘

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಯೋಜನಾ ಅರಿವು ‘ ಕಾರ್ಯಕ್ರಮ’ 

’ 



ಕುಂದಾಪುರದ ಆರ್. ಎನ್‌ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಪುರಸಭೆ ಕುಂದಾಪುರ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ(KUIDFC), ಕರ್ನಾಟಕ ಸಮಗ್ರ ನಗರ ನೀರು ನರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ- ಜಲಸಿರಿ ಹಾಗೂ  ಆರ್.ಡಿ.ಎಸ್ ಸಂಸ್ಥೆಯ ಸಹಯೋಗದಲ್ಲಿ ಸಮುದಾಯ ಜಾಗೃತಿ, ಭಾಗವಹಿಸುವಿಕೆ ಪುನರ್ವಸತಿ ಹಾಗೂ ಪುನರ್ನಿರ್ಮಾಣ(CAPRR) ಚಟುವಟಿಕೆಗಳ ಆಶ್ರಯದಲ್ಲಿ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಯೋಜನಾ ಅರಿವು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರುಗಿತು. ಶ್ರೀ ಮಾಲತೇಶ್ ಎಮ್.ಎಚ್, ಸುಮುದಾಯ ಅಭಿವೃದ್ಧಿ ಸಹಾಯಕರು, KUIDFC KIUWMIP, ಉಡುಪಿ, ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಜಲಮೂಲದಿಂದ ಸಂಗ್ರಹಿಸಿದ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ಎಲ್ಲಾ ಕಡೆ ನಿರಂತರವಾಗಿ ಸರಬರಾಜು ಮಾಡುವ ಬಗ್ಗೆ ದೃಶ್ಯಾವಳಿಗಳ ಮೂಲಕ ಸವಿವರವಾದ ಮಾಹಿತಿಗಳನ್ನು ನೀಡಿದರು. ಕೆಯುಐಡಿಎಫ್ ಸಿಪಿಐಯು, ಕುಂದಾಪುರ ಇದರ ಸಹಾಯಕ ಅಭಿಯಂತರರಾದ ಶ್ರೀ ಮೃತ್ಯುಂಜಯ ಎಸ್‌. ಹಿರೇಮಠ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಟಿ.ಸಿ, ಕುಂದಾಪುರ ಇದರ ಸಮಾಲೋಚಕ ಅಭಿಯಂತರರಾದ ಶ್ರೀ ಪಿ.ವಿ.ಸುರೇಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಇವರು ವಿದ್ಯಾರ್ಥಿಗಳಲ್ಲಿ ಮೂಲಭೂತ ಸೌಕರ್ಯದ ಬಗ್ಗೆ ಹೊಸ ಅರಿವು ಮೂಡಿಸುವ ಪುರಸಭೆಯ ಅಧಿಕಾರಿಗಳ ಪ್ರಯತ್ನವನ್ನು ಶ್ಲಾಘಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಸುಮತಿ ಶೆಣೈಯವರು ಧನ್ಯವಾದ ಸಲ್ಲಿಸಿದರು.