ಕುಂದಾಪುರ ಕ್ರಿಸ್ಮಸ್ ಆಚರಣೆ – ನಮ್ಮಲ್ಲಿ ಮನುಷ್ಯತ್ವ ದೂರವಾಗಿದೆ, ಅದಕ್ಕಾಗಿ ದೇವ ಪುತ್ರನೇ ಮುಷ್ಯನಾಗಿ ಹುಟ್ಟಿ ಬಂದಿದ್ದಾನೆ : ಫಾ|ನೆಲ್ಸನ್ ಲೋಬೊ


ಕುಂದಾಪುರ, ಡಿ.25: 452 ವರ್ಷದ ಇತಿಹಾಸವುಳ್ಳ ಕೆನರಾದಲ್ಲೆ ಅತ್ಯಂತ ಪುರಾತನ ಚರ್ಚಗಳಲ್ಲಿ ಎರಡನೇ ಚರ್ಚ್ ಅದ ಹೋಲಿ ರೋಜರಿ ಚರ್ಚಿನಲ್ಲಿ ಕ್ರಿಸ್ಮಸ ಹಬ್ಬದ ಆಚರಣೆಯನ್ನು ಸಡಗರ ಭಕ್ತಿಭಾವದಿಂದ ಆಚರಿಸಲಾಯಿತು. “ಪ್ರಾಣಿಗಳಲ್ಲಿಯೂ ಇದಂತಹ ಮಾನವೀಯ ಗುಣಗಳಿದ್ದು, ಅವರು ಮಮತೆ, ಪ್ರೀತಿ, ದಯೆ, ಸಹಾಯ ನೀಡುತ್ತವೆ, ಆದರೆ ಮಾನವರಾದ ನಮ್ಮಲ್ಲಿ ಇಂತಹ ಮನುಷ್ಯತ್ವ ದೂರವಾಗಿದೆ, ಅದಕ್ಕಾಗಿಯೇ ದೇವ ಪುತ್ರನು ಮುಷ್ಯನಾಗಿ ಹುಟ್ಟಿದ್ದಾನೆ” ಎಂದು ಬ್ರಹ್ಮಾವರ ಪವಿತ್ರ ಕುಟುಂಬ ಇಗರ್ಜಿಯ ಧರ್ಮಗುರು ವಂ|ನೆಲ್ಸನ್ ಲೋಬೊ ಹೇಳಿದರು.
ಅವರು 452 ವರ್ಷದ ಇತಿಹಾಸವುಳ್ಳ ಕೆನರಾದಲ್ಲೆ ಅತ್ಯಂತ ಪ್ರಾಚೀನ ಇಗರ್ಜಿಗಳಲ್ಲಿ ಎರಡನೇ ಇಗರ್ಜಿಯಾದ ಹೋಲಿ ರೋಜರಿ ಇಗರ್ಜಿಯಲ್ಲಿ ಕ್ರಿಸ್ಮಸ ಹಬ್ಬದ ಆಚರಣೆಯನ್ನು ಸಡಗರ ಭಕ್ತಿಭಾವದ ಆಚರಣೆಯ ವೇಳೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತಮ್ಮ ನೇತ್ರತ್ವದಲ್ಲಿ ಪವಿತ್ರ ಬಲಿದಾನದ ಅರ್ಪಿಸಿ ಸಂದೇಶ ನೀಡಿದರು.
