ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಜನರಲ್ಲಿ ಜೀವ ವಿಮೆ ಅಗತ್ಯ ಕುರಿತು ಅರಿವು ಮೂಡಿಸಬೇಕು:ಸಿದ್ದೇಶ್

ಶ್ರೀನಿವಾಸಪುರ: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಜನರಲ್ಲಿ ಜೀವ ವಿಮೆ ಅಗತ್ಯ ಕುರಿತು ಅರಿವು ಮೂಡಿಸಬೇಕು. ವಿಮೆ ಮಾಡಿಸುವಂತೆ ಪ್ರೇರೇಪಿಸಬೇಕು ಎಂದು ಜಿಲ್ಲಾ ಎಲ್‌ಐಸಿ ಶಾಖೆ ವ್ಯಸ್ಥಾಪಕ ಸಿದ್ದೇಶ್ ಹೇಳಿದರು.
ಪಟ್ಟಣದ ಎಲ್‌ಐಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಎಲ್‌ಐಸಿ ಪ್ರತಿನಿಧಿಗಳ ಮಾತನಾಡಿದ ಅವರು, ಆರೋಗ್ಯ ವಿಮಾ ಸೌಲಭ್ಯ ಜನಾರೋಗ್ಯ ಕ್ಷೇತ್ರದಲ್ಲಿ ಮಹತ್ವ ಪಡೆದಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಜೀವ ವಿಮೆ ಮಾಡಿಸುವ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾದ ಅಗತ್ಯವಿದೆ. ಆರ್ಥಿಕ ಸಮಸ್ಯೆಗಳು ಗ್ರಾಮೀಣರನ್ನು ಕಾಡುತ್ತಿವೆ. ಅದಕ್ಕೆ ವಿಮಾ ಪಾಲಿಸಿ ಪರಿಹಾರವಾಗಬಲ್ಲದು. ಎಲ್‌ಐಸಿ ಅತ್ಯುತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಪೂರ್ಣ ಪ್ರಯೋಜನ ಅರ್ಹರಿಗೆ ದೊರೆಯುವಂತೆ ಮಾಡಲು ಪ್ರಿನಿಧಿಗಳು ಶಮವಹಿಸಬೇಕು ಎಂದು ಹೇಳಿದರು.
ತಾಲ್ಲೂಕು ಎಲ್‌ಐಸಿ ಶಾಖಾ ವ್ಯವಸ್ಥಾಪಕ ಎಸ್.ವಿ.ಪ್ರಸಾದ್, ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಆರ್.ಕುಲಕರ್ಣಿ ಎಲ್‌ಐಸಿ ಪ್ರಯೋಜನ ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಾತನಾಡಿದರು. ನಿಗಮದ ಪ್ರತಿನಿಧಿಗಳು ಇದ್ದರು.