ನೌಕರರು ವೇತನ ಸಮಸ್ಯೆಗಳಿದ್ದರೆ ಡಿ.10ರೊಳಗೆ
ಜಿಲ್ಲಾ ಸಂಘಕ್ಕೆ ದಾಖಲೆ ಸಹಿತಿನೀಡಿ-ಸುರೇಶ್‍ಬಾಬು

ಕೋಲಾರ:- ರಾಜ್ಯ ಸರ್ಕಾರ 7ನೇ ವೇತನ ಆಯೋಗ ರಚಿಸುವ ಮೂಲಕ ನೌಕರ ಸ್ನೇಹಿ ಕೆಲಸ ಮಾಡಿದೆ, ಇದೀಗ ಆಯೋಗದ ಮುಂದೆ ಮಂಡಿಸಬೇಕಾದ ತಮ್ಮ ಇಲಾಖೆಯ ವಿಷಯ, ಸಮಸ್ಯೆಗಳನ್ನು ಲಿಖಿತ ದಾಖಲೆಗಳೊಂದಿಗೆ ಜಿಲ್ಲಾ ಸಂಘಕ್ಕೆ ಸಲ್ಲಿಸುವಂತೆ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ವಿವಿಧ ಇಲಾಖೆಗಳ ವೃಂದ ಸಂಘಗಳ ಪದಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನಿರಂತರ ಪ್ರಯತ್ನದಿಂದ ನಮ್ಮೆಲ್ಲರ ನಿರೀಕ್ಷೆಯ 7ನೇ ವೇತನ ಆಯೋಗವನ್ನು ಸರ್ಕಾರ ರಚಿಸಿ, ಅದು ಕಾರ್ಯನಿರ್ವಹಿಸಲು ಅಗತ್ಯವಾದ ಎಲ್ಲಾ ಸೌಲಭ್ಯ,ಸಿಬ್ಬಂದಿಯನ್ನು ಒದಗಿಸಿದ್ದು, ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಜಿಲ್ಲೆಯ ಸಮಸ್ತ ನೌಕರರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದೀಗ ವೇತನ ಆಯೋಗ ತನ್ನ ಕಾರ್ಯ ಆರಂಭಿಸಿದ್ದು, ಆಯೋಗದ ಮುಂದೆ ವಿವಿಧ ಇಲಾಖೆಗಳು ತಮ್ಮ ವೇತನ, ಭತ್ಯೆ ಮತ್ತಿತರ ಸಮಸ್ಯೆಗಳನ್ನು ಮಂಡಿಸಬೇಕಿದ್ದಲ್ಲಿ ಆಯಾ ಇಲಾಖೆಯ ವೃಂದ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಲಿಖಿತ ರೂಪದಲ್ಲಿ ಸಮಸ್ಯೆಗಳನ್ನು ಪಟ್ಟಿ ಮಾಡಿ ದಾಖಲೆಗಳೊಂದಿಗೆ ಡಿ.10ರ ಸಂಜೆ 6 ಗಂಟೆಯೊಳಗೆ ಜಿಲ್ಲಾ ಸಂಘಕ್ಕೆ ನೀಡುವಂತೆ ಅವರು ಕೋರಿದ್ದಾರೆ.