ಪ್ರತಿಯೊಬ್ಬರೂ ಡಾ. ಪುನೀತ್ ರಾಜ್‍ಕುಮಾರ್ ಅವರ ಆದರ್ಶ ಪಾಲಿಸಬೇಕು ಪಿ.ಎಸ್.ಐ. ಜೆ.ಸಿ.ನಾರಾಯಣಸ್ವಾಮಿ

ಶ್ರೀನಿವಾಸಪುರ: ಪ್ರತಿಯೊಬ್ಬರೂ ಡಾ. ಪುನೀತ್ ರಾಜ್‍ಕುಮಾರ್ ಅವರ ಆದರ್ಶ ಪಾಲಿಸಬೇಕು ಎಂದು ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಜೆ.ಸಿ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಮೀಪ ಡಾ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಶನಿವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪುನೀತ್ ರಾಜ್‍ಕುಮಾರ್ ನೆನಪಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ ಎಂದು ಹೇಳಿದರು.
ಪುನೀತ್ ರಾಜ್‍ಕುಮಾರ್ ಅವರ ಸ್ಮರಣಾರ್ಥ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಅನ್ನ ಸಂತರ್ಪಣೆ ಮುಂತಾದ ಸಮಾಜ ಮುಖಿ ಚಟುವಟಿಕೆ ಕೈಗೊಳ್ಳಲಾಗಿದೆ. ಇಂಥ ಸೇವಾ ಪ್ರವೃತ್ತಿ ಗರಿಗೆದರಬೇಕು. ಕನ್ನಡ ಗಡಿ ಭಾಗದ ಜನರ ಆಡು ಭಾಷೆಯಾಗಬೇಕು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಕನ್ನಡ ಧ್ವಜಾರೋಹಣ ಮಾಡಿದರು. ಪುರಸಭೆ ಮುಖ್ಯಾಧಿಕಾರಿ ಎಂ.ಜಯರಾಂ, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಶ್ರೀನಿವಾಸ್, ಸಾಹಿತಿ ಆರ್.ಚೌಡರೆಡ್ಡಿ, ಆವಲಕುಪ್ಪ ಬಾಬು, ತಾಲ್ಲೂಕು ಡಾ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಸ್.ಎಂ.ಶ್ರೀನಿವಾಸ್, ಬಳಗದ ಪದಾಧಿಕಾರಿಗಳಾದ ಎಸ್.ವಿ.ಚಂದ್ರಶೇಖರ್, ಶ್ರವಣ್, ಪಿ.ಶ್ರೀನಿವಾಸಲು, ಡಿ.ಎಸ್.ಕಾರ್ತಿಕರ್, ಎನ್.ಮುನಿರಾಜು, ವಿ.ಮಂಜುನಾಥ್, ಎಸ್.ವೇದಾಂತ್, ಎಸ್.ಬಾಬು, ಮದನ್ ಮೋಹನ್, ನಾರಾಯನಮೂರ್ತಿ, ಯಾಹ್ಯಾಖಾನ್, ಶ್ರೀನಿವಾಸ, ಹೈದರವಲ್ಲಿ, ಹರೀಶ್, ಕೆ.ರಾಮಣ್ಣ, ಜಿ.ಆರ್.ರೆಡ್ಡಪ್ಪ, ಬಿ.ಎಂ.ಪ್ರವೀಣ್ ಕುಮಾರ್, ಎಸ್.ವಿ.ಕಾರ್ತಿಕ್ ಇದ್ದರು.
ಸಂಜೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.