ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯ ತಿಥಿ ಹಾಗೂ ದೇಶದ ಪ್ರಥಮ ಗೃಹ ಸಚಿವ ಸರದಾರ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನಾಚರಣೆ

ಕುಂದಾಪುರ, ಅ.31: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯ ತಿಥಿ ಹಾಗೂ ದೇಶದ ಪ್ರಥಮ ಗೃಹ ಸಚಿವ ಸರದಾರ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನಾಚರಣೆ ಆಚರಿಸಲಾಯಿತು.

“ಸ್ವತಂತ್ರ ಭಾರತದ ಇತಿಹಾಸದಲ್ಲಿ ಕ್ರಾಂತಿಕಾರಕವಾದ ಉಳುವವನೆ ಹೊಲದೊಡೆಯ ಕಾನೂನನ್ನು ಜಾರಿಗೊಳಿಸುವ ಮೂಲಕ ದೇಶದ ಕಟ್ಟ ಕಡೆಯ ಕೃಷಿಕಾರ್ಮಿಕನಿಗೆ ಭೂಮಿಯ ಹಕ್ಕನ್ನು ನೀಡುವ ಮೂಲಕ ಮತ್ತು ಶ್ರೀಮಂತ ವರ್ಗಕ್ಕಷ್ಟೆ ಸೀಮಿತವಾಗಿದ್ದ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣದ ಮಾಡುವ ಮೂಲಕ ದೇಶದ ಸಾಮಾನ್ಯ ಜನತೆಗೆ ಬ್ಯಾಂಕಿನ ಸಾಲ ಮತ್ತಿತರ ಸೌಲಭ್ಯಗಳು ದೊರೆಯುವಂತಹ ವಾತಾವರಣ ನಿರ್ಮಸಿದವರು ಇಂದಿರಾಗಾಂಧಿಯವರು, ಸಿಖ್ ಉಗ್ರಗಾಮಿಗಳ ವಿರುದ್ಧದ ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆ ದೇಶದ ಸಮಗ್ರತೆಗಾಗಿ ತಗೆದುಕೊಂಡ ನಿರ್ಧಾರ ತೆಗೆದುಕೊಂಡ್ಡದ್ದು ಇಂದಿರ ಗಾಂಧಿಯವರದು. ಆದರೆ ದುರಾದೃಷ್ಟವಶಾತ್ ಅವರು ಅದೇ ಸಿಖ್ ಭಯೋತ್ಪಾದಕರ ಗುಂಡಿಗೆ ಬಲಿಯಾದದ್ದು ಸ್ವತಂತ್ರ ಭಾರತಕ್ಕಾದ ಬಹುದೊಡ್ಡ ನಷ್ಟ.

ಹಾಗೇ ಜವಹರಲಾಲ್ ನೆಹರೂ ಸಂಪುಟದ ದೇಶದ ಮೊದಲ ಗೃಹ ಸಚಿವ, ಮಾಜಿ ಉಪ ಪ್ರದಾನಿ, ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಸರ್ಧಾರ್ ವಲ್ಲಭಭಾಯಿ ಪಟೇಲರು ದೇಶದಾದ್ಯಂತ ಚಿಕ್ಕಚಿಕ್ಕ ರಾಜ್ಯಗಳಾಗಿ ಹಂಚಿ ಹೋಗಿದ್ದ ಐನೂರಕ್ಕೂ ಹೆಚ್ಚು ರಾಜ ಸಂಸ್ಥಾನಗಳ ಅರಸರ ಮನಒಲಿಸಿ ನವ ಭಾರತ ನಿರ್ಮಿಸುವಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಚಾಚಾ ನೆಹರೂ ರವರ ಜೊತೆ ಸೇರಿ ಶ್ರಮಿಸಿದ್ದು ಅದು ಅವರು ಈ ದೇಶಕ್ಕೆ ನೀಡಿರುವ ಬಹುದೊಡ್ಡ ಕೊಡುಗೆ ಮತ್ತು ಅವರು ಗಾಂಧಿ ಹತ್ಯೆಯ ನಂತರ ಹಂತಕ ನಾಥೂರಾಮ್ ಘೋಡ್ಸೆಯ ಮಾತೃಸಂಸ್ಥೆ ಎನ್ನಲಾದ ಆರೆಸ್ಸೆಸ್ ಅನ್ನು ನಿಷೇಧಿಸಿದ್ದರು ಮತ್ತು ಆ ಮೂಲಕ ದೇಶದ ಭವಿಷ್ಯಕ್ಕೆ ಉಂಟಾಗಬಹುದಾದ ಅಪಾಯವನ್ನು ಅಂದೇ ಊಹಿಸಿದ್ದರು.” ಎಂದು ಭೂ ಅಭಿವೃದ್ಧಿ ಬ್ಯಾಂಕ್ ಕುಂದಾಪುರ ಇದರ ಅಧ್ಯಕ್ಷ, ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಯಾಡಿ ಶಿವರಾಮ ಶೆಟ್ಟಿ ಯವರು ಹೇಳಿದರು.

