ಕುಂದಾಪುರ:ಸೆಕ್ಯುಲರ್ ಸಂತ ಫ್ರಾನ್ಸಿಸ್ಕನ್ ಸಭಾದಿಂದ ಸಂತ ಫ್ರಾನ್ಸಿಸ್ ಆಸೀಸಿಯವರ ಹಬ್ಬದ ಆಚರಣೆ


ಕುಂದಾಪುರ, ಅ.9: ಕುಂದಾಪುರ ರೋಜರಿ ಚರ್ಚಿನ ಸಂತ ಫ್ರಾನ್ಸಿಕನ್ ಸಭಾದಿಂದ ಸಂತ ಫ್ರಾನ್ಸಿಸ್ ಆಸೀಸಿಯವರ ಹಬ್ಬದ ಆಚರಣೆಯನ್ನು ಮಾಡಿತು.ಮೊದಲಿಗೆ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ನೇತ್ರತ್ವದಲ್ಲಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದ ತರುವಾಯ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ “ಸಂತ ಫ್ರಾನ್ಸಿಸ್ ಆಸೀಸಿ ಶ್ರೀಮಂತರಾದರೂ, ಬಹಳ ಬಡತನವನ್ನು ಆರಿಸಿ ಜೀವಿಸಿದರು. ತನ್ನದೆಲ್ಲವನ್ನು ಬಡವರಿಗೆ ಹಂಚಿದ ಸರಳ ಜೀವಿ, ವಿನಯತೆಯಿಂದ ಅವರು ಜೀವಿಸಿದವರು, ಅದರಂತೆ ಸೆಕ್ಯುಲರ್ ಸಂತ ಫ್ರಾನ್ಸಿಕನ್ ಸಭಾದವರು ಜೀವಿಸಬೇಕು’ ಎಂದು ಸಂದೇಶ ನೀಡಿದರು. ಫಾ|ಸ್ಟ್ಯಾನಿ ತಾವ್ರೊ “ಸಂತ ಫ್ರಾನ್ಸಿಸ್ ಆಸೀಸಿ ಒರ್ವ ಪ್ರಕ್ರತಿ ಪ್ರೇಮಿ, ಅವರು ಮರ ಗೀಡ ಕಾಡುಗಳನ್ನು ಪ್ರೀತಿಸಿದರು, ಮನುಷ್ಯರನ್ನು ಮಾತ್ರವಲ್ಲ, ಪ್ರಾಣಿ ಪಕ್ಷಿಗಳನ್ನು ಅವರು ಪ್ರೀತಿಸಿದರು, ಅವರು ಶ್ರೀಮಂತ ಕುಟುಂಬದವರು, ಆದರೂ ಅವರು ಬಡವರನ್ನು ಪ್ರೀತಿಸಿದರು, ಆಗಿನ ಕಾಲದಲ್ಲಿ ಬಹಳ ಅಪಾಯಕಾರಿಯಾದ ಕುಷ್ಟ ರೋಗಿಗಳನ್ನು ಅವರು ಆರೈಕೆ ಮಾಡಿದ ಸಂತರವರು” ಎಂದು ತಿಳಿಸಿದರು.ಪಾಲನ ಮಂಡಳಿ ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂಡಿಸ್ ಶುಭ ಕೋರಿದರು. ಒಳಾಂಗಿಣ ಆಟಗಳಲ್ಲಿ ಗೆದ್ದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು.
ಅಧ್ಯಕ್ಷೆ ಡಾ|ಸೋನಿ ಡಿಕೋಸ್ತಾ ಸ್ವಾಗತಿಸಿದರು. ಕಾರ್ಯದರ್ಶಿ ಮರಿಯಾ ಬರೆಟ್ಟೊ ವರದಿ ವಾಚಿಸಿದರು. ಉಪಾಧ್ಯೆಕ್ಷೆ ಆಲಿಸ್ ಬಾಂಜ್ ವಂದಿಸಿದರು. ಡಾಯಾನಾ ಡಿಆಲ್ಮೇಡಾ ವಂದಿಸಿದರು
.