ಮಂಗಳೂರು: ಸ್ನೇಹಾಲಯ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಛೇರಿಯನ್ನು ಮಂಗಳೂರು ಬೆಂದೂರಿನ ಲೋಟೊಸ್ ಪ್ಲಾಜದಲ್ಲಿ ಮೂಡಬಿದ್ರಿಯ ಆಳ್ವಾಸ್ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಕುಮಾರಿ ಸಬಿತಾಮೋನಿಸ್ ಗೌರವಾನ್ವಿತ ಅತಿಥಿಗಳಾದ .ಡಾ.ವಸಂತ ಕುಮಾರ್ ಶೆಟ್ಟಿ ನಿರ್ದೇಶಕರು ಸಾನಿಧ್ಯ ಸಂಸ್ಥೆ, ಶ್ರೀ.ರಫೀಕ್ ಮಾಸ್ಟರ್, ಶ್ರೀ ಅವಲೋನ್ ತ್ರಾವೋ ಅವರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಉದ್ಘಾಟಿಸಿದರು. ಸೇಂಟ್ ಸಾಬಾಸ್ಟಿಯನ್ ರ್ಚ್‌ಚಿನ ಧರ್ಮಗುರುಗಳಾದ ರೆ.ಫಾ. ವಿನ್ಸೆಂಟ್ ಮೊಂತೆರೋ ಬೆಂದೂರಿನ ನೂತನ ಸ್ನೇಹಾಲಯ ದಪ್ರಧಾನ ಕಛೇರಿಯ ಆಶೀರ್ವಚನ ಕಾರ್ಯಕ್ರಮವನ್ನು ನೆರವೇರಿಸಿದರು. ಕಚೇರಿಯ ನಾಮಫಲಕ ಅನಾವರಣವನ್ನು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀನವೀನ್ ಡಿಸೋಜಾ ಬೊಂದೇಲ್ ಚರ್ಚಿನ ಧರ್ಮಗುರುಗಳಾದರೆ.ಫಾ. ಆಂಡ್ರ್ಯೂ ಲಿಯೋ ಡಿಸೋಜರವರು ನೆರವೇರಿಸಿದರು.
ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಕುಮಾರಿ ಸಬಿತಾ ಮೋನಿಸ್ ಅವರ ಅಸಾಧರಣ ಹಾಗೂ ಮೇರು ವ್ಯಕ್ತಿತ್ವವನ್ನು ಗುರುತಿಸಿ ಅವರ ವಿಶಿಷ್ಟ ಸಾಧನೆಗಳಿಗಾಗಿ ಎಲ್ಲಾ ಅತಿಥಿಗಳ ಉಪಸ್ಥಿಯಲ್ಲಿ ಗೌರವಿಸಿತು. ಅನೇಕ ಹಿತೈಷಿಗಳ ಹಾಗೂ ಆಮಂತ್ರಿತ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಲಭ್ಯತೆಯನ್ನುಖಾತ್ರಿಪಡಿಸಿ ಉತ್ತೇಜನ ನೀಡಿದರು. ಸಹೋದರ ಜೋಸೆಫ್ ಕ್ರಾಸ್ತಾ ಅವರು ಸಲ್ಲಿಸಿದ ಮಾನವೀಯ ಸೇವೆಗಳನ್ನು ಗೌರವಾನ್ವಿತ ಅತಿಥಿಗಳು ಪ್ರಶಂಸಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು . ಶ್ರೀಮತಿ ಒಲಿವಿಯಾ ಕ್ರಾಸ್ತಾ ಸ್ನೇಹಾಲಯದ ಟ್ರಸ್ಟಿ ಹಾಗೂ ಸೆಕ್ರೆಟರಿಯವರು ಎಲ್ಲಾಅತಿಥಿಗಳಿಗೆ ಮತ್ತು ಸ್ನೇಹಾಲಯವು ಸಲ್ಲಿಸುತ್ತಿರುವ ಎಲ್ಲಾ ಸೇವೆಗಳಿಗೆ ನಿರಂತರವಾಗಿ ಬೆಂಬಲ ನೀಡಿದ ಹಿತೈಷಿಗಳಿಗೆ ಕೃತಜ್ಞತೆಯ ಮಾತುಗಳನ್ನು ವ್ಯಕ್ತಪಡಿಸಿದರು.