ಸರಕಾರಿ ಶಾಲೆಯಲ್ಲಿ ಓದಿದ್ದರಿಂದ ಜನರ ಕಷ್ಟ
ಅರಿಯಲು ಸಾಧ್ಯವಾಯಿತು-ಸಿಎಂಆರ್ ಶ್ರೀನಾಥ್

ಕೋಲಾರ:- ಸರಕಾರಿ ಶಾಲೆಯಲ್ಲಿ ಓದಿದ್ದರಿಂದಲೇ ತಮಗೆ ಸಮಾಜದ ವಿವಿಧ ವರ್ಗಗಳ ಜನರ ಕಷ್ಟ ಅರಿತುಕೊಳ್ಳಲು ಸಹಕಾರಿಯಾಯಿತೆಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ತಾಲೂಕಿನ ಮಣಿಘಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಸೆಂಟ್ರಲ್‍ವತಿಯಿಂದ ಬರೆಯುವ ಫಲಕಗಳನ್ನು ಬುಧವಾರ ಕೊಡುಗೆಯಾಗಿ ನೀಡಿ ಅವರು ಮಾತನಾಡುತ್ತಿದ್ದರು.
ವಿವಿಧ ವರ್ಗದ ಮಕ್ಕಳೊಂದಿಗೆ ಬೆರೆತು ಕಲಿಯುವ ಅವರ ನೋವು ನಲಿವಿನಲ್ಲಿ ಭಾಗಿಯಾಗುವ, ಕಷ್ಟ ಸುಖದಲ್ಲಿ ತೊಡಗಿಸಿಕೊಳ್ಳುವ ಸರಕಾರಿ ಶಾಲೆ ಮಕ್ಕಳು ಭಾಗ್ಯವಂತರೆಂದು ಅವರು ವಿವರಿಸಿದರು.
ಸರಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸ ಅನುಕೂಲಕ್ಕಾಗಿರೋಟರಿ ಸೆಂಟ್ರಲ್‍ವತಿಯಿಂದ ಡೆಸ್ಕ್ ಸೇರಿದಂತೆ ಮತ್ತಷ್ಟು ಕೊಡುಗೆಗಳನ್ನು ನೀಡುವುದಾಗಿ ಅವರು ಘೋಷಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಾ ಮಾತನಾಡಿ, ಮಣಿಘಟ್ಟ ಶಾಲೆಯಲ್ಲಿ ಬರೆಯುವ ಫಲಕಗಳ ಕೊರತೆಯನ್ನು ನೀಗಿದ ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್‍ರಿಗೆ ಧನ್ಯವಾದ ಹೇಳಿ, ಶಾಲಾ ಮಕ್ಕಳ ಅನುಕೂಲಕ್ಕಾಗಿ ರೋಟರಿ ಸೆಂಟ್ರಲ್‍ವತಿಯಿಂದ ಡೆಸ್ಕ್‍ಗಳನ್ನು ಕೊಡುಗೆಯಾಗಿ ನೀಡಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್, ರೋಟರಿ ಸೆಂಟ್ರಲ್ ಕಾರ್ಯದರ್ಶಿ ಎಸ್.ಸುಧಾಕರ್, ಜೆಡಿಎಸ್ ಜಿಲ್ಲಾ ಗೌರವಾಧ್ಯಕ್ಷ ಬಣಕನಹಳ್ಳಿ ನಟರಾಜ್ ಇತರರು ಹಾಜರಿದ್ದರು.