ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ಸ್ ಇಂಜಿನಿಯರಿಂಗ್ ವಿಭಾಗದ ಸಹಯೋಗದಲ್ಲಿ “ಆಧುನಿಕ ಯುಗದ ಉಪಯುಕ್ತ ತಂತ್ರಾಂಶದ ತಿಳುವಳಿಕೆ” ಎಂಬ ವಿಷಯದ ಕುರಿತು ವಿಚಾರ ಗೋಷ್ಠಿಯನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡೆಲ್ ಟೆಕ್ನಾಲಜೀಸ್ನ ಟೆಕ್ನಿಕಲ್ ಸ್ಟಾಫ಼್ ಆಗಿರುವ ಶ್ರೀ ಸುಬ್ರಹ್ಮಣ್ಯ ಪಡುಬಿದ್ರಿ ಅವರು ಆಗಮಿಸಿದ್ದರು. ವಿಧ್ಯಾರ್ಥಿಗಳಿಗೆ ವಿಷಯದ ಜೊತೆಗೆ ಅವರ ಕ್ರಿಯಾಶೀಲತೆ ಹಾಗೂ ದೂರದೃಷ್ಟಿ ವೃದ್ಧಿಸಲು ಸಹಾಯಕವಾಗುವಂತೆ ವಿವಿಧ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸೂರಜ್ ಪಿ ಎಂ ಎಸ್ (ಎಂಬೆಡೆಡ್ ಸಿಸ್ಟಮ್ಸ್)
ಮ್ಯಾನೇಜರ್, ಕಾಂಟಿನೆಂಟಲ್ ಆಟೋಮೋಟಿವ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್
ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರು ಉಪಸ್ಥಿತರಿದ್ದು ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿಧ್ಯಾರ್ಥಿನಿ ಸುಶ್ಮಿತ ಕಾರ್ಯಕ್ರಮ ನಿರೂಪಿಸಿದರು.