ಸಂತ ಸೆಬಾಸ್ಟಿಯನ್ ಆಡಿಟೋರಿಯಂ ಉದ್ಘಾಟನೆ: ನಂಬಿಕೆಯಿಂದ ಎಲ್ಲವೂ ಸಾಧ್ಯ – ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮ್ಯಾಕ್ಸಿಂ ನೊರೊನ್ಹಾ,  ಇವರ ಪ್ರಧಾನ ಯಾಜಕತ್ವದಲ್ಲಿ ಕೃತಜ್ಞತಾ ಬಲಿದಾನದ ಮೂಲಕ ಸೇಂಟ್ ಸೆಬಾಸ್ಟಿಯನ್ ಆಡಿಟೋರಿಯಂ ಉದ್ಘಾಟನ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ನೂತನವಾಗಿ ನಿರ್ಮಿಸಿದ ಹೈ ಮಾಸ್ಕ್ ದೀಪವನ್ನು ವಿಕಾರ್ ಜನರಲ್ ಮ್ಯಾಕ್ಸಿಂ ನೊರೊನ್ಹಾ ಉದ್ಘಾಟಿಸಿದರು.  

ಬಳಿಕ ನೂತನವಾಗಿ ನಿರ್ಮಿಸಲಾದ ಸಂತ ಸೆಬಾಸ್ಟಿಯನ್ ಸಭಾಂಗಣವನ್ನು ಖ್ಯಾತ ವೈದ್ಯ ಡಾ.ಯು.ಸಿ.ಎಸ್. ಭಟ್ ಇವರು ನ. 1 ರಂದು ಉದ್ಘಾಟಿಸಿದರು.  ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್ ಆವರಣದಲ್ಲಿ ನಡೆದ ಉದ್ಘಾಟನ ಸಮಾರಂಭದ ಅಧ್ಯಕ್ಷರಾದ ಮಂಗಳೂರಿನ ಧರ್ಮಾಧ್ಯಕ್ಷರಾದ ಅ| ವಂ| ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸಭಾಂಗಣವನ್ನು ಆಶೀರ್ವದಿಸಿ  “ಈ ಸಭಾಂಗಣ ದೇವರ ಕೃಪೆ, ನಂಬಿಕೆ ಮತ್ತು ಪ್ರೀತಿಯ ಫಲವಾಗಿದೆ, ಇದು ಧಾರ್ಮಿಕತೆಯ ಏಕತೆಗೆ ಸಾಕ್ಷಿಯ ಪೂರಕವಾಗಿದ್ದು, ಇದೊಂದು ದೇವರ ಅನುಗ್ರಹ ಆಗಿದೆ ‘ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ, ನಂಬಿಕೆಯಿಂದ ಎಲ್ಲವೂ ಸಾಧ್ಯ, ಈ ಸಭಾಂಗಣವು ನಂಬಿಕೆಯ ದೊಡ್ಡ ಸಂಕೇತವಾಗಿದೆ’ ಎಂದು ಅವರು ಸಂದೇಶ ನೀಡಿದರು

ಶ್ರೀ ಯು.ಟಿ.ಖಾದರ್ ಶಾಸಕರು, ಮಂಗಳೂರು ಕ್ಷೇತ್ರ, ವಿರೋಧ ಪಕ್ಷದ ಉಪನಾಯಕ,ಮುಖ್ಯ ಅತಿಥಿಗಳಾಗಿದ್ದರು, ಮಂಗಳೂರು ನಗರ ದಕ್ಷಿಣ ಕರ್ನಾಟಕ ವಿಧಾನಸಭಾ ಸದಸ್ಯರಾದ ಶ್ರೀ ಡಿ.ವೇದವ್ಯಾಸ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕರಿಗೆ ಹಾಗೂ ಡಾ.ಯು.ಸಿ.ಎಸ್ ಭಟ್ ಅವರ ಕುಟುಂಬದವರಿಗೆ ಬಿಷಪ್ ಸನ್ಮಾನಿಸಿದರು.

   ಬಿಜೈ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚಿನ ಧರ್ಮಗುರು ಬಿ.ಸಲ್ಡಾನ್ಹಾ, ಧಾರ್ಮಿಕ ಮುಖಂಡರಾದ ಶ್ರೀ ಚಂದ್ರಹಾಸ್ ಮತ್ತು ಹಾಜಿ ರಶೀದ್ ಹಾಗೂ ಉಳ್ಳಾಲ ಪುರಸಭಾ ಅಧ್ಯಕ್ಷರಾದ ಶ್ರೀಮತಿ ಚಿತ್ರಕಲಾ ಚಂದ್ರಕಾಂತ್, ಪುರಸಭಾ ಸದಸ್ಯರಾದ ಶ್ರೀ ಬಾಸಿಲ್ ಡಿಸೋಜ ಮತ್ತು ಶ್ರೀಮತಿ ವೀಣಾ ಡಿಸೋಜ, ಬೆತೆಲ್ ಕಾನ್ವೆಂಟ್ ಪೆರ್ಮನ್ನೂರು ಇದರ ಮುಖ್ಯಸ್ಥೆ  ಸಿಸ್ಟರ್ ಜೋಸೆಫ್ ಮೇರಿ ಬಿಎಸ್ ಮತ್ತು ನಿರ್ಮಲ ಕಾನ್ವೆಂಟ್ ಮುಖ್ಯಸ್ಥೆ  ಸಿಸ್ಟರ್ ಅಲ್ಫೋನ್ಸಾ ಕಾರ್ಯಕ್ರಮದಲ್ಲಿ  ಉಪಸ್ಥಿತಿರಿದ್ದರು. ಈ ಸಂದರ್ಭದ ನೆನಪಿಗಾಗಿ ಆಡಿಟೋರಿಯಂ ಸ್ಮರಣಿಕೆಯನ್ನು ಬಿಡುಗಡೆ ಮಾಡಲಾಯಿತು. ಅದೃಷ್ಟ ಕೂಪನ್ ಡ್ರಾ ಮಾಡಲಾಯಿತು. ಚರ್ಚಿನ ವಾಳೆಯ ಗುರಿಕಾರರಿಗೆ, ದಾನಿಗಳಿಗೆ, ಹಾಗೂ ಸಹಾಯ ಮಾಡಿದ ಎಲ್ಲರಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸೇಂಟ್ ಸೆಬಾಸ್ಟಿಯನ್ ಚರ್ಚಿನ  ಧರ್ಮಗುರು ವಂ| ಸಿಪ್ರಿಯನ್ ಪಿಂಟೋ  ಪ್ರೀತಿ ಪೂರ್ವಕವಾಗಿ  ಸ್ವಾಗತಿಸಿದರು.

    ಚರ್ಚಿನನ  ಉಪಾಧ್ಯಕ್ಷ ಶ್ರೀ ಮೌರಿಸ್ ಮೊಂತೆರೊ ಧನ್ಯವಾದಗಳನ್ನು ಅರ್ಪಿಸಿದರು. ಶ್ರೀ ರೊನಾಲ್ಡ್ ಫೆರ್ನಾಂಡಿಸ್ ಮತ್ತು ಶ್ರೀಮತಿ ಸಿಂಥಿಯಾ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು. ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.