ಶ್ರೀನಿವಾಸಪುರ 1 : ನಮ್ಮ ರಾಷ್ಟ್ರದ ಪ್ರಜಾಸತ್ತೆಗೆ ಮೂಲಭೂತ ಅಡಿಪಾಯವಾಗಿರುವ ಭಾರತದ ಸೊಗಸಾದ ಸಂವಿಧಾನವನ್ನು ರಚಿಸಿರುವ ಮಾಹಾ ಪುರಷ ಎಂದು ತಹಶೀಲ್ದಾರ್ ಶರೀನ್‍ತಾಜ್ ಬಣ್ಣಿಸಿದರು.
ತಾಲೂಕು ಆಡಳಿತವತಿಯಿಂದ ಮಂಗಳವಾರ ನಡೆದ ಮಹಾಪರಿನಿರ್ವಾಣ ದಿನಾಚರಣೆಯ ಅಂಗವಾಗಿ ಪಟ್ಟಣದ ತಾಲೂಕು ಕಚೇರಿಯ ಮುಂಭಾಗದ ಆಂಬೇಡ್ಕರ್‍ರವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ನಮಗೆ ಸ್ವಾಭಿಮಾನದ ಸ್ವತಂತ್ರ ತಂದು ಕೊಟ್ಟಿರುವ ಡಾ. ಅಂಬೇಡ್ಕರ್ ಅವರಿಗೆ ಕೇವಲ ಪೂಜೆ ಸಲ್ಲಿಸಿದರೆ ಸಾಲದು. ನಾವು ಅವರ ತತ್ವಾದರ್ಶಗಳನ್ನು , ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಇಂದು ಆಚರಿಸುತ್ತಿರುವ ಮಹಾಪರಿನಿರ್ವಾಣ ದಿನಾಚರಣೆ ಅಚರಣೆಗೆ ಅರ್ಥ ಬರುತ್ತದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರರು ಅಸ್ಪøಶ್ಯರು ಮತ್ತು ಇತರ ಕೆಳ ಜಾತಿಗಳ ಸಮಾನತೆಗಾಗಿ ಹೋರಾಡಿ ಯಶಸ್ಸನ್ನು ಸಾಧಿಸಿದರು. ಅವರು ತಮ್ಮ ಸ್ವಾರ್ಥಕ್ಕಾಗಿ, ಸಾಮಾಜಿಕ ನ್ಯಾಯದ ತತ್ವ ನೀತಿಗಳಿಗೆ ಯಾವತ್ತೂ ತಿಲಾಂಜಲಿಯನ್ನೀಡಲಿಲ್ಲ. ಸಮಾಜಕ್ಕಾಗಿ, ದೇಶಕ್ಕಾಗಿ , ಬಡವರಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಮಹಾಪುರುಷ ಎಂದು ಹೇಳಿದರು.
ಪುರಸಭೆ ಸದಸ್ಯ ಎನ್‍ಎನ್‍ಆರ್.ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಹಾಗು ದಲಿತ ಮುಖಂಡರು ಉಪಸ್ಥಿತರಿದ್ದರು.