ಅವರು ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿ ‘ಇಂದಿರಾ ಪ್ರಿಯದರ್ಶಿನಿ’ ಇಲ್ಲಿ ನಡೆದ ಇಂದಿರಾ ಗಾಂಧಿ ಪುಣ್ಯತಿಥಿ ಮತ್ತು ಸರ್ಧಾರ್ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರಸಿಗ ಕಾಳಪ್ಪ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕಾಸ ಹೆಗಡೆ, ಕಾಂಗ್ರೆಸ್ ಐ.ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಪ್ರಭಾವತಿ ಶೆಟ್ಟಿ, ಲಕ್ಷ್ಮೀಬಾಯಿ, ಕೋಡಿ ಅಶ್ವಕ್, ಯುವ ಕಾಂಗ್ರೆಸ್‌ನ ಮುನಾಫ್ ಕೋಡಿ, ಧರ್ಮಪ್ರಕಾಶ್, ರೇವತಿ ಶೆಟ್ಟಿ, ಗಂಗಾಧರ ಶೆಟ್ಟಿ, ಸುಭಾಷ್ ಪೂಜಾರಿ, ಆಶಾ ಕರ್ವಾಲೋ , ಕೇಶವ ಭಟ್, ವಿಜಯಧರ್ ಕೆ ವಿ, ಅಶೋಕ್ ಸುವರ್ಣ, ರೋಷನ್ ಬರೆಟ್ಟೊ, ಗಣಪತಿ ಶೇಟ್, ಸತೀಶ್ ಶೆಟ್ಟಿ ಶೇಡಿಮನೆ, ನರಸಿಂಹ ಪೂಜಾರಿ, ಗೌರವ ಹಲ್ಸನಾಡ್, ರಾಮ ಪೂಜಾರಿ, ಅಭಿಜಿತ್ ಪೂಜಾರಿ, ರಾಕೇಶ ಶೆಟ್ಟಿ, ಕುಮಾರ ಖಾರ್ವಿ, ಸದಾನಂದ ಖಾರ್ವಿ, ವಿಠಲ್ ಕಾಂಚನ್, ಎಡೋಲ್ಪ್ ಡಿಕೋಸ್ಟ, ಕೆ. ಸಚಿನ್ ಕುಮಾರ್, ಜೋಸೆಫ್ ರೆಬೆಲ್ಲೊ, ಸುಜನ್ ಶೆಟ್ಟಿ, ವಿವೇಕಾನಂದ, ವೇಣುಗೋಪಾಲ, ಸವಿತಾ, ಮೌರಿಸ್ ಕರ್ವಾಲೋ, ಚಂದ್ರ ಪೂಜಾರಿ, ಸಂದೇಶ ಶೆಟ್ಟಿ, ಸಂಗೀತಾ ಮುಂತಾದವರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಕಾರ್ಯಕ್ರಮವನ್ನು ನಿರೂಪಿಸಿದರು. ಚಂದ್ರಶೇಖರ ಖಾರ್ವಿ ಸ್ವಾಗತಿಸಿ, ಸುನಿಲ್ ಪೂಜಾರಿ ವಂದಿಸಿದರು.