ಕಾರ್ಯಕರ್ತರು ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು:ಎಂ.ಎಚ್.ರಾಮಾಂಜಿನಪ್ಪ

ಶ್ರೀನಿವಾಸಪುರ: ಕಾರ್ಯಕರ್ತರು ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ನವ ಕರ್ನಾಟಕ ಸ್ವಾಭಿಮಾನಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಎಂ.ಎಚ್.ರಾಮಾಂಜಿನಪ್ಪ ಹೇಳಿದರು.
ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ವೇದಿಕೆಯ ತಾಲ್ಲೂಕು ಘಟಕದ ಸಭೆಯಲ್ಲಿ ಮಾತನಾಡಿದ ಅವರು, ನಾಡು ನುಡಿ ಅಭಿವೃದ್ಧಿ ಹಾಗೂ ಗಡಿ ಪ್ರದೇಶದಲ್ಲಿ ನಾಗರಿಕರಿಗೆ ಮೂಲ ಸೌಕರ್ಯ ದೊರಕಿಸಿಕೊಡಲು ಪ್ರಯತ್ನಿಸಬೇಕು ಎಂದು ಹೇಳಿದರು.
ವೇದಿಕೆ ಪ್ರಧಾನ ಕಾರ್ಯದರ್ಶಿ ಸಾದಿಕ್ ಅಹ್ಮದ್ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಭಾಷೆ ಬಳಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಪ್ರತಿಯೊಬ್ಬರೂ ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಸಬೇಕು. ಕನ್ನಡಿಗರು ಸ್ವಾಭಿಮಾನದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು. ಭಾಷೆ ಮತ್ತು ಬದುಕು ಜತೆಯಾಗಿ ಸಾಗಬೇಕು ಎಂದು ಹೇಳಿದರು.
ವೇದಿಕೆ ಗೌರವಾಧ್ಯಕ್ಷ ಸಿ.ಎಸ್.ನರಸಿಂಹಯ್ಯ, ಸಂಚಾಲಕ ದೇವರಾಜ್, ಜಿಲ್ಲಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ವೆಂಕಟೇಶಗೌಡ, , ಮುಖಂಡರಾದ ಅಬ್ದುಲ್ಲಾ, ಜಿ.ಎಂ.ಕೃಷ್ಣಪ್ಪ, ಸಾಬೀರ್ ಮಾತನಾಡಿದರು.
ಈ ಸಂದರ್ಭದಲ್ಲಿ ವೇದಿಕೆಯ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಅವಿರೋಧ ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳಾಗಿ ಜಿ.ಎಸ್.ರಾಜು, ಕೆ.ವಿ.ವೆಂಕಟೇಶ್ (ಅಧ್ಯಕ್ಷ), ಕೆ.ಸಿ.ಮಂಜುನಾಥ, ಶಿವಪ್ಪ, ಸಾಬೀರ್, (ಉಪಾಧ್ಯಕ್ಷರು), ಲಕ್ಷ್ಮಣರೆಡ್ಡಿ (ಕಾರ್ಯಾಧ್ಯಕ್ಷ), ಕೆ.ವಿ.ಕುಮಾರ್, ಪ್ರಧಾನ ಕಾರ್ಯದರ್ಶಿ, ಕಾರ್ತಿಕ್, ನರೇಶ್, ಅರುಣ್ ಕುಮಾರ್, ಸುಹೇದ್ ಅಹ್ಮದ್ (ಕಾರ್ಯದರ್ಶಿಗಳು), ಕೆ.ಜಿ.ಶ್ರೀನಿವಾಸ್ (ಸಹ ಕಾರ್ಯದರ್ಶಿ), ಅಂಬರೀಶ್ (ಲಕ್ಷ್ಮೀಪುರ ಹೋಬಳಿ ಅಧ್ಯಕ್ಷ) ಅವಿರೋಧ ಆಯ್ಕೆಯಾಗಿದ್ದಾರೆ.