“ಕ್ರಿಸ್ಮಸ್ ಅಂದರೆ ಪ್ರೀತಿ ಮತ್ತು ತ್ಯಾಗ, ಅದಕ್ಕಾಗಿಯೆ ದೇವರ ಪುತ್ರ ಯೇಸು ಮನುಷ್ಯನ ರೂಪದಲ್ಲಿ ಭೂಮಿಯಲ್ಲಿ ಜನಿಸಿ ನಮಗೆ ಪ್ರೀತಿ ಮತ್ತು ತ್ಯಾಗ ಬಲಿದಾನವನ್ನು ಅರ್ಪಿಸಲು ಬಂದವನು. ಯೇಸು ಕ್ರಿಸ್ತರ ಪ್ರೀತಿ ಮತ್ತು ತ್ಯಾಗ ಬಹಳ ಶ್ರೇಷ್ಟವಾದುದು. ದೇವರು ನಮಗಾಗಿ ಆತನ ಒಬ್ಬನೇ ಪುತ್ರನನ್ನು ನಮಗೆ ದಯಾ ಮಾಡಿಸಿದ ಗುಟ್ಟನ್ನು ಸಂಭ್ರಮಿಸುವುದೆ ಕ್ರಿಸ್ಮಸ್. ದೇವರು ನಮಗೆ ನೀಡಿದ ಶ್ರೇಷ್ಠ ಕಾಣಿಕೆಯಲ್ಲಿ, ನಮಗೆ ಯೇಸುವನ್ನು ನೀಡಿದ ಕಾಣಿಕೆ ಅತೀ ಶ್ರೇಷ್ಠವಾದ ಕಾಣಿಕೆಯಾಗಿದೆ. ನಾವು ದೇವರನ್ನು ಮರೆತರೂ, ದೇವರು ನಮ್ಮನ್ನು ಮರೆತಿಲ್ಲ, ಅದಕ್ಕಾಗಿ ಯೇಸುವಿನ ರೂಪದಲ್ಲಿ ಮಾನವರನ್ನು ಭೇಟಿ ಮಾಡಲು ಬಂದಿರುವನು. ದೇವರು ತನ್ನ ಪುತ್ರ ಯೇಸುವಿನ ಮೂಲಕ ನಮ್ಮ ಜೊತೆ ಮಾತನಾಡಲು ಬಂದಿದ್ದಾನೆ, ಭೂಮಿಗೆ ಬಂದ ಯೇಸು ಜೀವನಪೂರ್ತಿ ನಮಗಾಗಿ ಮುಡಿಪಿಟ್ಟು ತನ್ನ ತಂದೆ ದೇವರ ಆಣತಿಯಂತೆ ಜೀವಿಸಿ, ನಮ್ಮ ಪಾಪಕ್ರತ್ಯಗಳಿಗಾಗಿ ನಮಗೆ ವಿಮೋಚನೆ ನೀಡಲು, ಶಿಲುಭೆಯ ಮೇಲೆ ಪ್ರಾಣ ತ್ಯಾಗ ಮಾಡಿದನು. ಹೀಗೆ ದೇವರ ಯೋಜನೆಯಂತೆ ನಾವು ಪಾಪಕ್ರತ್ಯಗಳಿಂದ ದೂರವಿದ್ದು, ಸ್ವರ್ಗರಾಜ್ಯದಲ್ಲಿ ಪ್ರವೇಶ ಪಡೆಯಲು, ನಾವು ಒಳ್ಳೆಯ ಮನುಷ್ಯರಾಗಲು ಪ್ರಯತ್ನಿಸೋಣ” ಎಂದು ಸಂದೇಶ ನೀಡಿದರು
ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ, ಕ್ರಿಸ್ಮಸ್ ಹಬ್ಬದ ಬಲಿಪೂಜೆಯಲ್ಲಿ ಭಾಗಿಯಾಗಿ ಹಬ್ಬದ ಶುಭಾಶಯಗಳನ್ನು ಕೋರಿದರು. ಸಹಾಯಕ ಧರ್ಮಗುರು ವಂ|ಸ್ಶ್ವಿನ್ ಆರಾನ್ಹಾ ಬಲಿದಾನದಲ್ಲಿ ಭಾಗಿಯಾಗಿದ್ದರು. ಬಲಿದಾನದ ಬಳಿಕ ವಾಳೆವಾರು ಭಾಗ್ಯಶಾಲಿ ಕುಟುಂಬಗಳಿಗೆ, ಹೌಸಿ ಆಟದ, ಮತ್ತು ಗೋದಲಿ ಗ್ರೀಟಿಂಗ್ಸ್ ಕಾರ್ಡ್ ರಚಿಸುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಐ.ಸಿ.ವೈ.ಎಮ್. ಸಂಘಟನೆಯಿಂದ ಬಹುಮಾನಗಳನ್ನು ವಿತರಿಸಲಾಯಿತು.