‘ಕ್ಯಾನ್ಸರ್ ಅರಿವು ಶಿಬಿರ”ವು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಕಾರ್ಕಿನೋಸ್ ಹೆಲ್ತ್ ಕೇರ್ ಸೆಂಟರ್ ನ ಡಾ. ಪ್ರಶಾಂತ ನಡೆಸಿಕೊಟ್ಟರು.
ರೋಟರಿ ಕುಂದಾಪುರ ದಕ್ಷಿಣ, ಇನ್ನರ್ ವ್ಹೀಲ್ ಕ್ಲಬ್ ಕುಂದಾಪುರ ದಕ್ಷಿಣ ಹಾಗೂ ಚಿನ್ಮಯಿ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚಿನ್ಮಯಿ ಆಸ್ಪತ್ರೆಯ ಆಡಳಿತ ಪಾಲುದಾರರಾದ ಶ್ರೀ ರಾಜೇಂದ್ರ ಕಟ್ಟೆ, ರೋಟರಿ ಸಹಾಯಕ ಗವರ್ನರ್ ರೋ.ಡಾ. ಉಮೇಶ ಪುತ್ರನ್, ರೋಟರಿ ಅಧ್ಯಕ್ಷ ರೋ. ಸತ್ಯನಾರಾಯಣ ಪುರಾಣಿಕ, ಇನ್ನರ್ ವ್ಹೀಲ್ ಅಧ್ಯಕ್ಷೆ ಸುಮಾ ಪುತ್ರನ್ ಹಾಗೂ ಡಾ. ತನ್ಮಯಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್, ತಲ್ಲೂರು ರೋಟರಿ ಸಮುದಾಯ ದಳದ ಸದಸ್ಯರು, ಇನ್ನರ್ ವ್ಹಿಲ್ ಕ್ಲಬ್ಬಿನ ಸದಸ್ಯೆಯರು, ಕುಂದಾಪುರದ ನಾಗರಿಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.