ಬಿಕರ್ನಕಟ್ಟೆಯ ಬಾಲ ಯೇಸುವಿನ ವಾರ್ಷಿಕ ಮಹೋತ್ಸವ ಧ್ವಜಾರೋಹಣದೊಂದಿಗೆ ಚಾಲನೆ

ಬಾಲಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಅಣಿಯಾಗಲು ನವದಿನಗಳ ಪ್ರಾರ್ಥನಾವಿಧಿ ಹಾಗೂ ನವೇನಾ ಪೂಜೆಗಳಿಗೆ ಧ್ವಜಾರೋಹಣದೊಂದಿಗೆ ಬುಧವಾರ 04, 2023 ಸಂಜೆ 6.30ಗೆ ಪುಣ್ಯಕ್ಷೇತ್ರದ ಅವರಣದಲ್ಲಿ ಚಾಲನೆ ನೀಡಲಾಯಿತು. ಧ್ವಜಾರೋಹಣದ ಮುಂಚೆ ಕೈಕಂಬ-ಬಿಕರ್ನಕಟ್ಟೆ ಮೈದಾನದಿಂದ ಪುಣ್ಯಕ್ಷೇತ್ರದ ಕಡೆಗೆ ಹೊರೆಕಾಣಿಕೆ ಮೆರವಣಿಗೆ ನೆರವೇರಿತು. ವಂದನೀಯ ಗುರು ಲ್ಯಾನ್ಸಿ ಲುವಿಸ್‍ ಪ್ರಾರ್ಥನವಿಧಿಯನ್ನು ನಡೆಸಿಕೊಟ್ಟರು. ಅನೇಕ ಭಕ್ತಾದಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡರು.  

     ತದನಂತರ ಬಾಲ ಯೇಸುವಿನ ಆವರಣದಲ್ಲಿ ಧ್ವಜಾರೋಹಣದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಕಾರ್ಪೊರೇಟರಗಳು ಹಾಗು ಇತರ ಪ್ರಮುಖ ಗಣ್ಯರಿಗೆ ಗೌರವ ಸಲ್ಲಿಸಲಾಯಿತು. ವಂದನೀಯ ಗುರು ಜೇಮ್ಸ್ ಡಿ ಸೋಜಾ, ವಲಯಧಿಕಾರಿಗಳು ಆಶೀರ್ವಚನ ನಡಿಸಿ, ಮಂಗಳೂರಿನ ಮಾನ್ಯ ಆಯುಕ್ತ, ಶ್ರೀ ಎನ್ ಶಶಿಕುಮಾರ್ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ವಂದನೀಯ ಗುರು ಚಾಲ್ರ್ಸ್ ಸೆರಾವೊ (ಕಾರ್ಮೆಲ್ ಗುರುಮಠದ ಮುಖ್ಯಸ್ಥರು) ಹಾಗೂ ವಂ. ಗುರು ರೋವೆಲ್ ಡಿ ಸೋಜಾ (ಪುಣ್ಯಕ್ಷೇತ್ರದ ನಿರ್ದೇಶಕರು), ಶ್ರೀ ಐವನ್ ಡಿ ಸೋಜಾ, (ಮಾಜಿ ಎಮ್‍ಎಲ್‍ಸಿ), ಶ್ರೀಮತಿ ಕಾವ್ಯ ನಟರಾಜ್ ಆಳ್ವ (ಕಾರ್ಪೊರೇಟರ್) ಮತ್ತಿತರ ಸ್ಥಳಿಯ ಕಾರ್ಪೊರೇಟರಗಳು ಉಪಸ್ಥಿತರಿದ್ದರು. ವಂ. ಗುರು ಸ್ಟೀವನ್ ಪಿರೇರಾ ಹಾಗೂ ವಂ. ಗುರು ರಾಯನ್ ಪಿಂಟೊ ಕಾರ್ಯಕ್ರಮವನ್ನು ಆಯೋಜಿಸಿ ನಡೆಸಿಕೊಟ್ಟರು.

    ಜನವರಿ 5ರಿಂದ ಸತತ ನವದಿನಗಳ ಕಾಲ ಇಡೀ ದಿನ ಕೊಂಕಣಿ, ಕನ್ನಡ, ಮಲಯಾಳಂ, ಇಂಗ್ಲಿಷ್, ಭಾಷೆಗಳಲ್ಲಿ ಒಂಬತ್ತು ಬಲಿಪೂಜೆಗಳು ನಡೆಯುವವು. ಪ್ರತಿದಿನ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರುವುದು. ಬಾಲ ಯೇಸುವಿನ ವಾರ್ಷಿಕ ಮಹೋತ್ಸವ ಜನವರಿ 14 ಹಾಗೂ 15 ರಂದು ವಿಜೃಂಭಣೆಯಿಂದ ಆಚರಿಸಲಾಗುವುದು.